Dilip Kumar: ಬಾಲಿವುಡ್​ ಹಿರಿಯ ನಟ ದಿಲೀಪ್​ ಕುಮಾರ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ಮೋದಿ, ರಾಹುಲ್​ ಗಾಂಧಿ

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್​ ಕುಮಾರ್​ರನ್ನು ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ 7.30ರ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ.

Dilip Kumar: ಬಾಲಿವುಡ್​ ಹಿರಿಯ ನಟ ದಿಲೀಪ್​ ಕುಮಾರ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ಮೋದಿ, ರಾಹುಲ್​ ಗಾಂಧಿ
ದಿಲೀಪ್​ ಕುಮಾರ್​
TV9kannada Web Team

| Edited By: Lakshmi Hegde

Jul 07, 2021 | 10:19 AM

ಬಾಲಿವುಡ್ ಹಿರಿಯ ನಟ ದಿಲೀಪ್​ ಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಸೇರಿ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ದಿಲೀಪ್​ ಕುಮಾರ್​ ಅವರು ಸಿನಿಮೀಯ ಲೋಕದ ದಂತಕತೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಅವರ ನಿಧನದಿಂದ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದೂ ಟ್ವೀಟ್​ ಮಾಡಿದ್ದಾರೆ. ಹಾಗೇ, ದಿಲೀಪ್​ ಕುಮಾರ್ ಪತ್ನಿ, ನಟಿ ಸಾರಿಯಾ ಬಾನು ಅವರಿಗೆ ಕರೆ ಮಾಡಿ ಮಾತನಾಡಿದ ನರೇಂದ್ರ ಮೋದಿಯವರು ಸಾಂತ್ವನದ ಮಾತುಗಳನ್ನು ಆಡಿದ್ದಾರೆ.

ಸಿನಿಮೀಯ ದಂತಕತೆಯಾಗಿದ್ದ ದಿಲೀಪ್ ಕುಮಾರ್ ಜಿ ಅವರ ಚುರುಕತನಕ್ಕೆ ಸರಿಸಾಟಿ ಇನ್ನೊಂದಿಲ್ಲ. ಹಲವು ತಲೆಮಾರುಗಳ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರ ನಿಧನದಿಂದ ಸಾಂಸ್ಕೃತಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದವರಿಗೆ, ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ದಿಲೀಪ್​ ಕುಮಾರ್​ ಅವರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡು, ಭಾರತದ ಸಿನಿಮಾ ಜಗತ್ತಿಗೆ ದಿಲೀಪ್​ ಕುಮಾರ್​ ಜೀ ನೀಡಿರುವ ಕೊಡುಗೆ ಸದಾ ಸ್ಮರಣೀಯ. ಅವರ ಕುಟುಂಬ, ಸ್ನೇಹಿತ ವರ್ಗಕ್ಕೆ ನನ್ನ ಹೃದಯಪೂರ್ವಕ ಸಾಂತ್ವನಗಳು ಎಂದು ಹೇಳಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್​ ಕುಮಾರ್​ರನ್ನು ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ 7.30ರ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ. ಮೊಘಲ ಇ ಅಝಾಮ್​, ದೇವ್​ದಾಸ್​, ನಯಾ ದೌರ್​, ಗಂಗಾ ಜಮುನಾ, ರಾಮ್ ಔರ್​ ಶ್ಯಾಮ್​ನಂಥ ಹಿಟ್​ ಫಿಲ್ಮ್​ಗಳನ್ನು ಕೊಟ್ಟಿರುದ ದಿಲೀಪ್​ ಕುಮಾರ್​ ಅಪಾರ ಅಭಿಮಾನ ಬಳಗವಿದೆ. 1991ರಲ್ಲಿ ಪದ್ಮಭೂಷಣ ಮತ್ತು 2015ರಲ್ಲಿ ಪದ್ಮವಿಭೂಷಣ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

id

PM Narendra Modi and Rahul Gandhi tributes to Bollywood Actor Dilip Kumar

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada