PM Modi: ಜಗತ್ತಿನ ನೀರಿನ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಭಾರತ ಮುಂದೆ ನಿಲ್ಲಬೇಕಿದೆ; ಪ್ರಧಾನಿ ಮೋದಿ
Jal Sanchay Jan Bhagidari: 'ಜಲ ಸಂಚಯ ಜನ ಭಾಗಿದಾರಿ ಅಭಿಯಾನ'ಕ್ಕೆ ಚಾಲನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, 'ನೀರಿನ ಬಳಕೆಯನ್ನು ಕಡಿಮೆ ಮಾಡಲು, ಮರುಬಳಕೆ ಮಾಡಲು ನಾವು ಆದ್ಯತೆ ನೀಡಬೇಕಿದೆ' ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಡಿಯಲ್ಲಿ, ಸುಮಾರು 24,800 ಮಳೆನೀರು ಕೊಯ್ಲು ರಚನೆಗಳನ್ನು ಮಾಡಲಾಗಿದ್ದು ಅದು ಮಳೆನೀರು ಕೊಯ್ಲನ್ನು ಉತ್ಕೃಷ್ಟಗೊಳಿಸುತ್ತದೆ ಮತ್ತು ರಾಜ್ಯದಾದ್ಯಂತ ದೀರ್ಘಾವಧಿಯ ನೀರಿನ ಸುಸ್ಥಿರತೆಯನ್ನು ಖಚಿತಪಡಿಸುತ್ತದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಗುಜರಾತ್‌ನಲ್ಲಿ ‘ಜಲ ಸಂಚಯ ಜನ್ ಭಾಗಿದಾರಿ’ ಉಪಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಜಲ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದ ಪಿಎಂ ನರೇಂದ್ರ ಮೋದಿ, ಭಾರತದ ಶೇ. 80ರಷ್ಟು ನೀರನ್ನು ನೀರಾವರಿಗೆ ಬಳಸಲಾಗುತ್ತಿದೆ. ಹನಿ ನೀರಾವರಿಯಂತಹ ಸುಸ್ಥಿರ ಕೃಷಿ ತಂತ್ರಗಳನ್ನು ಉತ್ತೇಜಿಸಬೇಕು. ನೀರು ಮತ್ತು ಪರಿಸರ ಸಂರಕ್ಷಣೆ ನಮಗೆ ಹೊಸದಲ್ಲ. ಇದು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಒಂದು ಭಾಗವಾಗಿದೆ. ನಮ್ಮ ಸಂಸ್ಕೃತಿಯಲ್ಲಿ, ನೀರನ್ನು ದೇವರೆಂದು ಪರಿಗಣಿಸಲಾಗುತ್ತದೆ ಮತ್ತು ನದಿಗಳನ್ನು ದೇವತೆಗಳೆಂದು ಪೂಜಿಸಲಾಗುತ್ತದೆ. ನರ್ಮದಾ, ಗಂಗಾ, ಗೋದಾವರಿ ಮತ್ತು ಕಾವೇರಿ ನಮ್ಮ ತಾಯಿಯಂದಿರು. ನಮ್ಮ ಪೂರ್ವಜರಿಗೂ ನೀರಿನ ಸಂರಕ್ಷಣೆಯ ಮಹತ್ವ ತಿಳಿದಿತ್ತು ಎಂದಿದ್ದಾರೆ.
ಭಾರತವು ಪ್ರಪಂಚದಲ್ಲಿ ಕೇವಲ ಶೇ. 4ರಷ್ಟು ಸಿಹಿನೀರಿನ ಸಂಪನ್ಮೂಲಗಳನ್ನು ಹೊಂದಿದೆ ಮತ್ತು ಅದನ್ನು ಸಂರಕ್ಷಿಸಲು ಜನರು ‘ಕಡಿಮೆ ನೀರಿನ ಬಳಕೆ, ರೀಚಾರ್ಜ್ ಮತ್ತು ಮರುಬಳಕೆ’ ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಮೋದಿ ಒತ್ತಿ ಹೇಳಿದ್ದಾರೆ.
#WATCH | Prime Minister Narendra Modi launches ‘Jal Sanchay Jan Bhagidari’ initiative in Gujarat, virtually
He says, ” Today, an important campaign is being launched from the land of Gujarat, by Jal Shakti Ministry. Before this, in the recent past, there was a rain havoc in… pic.twitter.com/o2fsXZkTju
— ANI (@ANI) September 6, 2024
ಇದನ್ನೂ ಓದಿ: PM Modi in Singapore: ಭಾರತದಲ್ಲಿ ಹೂಡಿಕೆ ಮಾಡಲು ಸಿಂಗಾಪುರದ ಸಿಇಒಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ
ಇದೇ ವೇಳೆ ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಈ ಹಿಂದೆ ಗುಜರಾತ್‌ನಲ್ಲಿ ಇಷ್ಟು ಮಳೆಯನ್ನು ನಾನು ನೋಡಿಲ್ಲ. ದೇಶದ ಇತರ ಕೆಲವು ಭಾಗಗಳು ಸಹ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸುತ್ತಿವೆ. ಇಂದು, ಗುಜರಾತ್‌ನ ನೆಲದಿಂದ ಜಲಶಕ್ತಿ ಸಚಿವಾಲಯವು ಮಹತ್ವದ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಇದಕ್ಕೂ ಮುನ್ನ ಈಚೆಗೆ ದೇಶದ ಮೂಲೆ ಮೂಲೆಯಲ್ಲಿ ಮಳೆಯ ಅಬ್ಬರ ಉಂಟಾಗಿತ್ತು. ಗುಜರಾತ್‌ನ ಜನರು ಮತ್ತು ದೇಶವಾಸಿಗಳು ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಎಲ್ಲರಿಗೂ ಸಹಾಯ ಮಾಡುವ ಸ್ವಭಾವವನ್ನು ಹೊಂದಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
#WATCH | Prime Minister Narendra Modi launches ‘Jal Sanchay Jan Bhagidari’ initiative in Gujarat, virtually
He says, ” Water conservation is not just a policy, it is also an effort and let’s say, it is also a virtue. There is generosity as well as responsibility in it. When… pic.twitter.com/sTgFNOtBlX
— ANI (@ANI) September 6, 2024
ಜುಲೈ 30ರಂದು ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 78 ಜನರು ಇನ್ನೂ ಕಾಣೆಯಾಗಿದ್ದಾರೆ. ಹೆಚ್ಚುವರಿಯಾಗಿ, ಆಗಸ್ಟ್ ಕೊನೆಯ ವಾರದಲ್ಲಿ ಗುಜರಾತ್‌ನಲ್ಲಿ ಧಾರಾಕಾರ ಮಳೆಯಿಂದಾಗಿ 49 ಸಾವುಗಳು ಸಂಭವಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