ಅಹಮದಾಬಾದ್‌ನಲ್ಲಿ ಕ್ರೀಡಾ ಕೇಂದ್ರವಾಗಿ ಬದಲಾದ ಫ್ಲೈ ಓವರ್ ಕೆಳಗಿನ ಜಾಗ; ಇದು ಪ್ರಧಾನಿ ಮೋದಿ ಐಡಿಯಾ

ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದ ಪ್ರಕಾರ, ಅಹಮದಾಬಾದ್​ನ ಸೇತುವೆಗಳ ಕೆಳಗಿನ ಬಳಕೆಯಾಗದ ಪ್ರದೇಶಗಳನ್ನು ಕ್ರೀಡಾ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಅಹಮದಾಬಾದ್‌ನಲ್ಲಿ ಬಳಕೆಯಾಗದ ನಗರ ಸ್ಥಳವು ಕ್ರೀಡಾ ಕೇಂದ್ರಗಳಾಗುತ್ತಿದೆ. ಗುಜರಾತ್ ಸರ್ಕಾರವು ಫ್ಲೈ ಓವರ್ ಕೆಳಗಿನ ಬಳಕೆಯಾಗದ ಪ್ರದೇಶಗಳನ್ನು ಕ್ರೀಡಾ ಕೇಂದ್ರಗಳಾಗಿ ಪರಿವರ್ತಿಸುತ್ತಿದೆ.

ಅಹಮದಾಬಾದ್‌ನಲ್ಲಿ ಕ್ರೀಡಾ ಕೇಂದ್ರವಾಗಿ ಬದಲಾದ ಫ್ಲೈ ಓವರ್ ಕೆಳಗಿನ ಜಾಗ; ಇದು ಪ್ರಧಾನಿ ಮೋದಿ ಐಡಿಯಾ
Sports Hubs In Ahmedabad
Follow us
ಸುಷ್ಮಾ ಚಕ್ರೆ
|

Updated on: Jan 24, 2025 | 8:24 PM

ಅಹಮದಾಬಾದ್: ನಗರಗಳಲ್ಲಿ ಬಳಕೆಯಾಗದೆ ಉಳಿದಿರುವ ಸ್ಥಳಗಳನ್ನು ಸದ್ಭಳಕೆ ಮಾಡಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನದಿಂದ ಪ್ರೇರಿತರಾದ ಗುಜರಾತ್ ಸರ್ಕಾರವು ಸೇತುವೆಗಳ ಅಡಿಯಲ್ಲಿರುವ ಬಳಕೆಯಾಗದ ಪ್ರದೇಶಗಳನ್ನು ಕ್ರೀಡಾ ಕೇಂದ್ರಗಳಾಗಿ ಪರಿವರ್ತಿಸುತ್ತಿದೆ. ಸಾರ್ವಜನಿಕ ಸ್ಥಳಗಳನ್ನು ಪುನರುಜ್ಜೀವನಗೊಳಿಸುವ, ಆರೋಗ್ಯ ಮತ್ತು ಸ್ವಾಸ್ಥ್ಯದ ಸಂಸ್ಕೃತಿಯನ್ನು ಇದು ಹರಡುತ್ತಿದೆ. ಗುಜರಾತ್‌ಗೆ ತಮ್ಮ ಕೊನೆಯ ಭೇಟಿಯ ನೀಡಿದ್ದಾಗ ಪ್ರಧಾನಿ ಮೋದಿ ಮೇಲ್ಸೇತುವೆಗಳ ಅಡಿಯಲ್ಲಿರುವ ಪ್ರದೇಶವನ್ನು ಸರಿಯಾಗಿ ಬಳಸಿಕೊಳ್ಳುವ ಬಗ್ಗೆ ಗುಜರಾತ್ ರಾಜ್ಯ ಸರ್ಕಾರದೊಂದಿಗೆ ತಮ್ಮ ಕಲ್ಪನೆಯನ್ನು ಹಂಚಿಕೊಂಡಿದ್ದರು.

ಫ್ಲೈ ಓವರ್ ಕೆಳಗಿನ ಸ್ಥಳವನ್ನು ಕ್ರೀಡಾ ಹಬ್​ಗೆ ಬಳಸಿಕೊಳ್ಳುವುದರಿಂದ ಯುವಕರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು, ವೃದ್ಧರು ತಮ್ಮ ಸಮಯವನ್ನು ಕಳೆಯಬಹುದು, ಆಹಾರ ಮಳಿಗೆಗಳನ್ನು ಸ್ಥಾಪಿಸಬಹುದು ಮತ್ತು ಇದರಿಂದ ಉದ್ಯೋಗವನ್ನು ಸೃಷ್ಟಿಸಬಹುದು. ಕೆಲವು ಬ್ಲಾಕ್‌ಗಳನ್ನು ಪಾರ್ಕಿಂಗ್‌ಗಾಗಿ ಮೀಸಲಿಡಬಹುದು ಎಂದು ಮೋದಿ ಸಲಹೆ ನೀಡಿದ್ದರು. ಈ ಮೂಲಕ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಹೆಚ್ಚಿನ ಉದ್ಯೋಗವನ್ನು ನೀಡಬೇಕು ಎಂದು ಅವರು ಹೇಳಿದ್ದರು.

ಮಕ್ಕಳು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಅವರು ಮೊಬೈಲ್‌ಗಳಿಂದ ದೂರವಿರಲು ಸೌಲಭ್ಯಗಳು ಸಹಾಯ ಮಾಡಬೇಕು ಎಂದು ಮೋದಿ ಹೇಳಿದ್ದರು. ಈ ದೃಷ್ಟಿಕೋನವನ್ನು ಅಹಮದಾಬಾದ್ ಮಹಾನಗರ ಪಾಲಿಕೆಯು ಸಾಕಾರಗೊಳಿಸಿದ್ದು, ಇದು ಅಂಡರ್‌ಬ್ರಿಡ್ಜ್ ಸ್ಪೇಸ್‌ಗಳನ್ನು ಆಕರ್ಷಕ ಸ್ಪೋರ್ಟ್ಸ್ ಹಬ್‌ಗಳಾಗಿ ಪರಿವರ್ತಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ‘ಭಾರತ ಮೊದಲು’, ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶ್ಲಾಘನೆ

ಅಹಮದಾಬಾದ್‌ನ ವಾಯುವ್ಯ ವಲಯದ ಗೋಟಾ ವಾರ್ಡ್‌ನಲ್ಲಿರುವ CIMS ರೈಲ್ವೆ ಓವರ್ ಬ್ರಿಡ್ಜ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಈ ರೀತಿಯ ಕ್ರೀಡಾ ಹಬ್ ಸೌಲಭ್ಯವನ್ನು ಉದ್ಘಾಟಿಸಿದರು. ಇದನ್ನು ಕೇವಲ 3.5 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದೆ. ಅಹಮದಾಬಾದ್‌ನಲ್ಲಿ ಇನ್ನೂ 10 ಮೇಲ್ಸೇತುವೆಗಳು, ಸೂರತ್‌ನಲ್ಲಿ 2, ವಡೋದರಾದಲ್ಲಿ 4, ರಾಜ್‌ಕೋಟ್‌ನಲ್ಲಿ 2 ಮತ್ತು ಗಾಂಧಿನಗರ ಮಹಾನಗರ ಪಾಲಿಕಾದಲ್ಲಿ 2 ಮೇಲ್ಸೇತುವೆಗಳನ್ನು ಈ ಉಪಕ್ರಮದ ಅಡಿಯಲ್ಲಿ ಇದೇ ರೀತಿ ಪರಿವರ್ತಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