Kamala Harris: ಕೆಲಕಾಲ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಇತಿಹಾಸ ಸೃಷ್ಟಿಸಿದ ಕಮಲಾ ಹ್ಯಾರಿಸ್

ತಮ್ಮ ಆರೋಗ್ಯ ತಪಾಸಣೆ ಮುಗಿಯುವವರೆಗೂ ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕ ಅಧ್ಯಕ್ಷೀಯ ಅಧಿಕಾರವನ್ನು ಜೋ ಬೈಡನ್ ವಹಿಸಿಕೊಟ್ಟಿದ್ದರು. ಈ ಮೂಲಕ ಕಮಲಾ ಹ್ಯಾರಿಸ್ ಅವರು ಅಮೆರಿಕದ ಅಧ್ಯಕ್ಷೆ ಸ್ಥಾನವನ್ನು ಅಲಂಕರಿಸಿರುವ ಮೊದಲ ಮಹಿಳೆಯಾಗಿದ್ದಾರೆ.

Kamala Harris: ಕೆಲಕಾಲ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಇತಿಹಾಸ ಸೃಷ್ಟಿಸಿದ ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್​

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ (Kamala Harris) ಕೆಲವು ಕಾಲ ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. 1 ಗಂಟೆ 25 ನಿಮಿಷಗಳ ಕಾಲ ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಕಮಲಾ ಹ್ಯಾರಿಸ್ ಪಾತ್ರರಾಗಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ವಾಷಿಂಗ್ಟನ್​ನ ವಾಲ್ಟರ್​ ರೀಡ್ ವೈದ್ಯಕೀಯ ಕೇಂದ್ರದಲ್ಲಿ ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತೆರಳಿದ್ದರು. ಅವರಿಗೆ ಕೊಲೊನೋಸ್ಕೊಪಿ ಪರೀಕ್ಷೆ ವೇಳೆ ಅರವಳಿಕೆ ಔಷಧಿ ನೀಡಲಾಗಿತ್ತು. ಹೀಗಾಗಿ, ತಮ್ಮ ಆರೋಗ್ಯ ತಪಾಸಣೆ ಮುಗಿಯುವವರೆಗೂ ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕ ಅಧ್ಯಕ್ಷೀಯ ಅಧಿಕಾರವನ್ನು ಜೋ ಬೈಡನ್ ವಹಿಸಿಕೊಟ್ಟಿದ್ದರು. ಬೆಳಗ್ಗೆ 10.10ರಿಂದ 11.35ರವರೆಗೆ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗಿದ್ದರು.

ಈ ಮೂಲಕ ಅಮೆರಿಕದ ಉಪಾಧ್ಯಕ್ಷೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸಿದ್ದಾರೆ. 1 ಗಂಟೆ 25 ನಿಮಿಷ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಲೊನೋಸ್ಕೋಪಿ ಪರೀಕ್ಷೆ ಸಮಯದಲ್ಲಿ ಜೋ ಬೈಡನ್‌ ಅವರಿಗೆ ಅನಸ್ತೇಷಿಯಾ ನೀಡಿದ್ದರಿಂದ ಆ ಸಂದರ್ಭದಲ್ಲಿ ಅವರ ಬದಲಾಗಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಧಿಕಾರ ವಹಿಸಿಕೊಂಡಿದ್ದಾರೆ.

57 ವರ್ಷದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಅಧ್ಯಕ್ಷೆ ಸ್ಥಾನವನ್ನು ಅಲಂಕರಿಸಿರುವ ಮೊದಲ ಮಹಿಳೆಯಾಗಿದ್ದಾರೆ. 2002 ಹಾಗೂ 2007ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಶ್ ಕೂಡ ಕೊಲನೋಸ್ಕೋಪಿ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಇದೀಗ ಜೋ ಬೈಡನ್ ಕೂಡ ಉಪಾಧ್ಯಕ್ಷೆಗೆ ಅಧಿಕಾರ ಹಸ್ತಾಂತರಿಸಿ ತಪಾಸಣೆಗೆ ಒಳಗಾಗಿದ್ದಾರೆ. ದಕ್ಷಿಣ ಏಷ್ಯಾ ಮೂಲದ ಮೊದಲ ಮಹಿಳೆ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು.

ಇದನ್ನೂ ಓದಿ: ಆರೋಗ್ಯ ತಪಾಸಣೆಗೆ ಒಳಗಾಗುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್​: ಕಮಲಾ ಹ್ಯಾರಿಸ್​ಗೆ ಅಧಿಕಾರ ಹಸ್ತಾಂತರ

ಅಮೆರಿಕದಲ್ಲಿ ಅಧ್ಯಕ್ಷ ಬೈಡನ್​-ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನಡುವೆ ಭಿನ್ನಾಭಿಪ್ರಾಯ !; ವೈಯಕ್ತಿಕ ಸ್ಪರ್ಧೆಗೆ ಬಿದ್ದರಾ ನಾಯಕರು?

Click on your DTH Provider to Add TV9 Kannada