Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಹರೂ ಕಾಲದಿಂದಲೂ ಕಾಂಗ್ರೆಸ್​ಗೆ​ ಸಂವಿಧಾನ ಬದಲಿಸುವ ಚಟ; ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ

PM Modi Speech in Parliament Session: ನವೆಂಬರ್ 26ರಂದು 75 ವರ್ಷಗಳನ್ನು ಪೂರೈಸಿದ ಸಂವಿಧಾನದ ವಿಶೇಷ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಂವಿಧಾನದ ಚರ್ಚೆಗಾಗಿ ಲೋಕಸಭೆಯು ಎರಡು ದಿನಗಳನ್ನು ಮೀಸಲಿಟ್ಟಿತ್ತು. ರಾಜ್ಯಸಭೆಯಲ್ಲಿ ಸೋಮವಾರ ಮತ್ತು ಮಂಗಳವಾರ ಈ ಬಗ್ಗೆ ಚರ್ಚೆ ನಡೆಯಲಿದೆ. ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್‌ನಲ್ಲಿ ಪ್ರಾರಂಭವಾಯಿತು. ಡಿಸೆಂಬರ್ 20ರಂದು ಕಲಾಪ ಮುಕ್ತಾಯಗೊಳ್ಳಲಿದೆ.

ನೆಹರೂ ಕಾಲದಿಂದಲೂ ಕಾಂಗ್ರೆಸ್​ಗೆ​ ಸಂವಿಧಾನ ಬದಲಿಸುವ ಚಟ; ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ
ಸದನದಲ್ಲಿ ಪ್ರಧಾನಿ ಮೋದಿ
Follow us
ಸುಷ್ಮಾ ಚಕ್ರೆ
|

Updated on:Dec 14, 2024 | 7:11 PM

ನವದೆಹಲಿ: ಭಾರತದ ಸಂವಿಧಾನದ 75ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಪ್ರಮುಖ ಭಾಷಣ ಮಾಡುತ್ತಿದ್ದಾರೆ. ಈ ಮಹತ್ವದ ಮೈಲಿಗಲ್ಲಿನ ಚರ್ಚೆಯಲ್ಲಿ ಮಾತನಾಡಿದ ಅವರು, “ನಮ್ಮ ದೇಶದ ಎಲ್ಲಾ ನಾಗರಿಕರಿಗೆ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಪ್ರಜಾಪ್ರಭುತ್ವವನ್ನು ಪ್ರೀತಿಸುವ ಜನರಿಗೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ” ಎಂದು ಹೇಳಿದ್ದಾರೆ. ಲೋಕಸಭೆ ಅಧಿವೇಶನದಲ್ಲಿ ಇಂದು ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಸದನವನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಪ್ರಧಾನಿ ಮೋದಿ ಕೂಡ ವಾಗ್ದಾಳಿ ನಡೆಸಿದ್ದಾರೆ.  75 ವರ್ಷಗಳ ಸುದೀರ್ಘ ಪ್ರಯಾಣವು ಸ್ಮರಣೀಯವಾಗಿದೆ. ಆದರೆ, ನಮ್ಮ ಸಂವಿಧಾನವು 25 ವರ್ಷಗಳನ್ನು ಪೂರೈಸಿದಾಗ ಪ್ರಜಾಪ್ರಭುತ್ವವನ್ನು ನಾಶಪಡಿಸಲಾಯಿತು. ನಾವು ಸಂವಿಧಾನದ 75 ವರ್ಷಗಳನ್ನು ಪೂರೈಸುತ್ತಿದ್ದೇವೆ. ಆದರೆ ನಾವು 25 ವರ್ಷಗಳನ್ನು ಪೂರೈಸುತ್ತಿರುವಾಗ ಸಂವಿಧಾನವನ್ನು ನಾಶಪಡಿಸಲಾಯಿತು. ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಿತ್ತೊಗೆಯಲಾಯಿತು, ಇಡೀ ದೇಶವನ್ನು ಜೈಲಾಗಿ ಪರಿವರ್ತಿಸಲಾಯಿತು. ಈ ಪಾಪವನ್ನು ತೊಳೆಯಲು ಸಾಧ್ಯವೇ ಇಲ್ಲ. ಕಾಂಗ್ರೆಸ್​ ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿತ್ತು ಎಂದು ಪ್ರಧಾನಿ ಮೋದಿ ಟೀಕಿಸಿದರು.

