PM Modi: ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಇಂದು ಮೋದಿ ಭೇಟಿ; ಮಹಾಕಾಲ್ ಲೋಕ ಕಾರಿಡಾರ್ ಉದ್ಘಾಟನೆ
Mahakaleshwar Temple: ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಮೊದಲ ಹಂತದ ವಿಸ್ತರಣೆಯಾದ ಮಹಾಕಾಲ್ ಲೋಕ ಕಾರಿಡಾರ್ ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ.
ಉಜ್ಜಯಿನಿ: ಮಂದಿರ ಪರಿಸರ ವಿಸ್ತಾರ್ ಯೋಜನೆಯಡಿ ಮರು ಅಭಿವೃದ್ಧಿಗೊಳಿಸಲಾದ ಮಧ್ಯಪ್ರದೇಶ ಮೂಲದ ಮಹಾಕಾಳೇಶ್ವರ ದೇವಾಲಯವನ್ನು (Mahakaleshwar Temple) ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಅಕ್ಟೋಬರ್ 11) ಉದ್ಘಾಟಿಸಲಿದ್ದಾರೆ. ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಮೊದಲ ಹಂತದ ವಿಸ್ತರಣೆಯಾದ ಮಹಾಕಾಲ್ ಲೋಕ ಕಾರಿಡಾರ್ (Mahakal Lok Corridor) ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ ದೊಡ್ಡ ಟಿವಿ ಪರದೆಗಳಿಂದ ಹಿಡಿದು ಮಹಾಕಾಳೇಶ್ವರ ದೇವಸ್ಥಾನಕ್ಕೆ ದಾರಿ ಮಾಡುವ 600 ಮೀಟರ್ ಉದ್ದದ ಹರಿ ಫಾಟಕ್ ಸೇತುವೆಯ ರೇಲಿಂಗ್‌ಗಳ ಉದ್ದಕ್ಕೂ ಎಣ್ಣೆ ದೀಪಗಳನ್ನು ಇರಿಸಲಾಗಿದ್ದು, ಉಜ್ಜಯಿನಿ ದೊಡ್ಡ ಕಾರ್ಯಕ್ರಮಕ್ಕಾಗಿ ಅಲಂಕೃತವಾಗಿದೆ. ಈ ಸಂದರ್ಭವನ್ನು ಸಂಭ್ರಮಿಸಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯಾದ್ಯಂತ ದೀಪಾವಳಿ ರೀತಿಯಲ್ಲೇ ಆಚರಣೆ ಮಾಡಲು ಕರೆ ನೀಡಿದ್ದಾರೆ.
ಇಂದು ನರೇಂದ್ರ ಮೋದಿ ಈ ಕಾರಿಡಾರ್ ಮಾರ್ಗವಾಗಿ ಸಾಗುವಾಗ ಮಾರ್ಗದುದ್ದಕ್ಕೂ ಹಲವಾರು ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಲಿದ್ದು, ಮಹಾಕಾಲ ಕಾರಿಡಾರ್ ಉದ್ಘಾಟನೆ ನಂತರ ಕಾರ್ತಿಕ್ ಮೇಳ ಎಂಬ ಅದ್ದೂರಿ ಸಮಾರಂಭ ಆಯೋಜಿಸಲಾಗಿದೆ. ಇದರಲ್ಲಿ ಖ್ಯಾತ ಗಾಯಕ ಕೈಲಾಶ್ ಖೇರ್ ‘ಜೈ ಶ್ರೀ ಮಹಾಕಾಲ’ ಎಂಬ ಸ್ತುತಿ ಹಾಡಲಿದ್ದಾರೆ.
Jai Mahakal ?
The first phase of the Shree Mahakaleshwar Temple Corridor of Ujjain is all set to be inaugurated by Hon’ble PM Shri @narendramodi Ji tomorrow 11th, October.
