AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವರಿಬ್ಬರೂ ಜೀವದ ಗೆಳೆಯರು.. 25 ವರ್ಷದಿಂದ ದಿನಾ ಒಂದೇ ಮಾದರಿಯ ಮ್ಯಾಚಿಂಗ್​ ಬಟ್ಟೆ ಧರಿಸುತ್ತಿದ್ದಾರೆ! ವಿಶೇಷ ಏನು ಗೊತ್ತಾ?

ಈ ಕುಚಿಕು ಗೆಳೆಯರು ಮಂದೆ ಅಕ್ಕಪಕ್ಕದ ಮನೆಗಳಲ್ಲೇ ವಾಸವಾಗತೊಡಗಿದರು. 2003ರಲ್ಲಿ ಒಂದು ಸೈಟ್ ತೆಗೆದುಕೊಂಡು ಅಕ್ಕಪಕ್ಕ ಮನೆಗಳನ್ನು ಕಟ್ಟಿಕೊಂಡು ಅದರಲ್ಲೇ ವಾಸಿಸತೊಡಗಿದರಂತೆ! ತಮ್ಮ ತಮ್ಮ ಮಹಿಳೆಯರಿಗೆ ಒಂದೇ ಮಾದರಿಯ ಬಟ್ಟೆ ಸಿಗುವುದು ಕಷ್ಟವಾದಾಗ ಅದನ್ನು ಕೈಬಿಟ್ಟರು. ಹಾಗಾಗಿ ಮನೆ ಮಂದಿಯೆಲ್ಲಾ ಏಕ ರೂಪದ ಬಟ್ಟೆ ತೊಡುವ ಪದ್ಧತಿಯಿಂದ ದೂರ ಉಳಿದೆವು.

ಅವರಿಬ್ಬರೂ ಜೀವದ ಗೆಳೆಯರು.. 25 ವರ್ಷದಿಂದ ದಿನಾ ಒಂದೇ ಮಾದರಿಯ ಮ್ಯಾಚಿಂಗ್​ ಬಟ್ಟೆ ಧರಿಸುತ್ತಿದ್ದಾರೆ! ವಿಶೇಷ ಏನು ಗೊತ್ತಾ?
ಇವರಿಬ್ಬರೂ ಜೀವದ ಗೆಳೆಯರು.. 25 ವರ್ಷಗಳಿಂದ ಪ್ರತಿ ದಿನಾ ಒಂದೇ ಮಾದರಿಯ ಮ್ಯಾಚಿಂಗ್​ ಬಟ್ಟೆ ಧರಿಸುತ್ತಿದ್ದಾರೆ!
TV9 Web
| Updated By: ಸಾಧು ಶ್ರೀನಾಥ್​|

Updated on:Aug 06, 2021 | 12:01 PM

Share

ಅವರಿಬ್ಬರೂ ಕುಚಿಕು ಗೆಳೆಯರು, ಜೀವದ ಗೆಳೆಯರು.. 25 ವರ್ಷಗಳಿಂದ ಒಂದೇ ಮಾದರಿಯ ಮ್ಯಾಚಿಂಗ್​ ಬಟ್ಟೆ ಧರಿಸುತ್ತಿದ್ದಾರೆ! ಅದರಲ್ಲಿನ ವಿಶೇಷ ಏನು ಅಂದ್ರೆ.. ಸುಮಾರು 25 ವರ್ಷಗಳ ಹಿಂದೆ ಅವರಿಬ್ಬರೂ ಟೈಲರಿಂಗ್ ಮಾಡಿಕೊಂಡು ಪ್ರತ್ಯೇಕವಾಗಿ ಜೀವನ ಕಟ್ಟಿಕೊಳ್ಳುತ್ತಿದ್ದರು. ಆ ಮೇಲೆ ಅದೊಮ್ಮೆ ಸುಸಂಧಿಯಲ್ಲಿ ಭೇಟಿಯಾದವರೆ ಬೇರೆ ವೃತ್ತಿ ನಡೆಸಿಕೊಂಡು ಹೋಗುವುದು ಏಕೆ? ಒಟ್ಟಿಗೇ ನಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಬಹುದಲ್ವಾ ಎಂದು ಆಲೋಚಿಸಿ, ಅದನ್ನು ಕಾರ್ಯರೂಪಕ್ಕೆ ತಂದರು. ಹಾಗೆ ಒಂದಾದವರೆ ರವೀಂದ್ರನ್ ಪಿಳೈ (Raveendran Pillai) ಮತ್ತು ಉದಯಕುಮಾರ್ (Udayakumar). ಮುಂದೆ ಪಿ.ಕೆ. ಟೈಲರ್ಸ್​ ಎಂಬ ಹೆಸರಿನಲ್ಲಿ ಕೇರಳದಲ್ಲಿ ಮನೆಮಾತಾದರು. ಹೇಗೆ ಅಂದರೆ…

