ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಧರಿಸಿದ್ದ ಮುಂಡಾಸನ್ನು ಯಾರು ನೀಡಿದ್ದು ಗೊತ್ತಾ?
ದೆಹಲಿ: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿಯವರು ಧರಿಸಿದ್ದ ಮುಂಡಾಸು ಎಲ್ಲರ ಗಮನವನ್ನು ತನ್ನತ್ತ ಸೆಳೆದಿತ್ತು. ಅಂದ ಹಾಗೆ, ಈ ಪೇಟವನ್ನು ಗುಜರಾತ್ನ ತಾಪಿ ಜಿಲ್ಲೆಯ 38 ವರ್ಷದ ರೈತ ಸುಜಾನ್ಸಿಂಗ್ ಪಾರ್ಮಾರ್ ಪ್ರಧಾನಿಗೆ ಉಡುಗೊರೆಯಾಗಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಪ್ರಧಾನಿ ನಾನು ಕಳಿಸಿದ ಪೇಟವನ್ನು ಧರಿಸಬೇಕು. ಆಗ ನನ್ನ ಕನಸು ಈಡೇರುತ್ತದೆ ಎಂದು ಪಾರ್ಮಾರ್ ಆಶಯಪಟ್ಟಿದ್ದರಂತೆ. ಈ ಸಂತಸವನ್ನು ಖುದ್ದು ಹಂಚಿಕೊಂಡಿರುವ ಪಾರ್ಮಾರ್ ಗುಜರಾತ್ ಸಂಸದ ಸಿ.ಆರ್ […]
ದೆಹಲಿ: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿಯವರು ಧರಿಸಿದ್ದ ಮುಂಡಾಸು ಎಲ್ಲರ ಗಮನವನ್ನು ತನ್ನತ್ತ ಸೆಳೆದಿತ್ತು. ಅಂದ ಹಾಗೆ, ಈ ಪೇಟವನ್ನು ಗುಜರಾತ್ನ ತಾಪಿ ಜಿಲ್ಲೆಯ 38 ವರ್ಷದ ರೈತ ಸುಜಾನ್ಸಿಂಗ್ ಪಾರ್ಮಾರ್ ಪ್ರಧಾನಿಗೆ ಉಡುಗೊರೆಯಾಗಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಪ್ರಧಾನಿ ನಾನು ಕಳಿಸಿದ ಪೇಟವನ್ನು ಧರಿಸಬೇಕು. ಆಗ ನನ್ನ ಕನಸು ಈಡೇರುತ್ತದೆ ಎಂದು ಪಾರ್ಮಾರ್ ಆಶಯಪಟ್ಟಿದ್ದರಂತೆ.
ಈ ಸಂತಸವನ್ನು ಖುದ್ದು ಹಂಚಿಕೊಂಡಿರುವ ಪಾರ್ಮಾರ್ ಗುಜರಾತ್ ಸಂಸದ ಸಿ.ಆರ್ ಪಾಟೀಲ್ ಅವರಿಂದ ನನಗೆ ಕರೆ ಬಂದಿದ್ದು, ಆರು ಮುಂಡಾಸುಗಳನ್ನು ತಯಾರಿಸುವಂತೆ ತಿಳಿಸಿದ್ದರು. ಆ ಪೇಟಗಳನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಗುವುದು ಎಂದು ಹೇಳಿದರು. ಪಾಟೀಲ್ ಅಣತಿಯಂತೆ ಪಾರ್ಮಾರ್ ಆರು ಪೇಟಗಳನ್ನು ತಯಾರಿಸಿ ಆಗಸ್ಟ್ 10 ರಂದು ಪಾಟೀಲ್ ಕಚೇರಿಗೆ ಕಳುಹಿಸಿದ್ದರು.
ಪ್ರಧಾನಿ ಮೋದಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಅವರನ್ನು ಭೇಟಿಯಾಗಲು ನನಗೆ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ನಾನು ಅವರಿಗೆ ಪೇಟಗಳನ್ನು ಉಡುಗೊರೆಯಾಗಿ ನೀಡಿದ್ದೆ. ಆದರೆ ಅಂದು ಅವರು ಆ ಮುಂಡಾಸುಗಳನ್ನು ಧರಿಸಿರಲಿಲ್ಲ. ಆದರೆ, ಈ ಬಾರಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಭಾಷಣ ಮಾಡುವಾಗ ಪ್ರಧಾನಿ ನಾನು ಕಳಿಸಿದ್ದ ಮುಂಡಾಸನ್ನು ಧರಿಸಿದ್ದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ ಎಂದಿದ್ದಾರೆ. ಜೊತೆಗೆ, ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯಂಥ ಹಲವಾರು ನಾಯಕರು ಸಹ ನನ್ನಿಂದ ಉಡುಗೊರೆಯಾಗಿ ಪೇಟಗಳನ್ನು ಪಡೆದಿದ್ದಾರೆ ಎಂದು ಪಾರ್ಮಾರ್ ಹೇಳಿದರು.
ಪಾರ್ಮಾರ್ ವೃತ್ತಿಯಲ್ಲಿ ಕೃಷಿಕರಾಗಿದ್ರೂ ಮುಂಡಾಸುಗಳನ್ನ ತಯಾರಿಸುವುದು ಅವರ ಹವ್ಯಾಸ. ಕಳೆದ 16 ವರ್ಷಗಳಿಂದ ನಾನು ರಜಪೂತ ಸಮುದಾಯದ ಜನರಿಗಾಗಿ ಪೇಟಗಳನ್ನು ಕಟ್ಟುತ್ತಿದ್ದೇನೆ. ನಾನು ಕೇವಲ 18 ಸೆಕೆಂಡ್ನಲ್ಲಿ ಒಂದು ಪೇಟವನ್ನು ಕಟ್ಟಬಲ್ಲೆ ಎಂದು ಪಾರ್ಮಾರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.