Glimpse of the magnificent #ShriMahakalLok : pic.twitter.com/D0eVYJLN6d
— G Kishan Reddy (@kishanreddybjp) October 10, 2022
ಪ್ರಧಾನಮಂತ್ರಿ ಮೋದಿ ಇಂದು ಸಂಜೆ 5.30ಕ್ಕೆ ಇಂದೋರ್‌ಗೆ ಬಂದಿಳಿದು ನಂತರ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಉಜ್ಜಯಿನಿ ತಲುಪುವ ನಿರೀಕ್ಷೆಯಿದೆ. ಅಲ್ಲಿ ಅವರು ಕಾರಿಡಾರ್ ಅನ್ನು ಉದ್ಘಾಟಿಸುವ ಮೊದಲು ‘ಸಂಧ್ಯಾ ಆರತಿ’ಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಗುಜರಾತ್ನ ಮೋಧೇರಾ ಗ್ರಾಮವನ್ನು ಭಾರತದ ಮೊದಲ ‘ಸೌರಶಕ್ತಿ ಚಾಲಿತ ಗ್ರಾಮ’ ಎಂದು ಘೋಷಿಸಿದ ನರೇಂದ್ರ ಮೋದಿ
ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸುವ ಹಾಗೂ ದೇವರ ದರ್ಶನವನ್ನು ಆರಾಮದಾಯಕವಾಗಿಸುವ ಮೆಗಾ ಕಾರಿಡಾರ್ ‘ಮಹಾಕಾಲ ಲೋಕ’ವನ್ನು ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಮಹಾಕಾಳೇಶ್ವರ ದೇವಾಲಯ ಕಾರಿಡಾರ್ ಅಭಿವೃದ್ಧಿಯ ಮೊದಲನೇ ಹಂತ 856 ಕೋಟಿ ರೂ. ವೆಚ್ಚದಲ್ಲಿ ಪೂರ್ಣವಾಗಿದ್ದು, ಪ್ರಧಾನಿ ಮೋದಿ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಧಾನಿ ಇದಕ್ಕೂ ಮುನ್ನ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಕಾರಿಡಾರ್‌ನ ಪ್ರಧಾನ ದ್ವಾರವಾಗಿರುವ ‘ನಂದಿ ದ್ವಾರ’ಕ್ಕೆ ತೆರಳಿ, ಮಹಾಕಾಲ ಲೋಕದ ಉದ್ಘಾಟನೆ ನೆರವೇರಿಸಲಿದ್ದಾರೆ.
ಈ ಮಹಾಕಾಲ್ ಮಹಾರಾಜ್ ಮಂದಿರ ಪರಿಸರ ವಿಸ್ತಾರ್ ಯೋಜನೆ ಮಹಾಕಾಲ್ ದೇವಾಲಯದ ಆವರಣದ ವಿಸ್ತರಣೆ, ಸುಂದರೀಕರಣ ಮತ್ತು ದಟ್ಟಣೆಯ ಸಮಗ್ರ ಅಭಿವೃದ್ಧಿ ಯೋಜನೆಯಾಗಿದೆ. ಈ ಯೋಜನೆಯ ಮೊದಲ ಹಂತವು ಮಹಾಕಾಲ್ ಲೋಕ್ ಕಾರಿಡಾರ್‌ನ ಅಭಿವೃದ್ಧಿಯನ್ನು ಹೊಂದಿದ್ದು, ಸಂದರ್ಶಕರ ಪ್ಲಾಜಾದೊಂದಿಗೆ ಎರಡು ಪ್ರವೇಶದ್ವಾರಗಳನ್ನು ಹೊಂದಿದೆ. ಇದಕ್ಕೆ ನಂದಿ ದ್ವಾರ ಮತ್ತು ಪಿನಾಕಿ ದ್ವಾರಗಳಿವೆ. ಟಿಕೆಟಿಂಗ್ ಕಿಯೋಸ್ಕ್‌ಗಳಂತಹ ಸೌಲಭ್ಯಗಳು ಪ್ಲಾಜಾದಲ್ಲಿ ಇರುತ್ತವೆ. 