ಅಳಪ್ಪುಝಾ ಜಿಲ್ಲೆಯ ಕಾಯಂಕುಳಂ ಪಟ್ಟಣದಲ್ಲಿ ವಾಸವಿದ್ದ ರವೀಂದ್ರನ್ ಪಿಳೈ ಮತ್ತು ಉದಯಕುಮಾರ್ 1982ರಲ್ಲಿ ಮೊದಲ ಬಾರಿಗೆ ಕಾಮನ್​ ಫ್ರೆಂಡ್​ ಮೂಲಕ ಪರಸ್ಪರ ಭೇಟಿಯಾಗಿದ್ದರು.

ಅದಾದ ಬಳಿಕ 25 ವರ್ಷಗಳಿಂದೀಚೆಗೆ ತಮ್ಮ ವೃತ್ತಿ ಮೇಲಿನ ವ್ಯಾಮೋಹ ಮತ್ತು ಪರಸ್ಪರ ಸ್ನೇಹದಿಂದಾಗಿ ಒಂದೇ ಆದರಿಯ ಬಟ್ಟೆಗಳನ್ನು ಧರಿಸತೊಡಗಿದರು. ಬಟ್ಟೆಯ ಬಣ್ಣ ಅಷ್ಟೇ ಅಲ್ಲ, ಒಂದೇ ಬಟ್ಟೆ ಮೆಟೀರಿಯಲ್, ಒಂದೇ ಮಾದರಿಯ ಸ್ಟಿಚ್ ಇರುವ ಡ್ರೆಸ್​​ ಧರಿಸತೊಡಗಿದರು. ಇದುವರೆಗೂ ಹಳದಿ ಬಣ್ಣದ ಬಟ್ಟೆಯನ್ನು ಇವರು ತೊಟ್ಟಿಲ್ಲವಂತೆ! ಅಂದಹಾಗೆ ​ಉದಯಕುಮಾರ್ ಅವರು ರವೀಂದ್ರನ್ ಪಿಳೈಗಿಂತ 2 ವರ್ಷ ಚಿಕ್ಕವರು.

ಮೊದಲ ಭೇಟಿಯ 6 ವರ್ಷಗಳ ತರುವಾಯ 1988 ರಲ್ಲಿ ಅದುಹೇಗೋ ನಾವಿಬ್ಬರೂ ಒಂದೇ ಟೈಲರ್​ ಅಂಗಡಿ ಸ್ಥಾಪಿಸಿದೆವು. ನಮ್ಮ ಹೆಸರಿನಲ್ಲಿ P ಮತ್ತು K ಇಲ್ಲದಿದ್ದರೂ PK Tailors ಅಂತಾ ಚಲಾವಣೆಗೆ ಬಂದಿವಿ. ಅದು ನಮ್ಮ ಪಟ್ಟಣದ ಜನ ಕೊಟ್ಟ ಪ್ರೀತಿಯ ಹೆಸರು. ಏಕೆಂದ್ರೆ ನಮ್ಮಿಬ್ಬರನ್ನೂ ಊರಿನ ಜನ ಪಚ್ಚು ಮತ್ತು ಕೋವಲನ್​ ಎಂದು ಕರೆಯುತ್ತಿದ್ದರು. ಅಲ್ಲಿಂದಲೇ PK Tailors ಉದಯವಾಗಿದ್ದು ಎನ್ನುತ್ತಾರೆ ಇಬ್ಬರೂ! ಅಂದಹಾಗೆ PK Manthri ಎಂಬ ಹೆಸರಿನಲ್ಲಿ ಈ ಹಿಂದೆ ಮಲೆಯಾಳಂನಲ್ಲಿ ಎರಡು ಕಾರ್ಟೂನ್​ ಕ್ಯಾರೆಕ್ಟರ್​​ಗಳು ತುಂಬಾ ಪ್ರಸಿದ್ಧಿ ಪಡೆದಿದ್ದವು.

PK tailors pair of friends in Kayamkulam in Kerala wearing matching clothes for 25 years (1)

ರವೀಂದ್ರನ್ ಪಿಳೈ ಮತ್ತು ಉದಯಕುಮಾರ್ 1982ರಲ್ಲಿ ಪರಸ್ಪರ ಭೇಟಿಯಾಗಿದ್ದರು.

