ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಧರಿಸಿದ್ದ ಮುಂಡಾಸನ್ನು ಯಾರು ನೀಡಿದ್ದು ಗೊತ್ತಾ?

ದೆಹಲಿ: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿಯವರು ಧರಿಸಿದ್ದ ಮುಂಡಾಸು ಎಲ್ಲರ ಗಮನವನ್ನು ತನ್ನತ್ತ ಸೆಳೆದಿತ್ತು. ಅಂದ ಹಾಗೆ, ಈ ಪೇಟವನ್ನು ಗುಜರಾತ್​ನ ತಾಪಿ ಜಿಲ್ಲೆಯ 38 ವರ್ಷದ ರೈತ ಸುಜಾನ್​ಸಿಂಗ್​ ಪಾರ್ಮಾರ್ ಪ್ರಧಾನಿಗೆ ಉಡುಗೊರೆಯಾಗಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಪ್ರಧಾನಿ ನಾನು ಕಳಿಸಿದ ಪೇಟವನ್ನು ಧರಿಸಬೇಕು. ಆಗ ನನ್ನ ಕನಸು ಈಡೇರುತ್ತದೆ ಎಂದು ಪಾರ್ಮಾರ್ ಆಶಯಪಟ್ಟಿದ್ದರಂತೆ. ಈ ಸಂತಸವನ್ನು ಖುದ್ದು ಹಂಚಿಕೊಂಡಿರುವ ಪಾರ್ಮಾರ್ ಗುಜರಾತ್​​ ಸಂಸದ ಸಿ.ಆರ್​ […]

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಧರಿಸಿದ್ದ ಮುಂಡಾಸನ್ನು ಯಾರು ನೀಡಿದ್ದು ಗೊತ್ತಾ?
ಸಾಧು ಶ್ರೀನಾಥ್​ Edited By:

Updated on: Aug 19, 2020 | 5:57 PM

ದೆಹಲಿ: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿಯವರು ಧರಿಸಿದ್ದ ಮುಂಡಾಸು ಎಲ್ಲರ ಗಮನವನ್ನು ತನ್ನತ್ತ ಸೆಳೆದಿತ್ತು. ಅಂದ ಹಾಗೆ, ಈ ಪೇಟವನ್ನು ಗುಜರಾತ್​ನ ತಾಪಿ ಜಿಲ್ಲೆಯ 38 ವರ್ಷದ ರೈತ ಸುಜಾನ್​ಸಿಂಗ್​ ಪಾರ್ಮಾರ್ ಪ್ರಧಾನಿಗೆ ಉಡುಗೊರೆಯಾಗಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಪ್ರಧಾನಿ ನಾನು ಕಳಿಸಿದ ಪೇಟವನ್ನು ಧರಿಸಬೇಕು. ಆಗ ನನ್ನ ಕನಸು ಈಡೇರುತ್ತದೆ ಎಂದು ಪಾರ್ಮಾರ್ ಆಶಯಪಟ್ಟಿದ್ದರಂತೆ.

ಈ ಸಂತಸವನ್ನು ಖುದ್ದು ಹಂಚಿಕೊಂಡಿರುವ ಪಾರ್ಮಾರ್ ಗುಜರಾತ್​​ ಸಂಸದ ಸಿ.ಆರ್​ ಪಾಟೀಲ್ ಅವರಿಂದ ನನಗೆ ಕರೆ ಬಂದಿದ್ದು, ಆರು ಮುಂಡಾಸುಗಳನ್ನು ತಯಾರಿಸುವಂತೆ ತಿಳಿಸಿದ್ದರು. ಆ ಪೇಟಗಳನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಗುವುದು ಎಂದು ಹೇಳಿದರು. ಪಾಟೀಲ್ ಅಣತಿಯಂತೆ ಪಾರ್ಮಾರ್ ಆರು ಪೇಟಗಳನ್ನು ತಯಾರಿಸಿ ಆಗಸ್ಟ್ 10 ರಂದು ಪಾಟೀಲ್ ಕಚೇರಿಗೆ ಕಳುಹಿಸಿದ್ದರು.

ಪ್ರಧಾನಿ ಮೋದಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಅವರನ್ನು ಭೇಟಿಯಾಗಲು ನನಗೆ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ನಾನು ಅವರಿಗೆ ಪೇಟಗಳನ್ನು ಉಡುಗೊರೆಯಾಗಿ ನೀಡಿದ್ದೆ. ಆದರೆ ಅಂದು ಅವರು ಆ ಮುಂಡಾಸುಗಳನ್ನು ಧರಿಸಿರಲಿಲ್ಲ. ಆದರೆ, ಈ ಬಾರಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಭಾಷಣ ಮಾಡುವಾಗ ಪ್ರಧಾನಿ ನಾನು ಕಳಿಸಿದ್ದ ಮುಂಡಾಸನ್ನು ಧರಿಸಿದ್ದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ ಎಂದಿದ್ದಾರೆ. ಜೊತೆಗೆ, ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯಂಥ ಹಲವಾರು ನಾಯಕರು ಸಹ ನನ್ನಿಂದ ಉಡುಗೊರೆಯಾಗಿ ಪೇಟಗಳನ್ನು ಪಡೆದಿದ್ದಾರೆ ಎಂದು ಪಾರ್ಮಾರ್ ಹೇಳಿದರು.

ಪಾರ್ಮಾರ್ ವೃತ್ತಿಯಲ್ಲಿ ಕೃಷಿಕರಾಗಿದ್ರೂ ಮುಂಡಾಸುಗಳನ್ನ ತಯಾರಿಸುವುದು ಅವರ ಹವ್ಯಾಸ. ಕಳೆದ 16 ವರ್ಷಗಳಿಂದ ನಾನು ರಜಪೂತ ಸಮುದಾಯದ ಜನರಿಗಾಗಿ ಪೇಟಗಳನ್ನು ಕಟ್ಟುತ್ತಿದ್ದೇನೆ. ನಾನು ಕೇವಲ 18 ಸೆಕೆಂಡ್​ನಲ್ಲಿ ಒಂದು ಪೇಟವನ್ನು ಕಟ್ಟಬಲ್ಲೆ ಎಂದು ಪಾರ್ಮಾರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us