900 ಮೀಟರ್ ಉದ್ದದ ಪಾದಚಾರಿ ಕಾರಿಡಾರ್ ಅನ್ನು ಮಹಾಕಾಲ್ ದೇವಸ್ಥಾನವನ್ನು 108 ಭಿತ್ತಿಚಿತ್ರಗಳು ಮತ್ತು 93 ಶಿವನ ಪ್ರತಿಮೆಗಳಿಗೆ ಸಂಪರ್ಕಿಸುವ ಮಾರ್ಗವನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: Mahakaleshwar Temple: ಅ. 11ಕ್ಕೆ ಪ್ರಧಾನಿ ಮೋದಿಯಿಂದ ದೇಶದ ಅತಿ ಉದ್ದದ ಮಹಾಕಾಳೇಶ್ವರ ದೇವಸ್ಥಾನ ಕಾರಿಡಾರ್ ಉದ್ಘಾಟನೆ
ಈ ಯೋಜನೆಯ ಮೊದಲ ಹಂತದ ಕಾಮಗಾರಿಯು 900 ಮೀಟರ್ ಉದ್ದದ ಕಾರಿಡಾರ್ ಅನ್ನು ಸ್ಕೋರ್ ಇನ್ಸ್ಟಾಲೇಷನ್, ಥೀಮ್ ಪಾರ್ಕ್, ಹೆರಿಟೇಜ್ ಮಾಲ್, ಇ-ಸಾರಿಗೆ ಸೌಲಭ್ಯಗಳು ಮುಂತಾದವುಗಳನ್ನು ಒಳಗೊಂಡಿದೆ. ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಶಿಶ್ ಕುಮಾರ್ ಪಾಠಕ್ ಪ್ರಕಾರ, 316 ಕೋಟಿ ರೂ.ಗಳ ಈ ಯೋಜನೆ ಮಿಡ್ ವೇ ಝೋನ್, ಪಾರ್ಕ್, ಕಾರುಗಳು ಮತ್ತು ಬಸ್‌ಗಳಿಗೆ ಬಹು ಅಂತಸ್ತಿನ ಪಾರ್ಕಿಂಗ್, ಸೋಲಾರ್ ಲೈಟಿಂಗ್, ಯಾತ್ರಾರ್ಥಿಗಳಿಗೆ ಸೌಲಭ್ಯ ಕೇಂದ್ರ, ಮೆಗಾ ಎಂಟ್ರಿ, ಗೇಟ್, ನರಸಿಂಗ್ ಘಾಟ್ ರಸ್ತೆ, ನೀರಿನ ಪೈಪ್‌ಲೈನ್ ಮತ್ತು ಒಳಚರಂಡಿ ಮಾರ್ಗವನ್ನು ಒಳಗೊಂಡಿದೆ.
ಈ ಮಹಾಕಾಳೇಶ್ವರ ದೇವಸ್ಥಾನ ಕಾರಿಡಾರ್ನಲ್ಲಿ ಶಿವ ತಾಂಡವ ಶ್ಲೋಕಗಳನ್ನು ಪ್ರದರ್ಶಿಸುವ 108 ಸ್ತಂಭಗಳು ಮತ್ತು ವಿವಿಧ ಕಥೆಗಳನ್ನು ಬಿಂಬಿಸುವ 52 ಭಿತ್ತಿಚಿತ್ರಗಳನ್ನು ಅಳವಡಿಸುವುದರೊಂದಿಗೆ ಬೆಳಕಿನ ಮತ್ತು ಧ್ವನಿ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಹಲವಾರು ಪ್ರತಿಮೆಗಳನ್ನು ಸಹ ನಿರ್ಮಿಸಲಾಗಿದೆ
ಈ ಕಾರಿಡಾರ್ನಲ್ಲಿ ಒಟ್ಟು 108 ಕಂಬಗಳಿವೆ. ಈ ಕಾರಿಡಾರ್ ಸುಂದರವಾದ ಬೆಳಕಿನ ಕೆಲಸ ಮತ್ತು ಶಿಲ್ಪಗಳನ್ನು ಹೊಂದಿದೆ. ಮೊದಲ ಹಂತದಲ್ಲಿ ಮಹಾಕಾಳ್ ಪ್ಲಾಜಾ, ಮಹಾಕಾಳ್ ಕಾರಿಡಾರ್, ಮಿಡ್‌ವೇ ಝೋನ್, ಮಹಾಕಾಳ್ ಥೀಮ್ ಪಾರ್ಕ್, ಘಾಟ್ ಮತ್ತು ಡೆಕ್ ಏರಿಯಾ, ನೂತನ್ ಸ್ಕೂಲ್ ಕಾಂಪ್ಲೆಕ್ಸ್, ಗಣೇಶ್ ಸ್ಕೂಲ್ ಕಾಂಪ್ಲೆಕ್ಸ್, ಪಾರ್ಕಿಂಗ್, ಧರ್ಮಶಾಲಾ, ಪ್ರವಚನ ಭವನ ಮತ್ತು ಅನ್ನ ಕ್ಷೇತ್ರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:29 am, Tue, 11 October 22