ನಾವು ಒಂದೇ ಮಾದರಿಯ ಬಟ್ಟೆಗಳನ್ನು ಹಾಕಿಕೊಂಡು ಊರಲ್ಲಿ ಓಡಾಡತೊಡಗಿದಾಗ ಜನ ನಮ್ಮನ್ನು ವಿಚಿತ್ರವಾಗಿ ಆದರೆ ಕುತೂಹಲದಿಂದ ನೋಡತೊಡಗಿದರು. ಮನೋರಾಜ್ಯಂ ಎಂಬ ಮಲಯಾಳಂ ಮ್ಯಾಗಜೀನ್​ನಲ್ಲಿ ಬರುತ್ತಿದ್ದ ​Pachu ಮತ್ತು Kovalan ಹೆಸರುಗಳಿಂದ ನಮ್ಮನ್ನು ಕರೆಯತೊಡಗಿದರು. ಅದಕ್ಕೆ ನಾವೇನೂ ಬೇಜಾರು ಮಾಡಿಕೊಳ್ಳಲಿಲ್ಲ/ನೊಂದುಕೊಳ್ಳಲಿಲ್ಲ. ಬದಲಿಗೆ ನಾವು ಅದನ್ನು ಮೆಚ್ಚಿಕೊಂಡೆವು. ಜೀವನದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ… ಉದಯಕುಮಾರ್​ ಸೂಚಿಸಿದಂತೆ PK shop ತೆರೆದೆವು ಅನ್ನುತ್ತಾರೆ ರವೀಂದ್ರನ್.

ಈ ಕುಚಿಕು ಗೆಳೆಯರು ಮಂದೆ ಅಕ್ಕಪಕ್ಕದ ಮನೆಗಳಲ್ಲೇ ವಾಸವಾಗತೊಡಗಿದರು. 2003ರಲ್ಲಿ ಒಂದು ಸೈಟ್ ತೆಗೆದುಕೊಂಡು ಅಕ್ಕಪಕ್ಕ ಮನೆಗಳನ್ನು ಕಟ್ಟಿಕೊಂಡು ಅದರಲ್ಲೇ ವಾಸಿಸತೊಡಗಿದರಂತೆ! ಹೆಚ್ಚು ಮಾತನಾಡದ ಉದಯಕುಮಾರ್ ತಮ್ಮ ಪತ್ನಿ ಮತ್ತು ಪುತ್ರನೊಂದಿಗೆ ಜೀವನ ನಡೆಸುತ್ತಿದ್ದಾರೆ.

PK tailors pair of friends in Kayamkulam in Kerala wearing matching clothes for 25 years (3)

ಗೆಳೆಯರಿಬ್ಬರೂ 2003ರಲ್ಲಿ ಒಂದು ಸೈಟ್ ತೆಗೆದುಕೊಂಡು ಅಕ್ಕಪಕ್ಕ ಮನೆ ಕಟ್ಟಿಕೊಂಡು ಅದರಲ್ಲೇ ವಾಸಿಸತೊಡಗಿದರಂತೆ!

ಮೊದಮೊದಲು ಎರಡೂ ಕುಟುಂಬದ ಸದಸ್ಯರೂ ಸಹ ಒಂದೇ ಮಾದರಿಯ ಬಟ್ಟೆ ಹಾಕತೊಡಗಿದರು. ಆದರೆ ಮಹಿಳೆಯರಿಗೆ ಅಂತಹುದೇ ಬಟ್ಟೆಗಳು ಸಿಗುವುದು ಕಷ್ಟವಾದಾಗ ಅದನ್ನು ಕೈಬಿಟ್ಟರು. ಹಾಗಾಗಿ ಮನೆ ಮಂದಿಯೆಲ್ಲಾ ಏಕ ರೂಪದ ಬಟ್ಟೆ ತೊಡುವ ಪದ್ಧತಿಯಿಂದ ದೂರ ಉಳಿದೆವು.

2006ರಲ್ಲಿ ಮಾತೃಭೂಮಿ ಪತ್ರಿಕೆಯಲ್ಲಿ World Friendship Day ಅಂಗವಾಗಿ ಇವರಿಬ್ಬರ ಬಗ್ಗೆ ವಿಶೇಷ ಲೇಖನ ಪ್ರಕಟಿಸಿತ್ತಂತೆ. ಅಲ್ಲಿಂದೀಚೆಗೆ ಇಬ್ಬರ ಖ್ಯಾತಿ ಅಳಪ್ಪುಝಾ ಜಿಲ್ಲೆಯ ಗಡಿ ದಾಟಿ ಇಡೀ ರಾಜ್ಯ, ದೇಶದಲ್ಲಿ ಹರಡತೊಡಗಿದೆ. (ಸಚಿತ್ರ ಮಾಹಿತಿ ಕೃಪೆ: The News Minute)

Published On - 12:00 pm, Fri, 6 August 21