Indian Navy Day: ಇಂದು ಭಾರತೀಯ ನೌಕಾ ದಿನ; ನೌಕಾಪಡೆಯ ಸಾಹಸ, ಶೌರ್ಯ ಹೊಗಳಿ, ಶುಭಕೋರಿದ ಪ್ರಧಾನಿ ಮೋದಿ​

1971ರಲ್ಲಿ  ಇಂಡೋ-ಪಾಕ್ ಯುದ್ಧ ನಡೆದಾಗ ಭಾರತೀಯ ನೌಕಾಪಡೆ ಆಪರೇಶನ್​ ಟ್ರೈಡೆಂಟ್​ ಮೂಲಕ ಪಾಕ್​ ಸೇನೆಗೆ ಮಣ್ಣುಮುಕ್ಕಿಸಿದೆ. ಈ ಕಾರ್ಯಾಚರಣೆ ಪ್ರಾರಂಭ ಮಾಡಿದ ದಿನದ ಸ್ಮರಣೆಗಾಗಿ ಪ್ರತಿವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

Indian Navy Day: ಇಂದು ಭಾರತೀಯ ನೌಕಾ ದಿನ; ನೌಕಾಪಡೆಯ ಸಾಹಸ, ಶೌರ್ಯ ಹೊಗಳಿ, ಶುಭಕೋರಿದ ಪ್ರಧಾನಿ ಮೋದಿ​
ಇಂದು ನೌಕಾ ದಿನ
Follow us
TV9 Web
| Updated By: Lakshmi Hegde

Updated on:Dec 04, 2021 | 2:11 PM

ಇಂದು ಭಾರತೀಯ ನೌಕಾ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುಭಕೋರಿದ್ದಾರೆ. ಟ್ವೀಟ್ ಮಾಡಿರುವ ಅವರು, ನೌಕಾ ಪಡೆ ದಿನದ ಶುಭಾಶಯಗಳು. ನಮ್ಮ ನೌಕಾಪಡೆ ಅದರ ವೃತ್ತಿಪರತೆ ಮತ್ತು ಅಮೋಘ ಶೌರ್ಯದಿಂದಾಗಿ ವ್ಯಾಪಕವಾಗಿ ಗೌರವಿಸಲ್ಪಡುತ್ತದೆ. ನೌಕಾಪಡೆಯ ಅನುಕರಣನೀಯ ಕೊಡುಗೆಗಳು ಹೆಮ್ಮೆ ಪಡುವಂಥದ್ದು. ಪ್ರಾಕೃತಿಕ ವಿಕೋಪದಂಥ ಪರಿಸ್ಥಿತಿಯಲ್ಲಿ ನಮ್ಮ ನೌಕಾಪಡೆ ಸಿಬ್ಬಂದಿ ಸದಾ ದೇಶದ ಜನರ ಸಹಾಯಕ್ಕೆ  ನಿಲ್ಲುತ್ತಾರೆ ಎಂದು ಹೇಳಿದ್ದಾರೆ. ಹಾಗೆ, ತಾವು ಮನ್​ ಕೀ ಬಾತ್​​ನಲ್ಲಿ ನೌಕಾಪಡೆ ದಿನ ಮತ್ತು ನೇವಿ ಸಿಬ್ಬಂದಿ ಬಗ್ಗೆ ಮಾತನಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.   

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಟ್ವೀಟ್ ಮೂಲಕ ನೌಕಾ ದಿನದ ಶುಭಾಶಯ ಕೋರಿದ್ದಾರೆ. 1971ರಲ್ಲಿ ನಡೆದ ಇಂಡೋ-ಪಾಕ್​ ಯುದ್ಧದ ಸಂದರ್ಭದಲ್ಲಿ ನಮ್ಮ ನೌಕಾಪಡೆಯ ಧೈರ್ಯಶಾಲಿ ಕಾರ್ಯಾಚರಣೆಯಾದ ಆಪರೇಶನ್​ ಟ್ರೈಡೆಂಟ್​​ನ್ನು ಸ್ಮರಿಸುವ ದಿನ ಇಂದು. ನಮ್ಮ ಕಡಲ ಭದ್ರತೆ ಕಾಯುತ್ತ, ರಾಷ್ಟ್ರದ ಹಿತಾಸಕ್ತಿಯನ್ನು ರಕ್ಷಿಸುತ್ತಿರುವ ಇಡೀ ನೌಕಾಪಡೆ ಸಿಬ್ಬಂದಿಗೆ ಶುಭ ಹಾರೈಕೆಗಳು ಎಂದಿದ್ದಾರೆ.  ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ನೌಕಾ ದಿನದಂದು ಭಾರತೀಯ ನೌಕಾಪಡೆಯ ವೀರ ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ಶುಭ ಹಾರೈಕೆಗಳು. ದೇಶದ ಕಡಲ ಭದ್ರತೆಯಲ್ಲಿ ಮತ್ತು ನಾಗರಿಕ ತುರ್ತು ಪರಿಸ್ಥಿತಿಗಳಲ್ಲಿ ಸಾಮಾನ್ಯ ಜನರ ರಕ್ಷಣೆಗೆ ಬರುವ ಅವರ ಬದ್ಧತೆ ತುಂಬ ಹೆಮ್ಮೆ ಪಡುವಂಥ ವಿಚಾರ ಎಂದು ಹೇಳಿದ್ದಾರೆ.  ಇನ್ನು ಪಿಯುಷ್ ಗೋಯೆಲ್​ ಸೇರಿ ಹಲವು ನಾಯಕರು ನೌಕಾಪಡೆ ದಿನದ ಶುಭಾಶಯ ಕೋರಿದ್ದಾರೆ.

1971ರಲ್ಲಿ  ಇಂಡೋ-ಪಾಕ್ ಯುದ್ಧ ನಡೆದಾಗ ಭಾರತೀಯ ನೌಕಾಪಡೆ ಆಪರೇಶನ್​ ಟ್ರೈಡೆಂಟ್​ ಮೂಲಕ ಪಾಕ್​ ಸೇನೆಗೆ ಮಣ್ಣುಮುಕ್ಕಿಸಿದೆ. ಈ ಕಾರ್ಯಾಚರಣೆ ಪ್ರಾರಂಭ ಮಾಡಿದ ದಿನದ ಸ್ಮರಣೆಗಾಗಿ ಪ್ರತಿವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಆಪರೇಶನ್​ ಟ್ರೈಡೆಂಟ್ ಭಾರತದ ಇತಿಹಾಸದಲ್ಲಿ ಒಂದು ರೋಚಕ ಕಾರ್ಯಾಚರಣೆಯಾಗಿದೆ. ಇದರ ಮೂಲಕ ಭಾರತದ ನೌಕಾಪಡೆ ಯೋಧರು ಪಾಕಿಸ್ತಾನದ ಹಡಗುಗಳನ್ನು ಮುಳುಗಿಸಿದರು. ಅಷ್ಟೇ ಅಲ್ಲ, ನೂರಾರು ಪಾಕ್​ ಸಿಬ್ಬಂದಿಯನ್ನು ಕೊಂದಿದ್ದಾರೆ.

ಇದನ್ನೂ ಓದಿ: Best Smartphones: ಡಿಸೆಂಬರ್​ನಲ್ಲಿ 30,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

Published On - 2:10 pm, Sat, 4 December 21