ಸಂವಿಧಾನವನ್ನು ಬದಲಿಸುವಲ್ಲಿ ದೇಶದ ಮೊದಲ ಪ್ರಧಾನಿ ನೆಹರು ಬಿತ್ತಿದ ಬೀಜಕ್ಕೆ ಇಂದಿರಾ ಗಾಂಧಿ ನೀರೆರೆದರು. ಇಂದಿರಾ ಗಾಂಧಿ ಸುಪ್ರೀಂ ಕೋರ್ಟ್​ ನಿರ್ಧಾರವನ್ನೇ ರದ್ದುಗೊಳಿಸಿದರು. ಸಂವಿಧಾನ ಅಡ್ಡಿಯಾಗುವುದಾದರೆ ಅದನ್ನು ಬದಲಾಯಿಸಬೇಕು ಎಂದು ನೆಹರೂ ಕಾಲದಲ್ಲಿ ಪ್ರಧಾನಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆದರೆ, ರಾಷ್ಟ್ರಪತಿಗಳು ಮತ್ತು ಸ್ಪೀಕರ್ ಇಬ್ಬರೂ ನೆಹರೂಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದ್ದರು. ಆದರೂ ಅವರು ಸಂವಿಧಾನಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದರು. ಕಾಲಕ್ರಮೇಣ ಈ ಪದ್ಧತಿ ಪುನರಾವರ್ತನೆಯಾಗುತ್ತಿದ್ದು, ಸಂವಿಧಾನವನ್ನು ತಿದ್ದಲು ಕಾಂಗ್ರೆಸ್ ಒಗ್ಗಿಕೊಂಡಿದೆ ಎಂದು ಟೀಕಿಸಿದ್ದಾರೆ.

“ಸಂವಿಧಾನವನ್ನು ಆರು ದಶಕಗಳಲ್ಲಿ 75 ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಪದ್ಧತಿಯ ಬೀಜಗಳನ್ನು ಮೊದಲ ಪ್ರಧಾನಿ ಬಿತ್ತಿದರು. ಇಂದಿರಾ ಗಾಂಧಿ ಅದನ್ನು ಪೋಷಿಸಿದರು. ಸುಪ್ರೀಂ ಕೋರ್ಟ್​ನ 1971 ರ ತೀರ್ಪನ್ನು ನಿರ್ಲಕ್ಷಿಸಿ, ಅವರು ನ್ಯಾಯಾಂಗದ ಅಧಿಕಾರವನ್ನು ಕುಗ್ಗಿಸಲು ಸಂವಿಧಾನವನ್ನು ಬದಲಾಯಿಸಿದರು. ಅಂದಿನಿಂದಲೂ ಕಾಂಗ್ರೆಸ್‌ಗೆ ಸಂವಿಧಾನ ಬದಲಿಸುವ ಚಟ ಮುಂದುವರೆದಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಕಾಂಗ್ರೆಸ್​ ಕುಟುಂಬ ರಾಜಕಾರಣದ ವಿರುದ್ಧ ಟೀಕೆ:

ಕಾಂಗ್ರೆಸ್‌ನ ಕುಟುಂಬ ಆಡಳಿತದ ಮೇಲೆ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಆದರೆ, ಒಂದೇ ಕುಟುಂಬ 55 ವರ್ಷಗಳ ಕಾಲ ಆಡಳಿತ ನಡೆಸಿದೆ. ಈ  “ರಾಜವಂಶದ ರಾಜಕೀಯ” ಭಾರತದ ಸಂವಿಧಾನಕ್ಕೆ ಧಕ್ಕೆ ತಂದಿದೆ. ನಾನು ಯಾರನ್ನೂ ವೈಯಕ್ತಿಕವಾಗಿ ನಿಂದಿಸಲು ಬಂದಿಲ್ಲ. ಆದರೆ, ಸತ್ಯವನ್ನು ರಾಷ್ಟ್ರದ ಮುಂದೆ ಇಡಬೇಕು. ಇಂದಿರಾ ಗಾಂಧಿಯವರು ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಚುನಾವಣೆಯನ್ನು ನ್ಯಾಯಾಂಗವು “ಅಕ್ರಮ” ಎಂದು ಘೋಷಿಸುವುದನ್ನು ತಪ್ಪಿಸಲು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡರು. ಅವರು ಸಂವಿಧಾನದ ತತ್ವಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ಇದನ್ನೂ ಓದಿ: PM Modi: ಮಹಾ ಕುಂಭ ಏಕತೆಯ ಮಹಾ ಯಜ್ಞ; ಪ್ರಯಾಗರಾಜ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ

“ಭಾರತವು ಕೇವಲ ದೊಡ್ಡ ಪ್ರಜಾಪ್ರಭುತ್ವವಲ್ಲ. ಅದು ಸಾವಿರಾರು ವರ್ಷಗಳ ಪ್ರಜಾಪ್ರಭುತ್ವ ಸಂಪ್ರದಾಯಗಳಿಂದಾಗಿ ಪ್ರಜಾಪ್ರಭುತ್ವದ ತಾಯಿ” ಎಂದು ಮೋದಿ ಬಣ್ಣಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370ನೇ ವಿಧಿ ಏಕತೆಗೆ ಅಡ್ಡಿಯಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿದ್ದ 370ನೇ ವಿಧಿ “ರಾಷ್ಟ್ರೀಯ ಐಕ್ಯತೆ”ಗೆ ತಡೆಯಾಗಿತ್ತು. ಹೀಗಾಗಿ, ಅದನ್ನು ರದ್ದುಗೊಳಿಸುವ ಉತ್ತಮ ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಮೋದಿ ಹೇಳಿದ್ದಾರೆ.

ಮಹಿಳೆಯರ ಪಾತ್ರಕ್ಕೆ ಶ್ಲಾಘನೆ:

ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರದ ನೀತಿಗಳು, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಭಾರತದ ಏಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಸಂವಿಧಾನವು ರಾಷ್ಟ್ರೀಯ ಏಕತೆಯ ಆಧಾರವಾಗಿದೆ ಎಂದಿರುವ ಮೋದಿ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರವನ್ನು ಶ್ಲಾಘಿಸಿದ್ದಾರೆ.  ಭಾರತೀಯ ಮಹಿಳೆಯರ ಸ್ಥಾನವನ್ನು ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳೊಂದಿಗೆ ಹೋಲಿಸಿದ್ದಾರೆ. ಭಾರತದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು, ಸ್ಥಾನಮಾನ ನೀಡಲಾಗಿದೆ ಎಂದ ಮೋದಿ ಸಂವಿಧಾನ ರಚನೆಕಾರರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಸಂವಿಧಾನ, ವೀರ ಸಾವರ್ಕರ್, ಅದಾನಿ, ಮನುಸ್ಮೃತಿ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಅಬ್ಬರಿಸಿದ ರಾಹುಲ್ ಗಾಂಧಿ

ಸಂವಿಧಾನ ರಚನೆಯಲ್ಲಿ ಮಹಿಳೆಯರ ಮಹತ್ವದ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ, “ಸಂವಿಧಾನದ ರಚನೆಯ ಸಮಯದಲ್ಲಿ, ಸಂವಿಧಾನವನ್ನು ಬಲಪಡಿಸುವಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದರು. ನಮ್ಮ ಸಂವಿಧಾನ ರಚನೆಗೆ ಮಹಿಳಾ ಶಕ್ತಿಯು ಮಹತ್ತರವಾದ ಕೊಡುಗೆಗಳನ್ನು ನೀಡಿದೆ. ಅನೇಕ ರಾಷ್ಟ್ರಗಳು ಮಹಿಳೆಯರಿಗೆ ಮತದಾನದ ಹಕ್ಕನ್ನು ಸಾಕಷ್ಟು ತಡವಾಗಿ ನೀಡಿದರೆ, ಭಾರತದಲ್ಲಿ ಸಂವಿಧಾನವು ಮೊದಲಿನಿಂದಲೂ ಮಹಿಳೆಯರಿಗೆ ಈ ಹಕ್ಕನ್ನು ನೀಡಿದೆ” ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Sat, 14 December 24

ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