ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಇಂದು ಲಕ್ನೋದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಪೊಲೀಸ್ ಮಹಾನಿರೀಕ್ಷಕರ (ಐಜಿಪಿ) 56 ನೇ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಇಂದು ಮತ್ತು ನಾಳೆ ಉನ್ನತ ಭದ್ರತಾ ಸಮಾವೇಶ ನಡೆಯಲಿದ್ದು, ಸಮ್ಮೇಳನವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಅಂದರೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉನ್ನತ ಪೊಲೀಸರು, ಡಿಜಿಪಿಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಲಕ್ನೋದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದ ಆಹ್ವಾನಿತರು IB/SIB ಪ್ರಧಾನ ಕಛೇರಿಯಲ್ಲಿ 37 ವಿವಿಧ ಸ್ಥಳಗಳಿಂದ ವರ್ಚುವಲ್ ವಿಧಾನದ ಮೂಲಕ ಭಾಗವಹಿಸುತ್ತಿದ್ದಾರೆ.
ಸಮ್ಮೇಳನದ ಕಾರ್ಯಸೂಚಿಯು ಸೈಬರ್ ಕ್ರೈಮ್, ಡೇಟಾ ಆಡಳಿತ, ಭಯೋತ್ಪಾದನೆ ನಿಗ್ರಹ ಸವಾಲುಗಳು, ಎಡಪಂಥೀಯ ತೀವ್ರವಾದ, ಮಾದಕವಸ್ತು ಕಳ್ಳಸಾಗಣೆಯಲ್ಲಿ ನೂತನ ಪ್ರವೃತ್ತಿಗಳು, ಜೈಲು ಸುಧಾರಣೆಗಳು ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡಿದೆ. 2014ರಿಂದ ಡಿಜಿಪಿಗಳ ಸಮಾವೇಶದಲ್ಲಿ ಪ್ರಧಾನಿ ತೀವ್ರ ಆಸಕ್ತಿ ವಹಿಸಿದ್ದರು. ಹಿಂದೆ ಪ್ರಧಾನಿ ಕೇವಲ ಸಾಂಕೇತಿಕವಾಗಿ ಉಪಸ್ಥಿತರಿರುತ್ತಿದ್ದರು. ಆದರೆ ಈಗ ಖುದ್ದಾಗಿ ಪ್ರಧಾನಿ ಹಾಜರಿದ್ದು, ಎಲ್ಲಾ ಸೆಷನ್ಗಳಲ್ಲಿ ಭಾಗವಹಿಸುತ್ತಾರೆ. ಅಲ್ಲದೇ, ದೇಶದ ಮೇಲೆ ಪರಿಣಾಮ ಬೀರುವ ಪ್ರಮುಖ ಪೊಲೀಸಿಂಗ್ ಮತ್ತು ಆಂತರಿಕ ಭದ್ರತಾ ಸಮಸ್ಯೆಗಳ ಬಗ್ಗೆ ನೇರವಾಗಿ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲು, ಅವರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಒದಗಿಸುತ್ತಿದ್ದಾರೆ.
2014 ರಿಂದ ವಾಡಿಕೆಯಂತೆ ದೆಹಲಿಯಲ್ಲಿ ಆಯೋಜಿಸಲಾಗುತ್ತಿದ್ದ ವಾರ್ಷಿಕ ಸಮ್ಮೇಳನಗಳನ್ನು ದೆಹಲಿಯ ಹೊರಗೆ ಆಯೋಜಿಸಲಾಗಿದೆ. 2020ರಲ್ಲಿ ಮಾತ್ರ ಸಮ್ಮೇಳನವು ಆನ್ಲೈನ್ನಲ್ಲಿ ನಡೆದಿತ್ತು. ಸಮ್ಮೇಳನವನ್ನು 2014 ರಲ್ಲಿ ಗುವಾಹಟಿಯಲ್ಲಿ ಆಯೋಜಿಸಲಾಗಿದೆ. 2015 ರಲ್ಲಿ ಧೋರ್ಡೊ, ರಣ್ ಆಫ್ ಕಚ್ನಲ್ಲಿ, 2016 ರಲ್ಲಿ ಹೈದರಾಬಾದ್ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ, 2017 ರಲ್ಲಿ ತೆಕನ್‌ಪುರದ BSF ಅಕಾಡೆಮಿಯಲ್ಲಿ, 2018 ರಲ್ಲಿ ಕೆವಾಡಿಯಾ ಮತ್ತು ಪುಣೆ 2019 ರಲ್ಲಿ ಪುಣೆಯ IISERನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಲಕ್ನೋದಲ್ಲಿ ನಡೆಯುತ್ತಿದೆ.
ಇದನ್ನೂ ಓದಿ:
Kamala Harris: ಕೆಲಕಾಲ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಇತಿಹಾಸ ಸೃಷ್ಟಿಸಿದ ಕಮಲಾ ಹ್ಯಾರಿಸ್
Swachh Survekshan Awards 2021: ಸತತ 5ನೇ ಬಾರಿಗೆ ಇಂದೋರ್ಗೆ ಸ್ವಚ್ಛ ನಗರಿ ಪಟ್ಟ; ಮೈಸೂರಿಗೆ ನಿರಾಸೆ
Published On - 1:01 pm, Sat, 20 November 21