ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದಿನಿಂದ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಂದು ಗುಜರಾತ್ಗೆ ಹೋದ ಅವರು ಮೊದಲು ಗಾಂಧಿನಗರದಲ್ಲಿರುವ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಫಾರ್ ಸ್ಕೂಲ್ಗೆ ಭೇಟಿ ಕೊಟ್ಟರು. ಅಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡು ಪರಿಶೀಲನೆ ನಡೆಸಿದ್ದಾರೆ. ಅದಕ್ಕೂ ಮೊದಲು ಪ್ರಧಾನಿ ಮೋದಿ ವೇದವ್ಯಾಸ ಮಹರ್ಷಿಗೆ ಪುಷ್ಪ ನಮನ ಸಲ್ಲಿಸಿ, ದೀಪ ಹಚ್ಚಿದರು. ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 20ರವರೆಗೆ ಗುಜರಾತ್ನಲ್ಲಿಯೇ ಇರಲಿದ್ದಾರೆ.
ಏಪ್ರಿಲ್ 19ರಂದು ಬೆಳಗ್ಗೆ 9.40ಕ್ಕೆ ಬನಸ್ಕಾಂತಾದ ಡಿಯೋಡರ್ನಲ್ಲಿರುವ ಬನಾಸ್ ಡೇರಿ ಸಂಕುಲ್ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದಾರೆ. ಮಧ್ಯಾಹ್ನ 3.30ರ ಹೊತ್ತಿಗೆ ಜಮ್ನಗರ್ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧ ಜಾಗತಿಕ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಡಬ್ಲ್ಯೂಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಘೆಬ್ರೆಯೆಸಸ್ ಕೂಡ ಇರಲಿದ್ದಾರೆ.
ಏಪ್ರಿಲ್ 20ರಂದು ಬೆಲಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಗಾಂಧಿನಗರದಲ್ಲಿ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ ಉದ್ಘಾಟಿಸುವರು. ಅಂದು ಮಧ್ಯಾಹ್ನ 3.30ಕ್ಕೆ ದಾಹೋದ್‌ನಲ್ಲಿ ಆದಿಜಾತಿ ಮಹಾ ಸಮ್ಮೇಳನ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂದು ಮಾರಿಷಸ್ ಪ್ರಧಾನಮಂತ್ರಿ ಪ್ರವಿಂದ್ ಕುಮಾರ್ ಜುಗ್ನಾಥ್ ಕೂಡ ಗುಜರಾತ್ಗೆ ಆಗಮಿಸಿದ್ದು, ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಅಲ್ಲದೆ, ರಾಜ್ಕೋಟ್ನಿಂದ ಎರಡು ಕಿಮೀ ದೂರದವರೆಗೆ ರೋಡ್ ಶೋ ಮೂಲಕ ಕರೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: ಪುನೀತ್ ಜತೆ ಪ್ರಶಾಂತ್ ನೀಲ್ ‘ಆಹ್ವಾನ’ ಚಿತ್ರ ಮಾಡಬೇಕಿತ್ತು; ಸಿನಿಮಾ ಟೇಕ್ ಆಫ್ ಆಗದಿರಲು ಕಾರಣ ಇಲ್ಲಿದೆ