ಸಂಸತ್ ಭದ್ರತಾ ಲೋಪ ಆರೋಪಿಗಳನ್ನು ಪ್ರತಿಪಕ್ಷಗಳು ಬೆಂಬಲಿಸುತ್ತಿವೆ: ಪ್ರಧಾನಿ ಮೋದಿ ವಾಗ್ದಾಳಿ

ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿದವರ ಬೆಂಬಲಕ್ಕೆ ಕೆಲವು ಪಕ್ಷಗಳು ಧ್ವನಿ ಎತ್ತುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಇದು ಕಳ್ಳತನದಷ್ಟೇ ಅಪಾಯಕಾರಿ. ಋಣಾತ್ಮಕ ರಾಜಕೀಯದ ಕಾರಣ 2024ರಲ್ಲೂ ಪ್ರತಿಪಕ್ಷಗಳು ಅಧಿಕಾರದಿಂದ ಹೊರಗುಳಿಯಲು ಹೊರಟಿವೆ. ಕೆಲವು ಜನರು ಒಳ್ಳೆಯ ಮತ್ತು ಸಕಾರಾತ್ಮಕ ಕೆಲಸವನ್ನು ಮಾಡಲು ಉದ್ದೇಶಿಸಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.

ಸಂಸತ್ ಭದ್ರತಾ ಲೋಪ ಆರೋಪಿಗಳನ್ನು ಪ್ರತಿಪಕ್ಷಗಳು ಬೆಂಬಲಿಸುತ್ತಿವೆ: ಪ್ರಧಾನಿ ಮೋದಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ
Follow us
|

Updated on: Dec 19, 2023 | 11:45 AM

ನವದೆಹಲಿ, ಡಿಸೆಂಬರ್ 19: ಸಂಸತ್ ಭದ್ರತಾ ಲೋಪ (Parliment Security Breach) ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರೋಪಿಗಳಿಗೆ ವಿರೋಧ ಪಕ್ಷಗಳ ಬೆಂಬಲವಿದೆ ಎಂದು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿ ದೂರಿದರು. ಆರೋಪಿಗಳನ್ನು ಪ್ರತಿಪಕ್ಷಗಳು ಬೆಂಬಲಿಸುವುದು ಬಹಳ ಅಪಾಯಕಾರಿ. ಸಂಸತ್ತಿನ ಭದ್ರತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವರ್ತನೆ ಸರಿಯಲ್ಲ. ಪ್ರತಿಪಕ್ಷಗಳ ವರ್ತನೆ ಬೇಸರ ಉಂಟುಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಒಳ್ಳೆಯ ಮತ್ತು ಸಕಾರಾತ್ಮಕ ಕೆಲಸ ಮಾಡಲು ಕೆಲವರಿಗೆ ಮನಸಿಲ್ಲ. ಋಣಾತ್ಮಕ ರಾಜಕಾರಣ ಮಾಡುತ್ತಿರುವುದರಿಂದ 2024ರಲ್ಲೂ ಪ್ರತಿಪಕ್ಷಗಳು ಸೋಲು ಅನುಭವಿಸಬೇಕಾಗಲಿದೆ ಎಂದು ಮೋದಿ ಹೇಳಿದರು.

ಅವರು (ಪ್ರತಿಪಕ್ಷಗಳು) ದೊಡ್ಡ ತಪ್ಪು ಮಾಡುತ್ತಿದ್ದಾರೆ. ಕೋಪ ಮತ್ತು ಹತಾಶೆಯಿಂದ ಪ್ರತಿಪಕ್ಷಗಳು ದೊಡ್ಡ ತಪ್ಪು ಮಾಡುತ್ತಿವೆ. ಕೆಲವು ಹಿರಿಯ ಅಸ್ವಸ್ಥ ನಾಯಕರು ಕೂಡ ಬಿಜೆಪಿಯನ್ನು ತೆಗೆದುಹಾಕುವ ಹೆಸರಿನಲ್ಲಿ ದೇಶದ ವಿರುದ್ಧವೇ ಸಕ್ರಿಯರಾಗಿದ್ದಾರೆ ಎಂದು ಮೋದಿ ಟೀಕಿಸಿದರು.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ತಮ್ಮ ಸ್ಥಾನದಲ್ಲೇ ಉಳಿಯಲು ಮನಸ್ಸು ಮಾಡಿವೆ ಎಂದು ತೋರುತ್ತದೆ. ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿದವರ ಪರವಾಗಿ ಕೆಲವು ಪಕ್ಷಗಳು ಧ್ವನಿ ಎತ್ತುತ್ತಿವೆ. ಇದು ಕಳ್ಳತನದಷ್ಟೇ ಅಪಾಯಕಾರಿ ಮತ್ತು ಇದು ಅತ್ಯಂತ ದುರದೃಷ್ಟಕರ ಎಂದರು.

ಇದನ್ನೂ ಓದಿ: ರಾಮ ಮಂದಿರ ರೂವಾರಿಗಳಿಗೇ ಉದ್ಘಾಟನೆಗೆ ಬರಬೇಡಿ ಎಂದ ಟ್ರಸ್ಟ್: ಕಾರಣವೇನು?

ಇಂದಿನ 18 ವರ್ಷದ ಮತದಾರರಿಗೆ 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ 8 ವರ್ಷವಾಗಿತ್ತು. ಅವರು ಹಗರಣಗಳ ಯುಗವನ್ನು ನೋಡಿಲ್ಲ. ಅವರು ಅಭಿವೃದ್ಧಿಯ ಯುಗವನ್ನು ನೋಡುತ್ತಿದ್ದಾರೆ. ಈ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಎಂದು ಮೋದಿ ಕರೆ ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