ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್​​ಗೆ 2 ಕೋಟಿ ಚಂದಾದಾರರು

|

Updated on: Dec 26, 2023 | 5:16 PM

ಪ್ರಧಾನಿ ಮೋದಿ ಅವರು ತಮ್ಮ ವೈಯಕ್ತಿಕ ಯೂಟ್ಯೂಬ್ ಚಾನೆಲ್‌ನಲ್ಲಿ 2 ಕೋಟಿ ಚಂದಾದಾರರನ್ನು ಹೊಂದಿರುವ ಹಿರಿಮೆಯನ್ನು ಸಾಧಿಸಿದ ಏಕೈಕ ವಿಶ್ವ ನಾಯಕ ಎನಿಸಿಕೊಂಡಿದ್ದಾರೆ. 4.5 ಬಿಲಿಯನ್ (450 ಕೋಟಿ) ವಿಡಿಯೊ ವೀಕ್ಷಣೆಗಳೊಂದಿಗೆ, ನರೇಂದ್ರ ಮೋದಿ ಅವರ ಚಾನೆಲ್ ಚಂದಾದಾರರು, ವಿಡಿಯೊಗಳ ವೀಕ್ಷಣೆಗಳು ಮತ್ತು ಯೂಟ್ಯೂಬ್‌ನಲ್ಲಿ ರಾಜಕೀಯ ನಾಯಕರು ಪೋಸ್ಟ್ ಮಾಡುತ್ತಿರುವ ವಿಡಿಯೊಗಳ ಗುಣಮಟ್ಟದಲ್ಲಿಯೂ ಮುಂಚೂಣಿಯಲ್ಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್​​ಗೆ 2 ಕೋಟಿ ಚಂದಾದಾರರು
ನರೇಂದ್ರ ಮೋದಿ
Follow us on

ದೆಹಲಿ ಡಿಸೆಂಬರ್ 26: ನರೇಂದ್ರ ಮೋದಿಯವರ (Narendra Modi) ಜನಪ್ರಿಯತೆ ಹೆಚ್ಚುತ್ತಿದ್ದಂತೆ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ (Youtube Channel) ಎರಡು ಕೋಟಿ ಅಥವಾ 20 ಮಿಲಿಯನ್ ಚಂದಾದಾರರನ್ನು ಗಳಿಸಿದೆ. ವೈವಿಧ್ಯಮಯ ವಿಷಯವನ್ನು ಒಳಗೊಂಡಿರುವ ನರೇಂದ್ರ ಮೋದಿ ಅವರ ಚಾನೆಲ್, ಚಂದಾದಾರರ ಸಂಖ್ಯೆ ಮತ್ತು ವಿಡಿಯೊ ವೀಕ್ಷಣೆಯ ಪ್ರಮಾಣದಲ್ಲಿ ಇತರ ಭಾರತೀಯ ರಾಜಕಾರಣಿಗಳನ್ನು ಮಾತ್ರವಲ್ಲದೆ ವಿಶ್ವದ ನಾಯಕರನ್ನೂ ಮೀರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ಯೂಟ್ಯೂಬ್ ಚಾನೆಲ್‌ನಲ್ಲಿ 2 ಕೋಟಿ ಚಂದಾದಾರರನ್ನು ಹೊಂದಿರುವ ಈ ಹಿರಿಮೆಯನ್ನು ಸಾಧಿಸಿದ ಏಕೈಕ ವಿಶ್ವ ನಾಯಕ ಎನಿಸಿಕೊಂಡಿದ್ದಾರೆ. 4.5 ಬಿಲಿಯನ್ (450 ಕೋಟಿ) ವಿಡಿಯೊ ವೀಕ್ಷಣೆಗಳೊಂದಿಗೆ, ನರೇಂದ್ರ ಮೋದಿ ಅವರ ಚಾನೆಲ್ ಚಂದಾದಾರರು, ವಿಡಿಯೊಗಳ ವೀಕ್ಷಣೆಗಳು ಮತ್ತು ಯೂಟ್ಯೂಬ್‌ನಲ್ಲಿ ರಾಜಕೀಯ ನಾಯಕರು ಪೋಸ್ಟ್ ಮಾಡುತ್ತಿರುವ ವಿಡಿಯೊಗಳ ಗುಣಮಟ್ಟದಲ್ಲಿಯೂ ಮುಂಚೂಣಿಯಲ್ಲಿದೆ.

ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ವೀಕ್ಷಣೆಗಳು ಮತ್ತು ಚಂದಾದಾರರ ವಿಷಯದಲ್ಲಿ ಅವರ ಜಾಗತಿಕ ಸಮಕಾಲೀನರ ಯೂಟ್ಯೂಬ್ ಚಾನೆಲ್‌ಗಳನ್ನು ಮೀರಿಸಿದೆ.

ಅತ್ಯಂತ ಜನಪ್ರಿಯ ಜಾಗತಿಕ ನಾಯಕ

ಮಾರ್ನಿಂಗ್ ಕನ್ಸಲ್ಟ್‌ನಂತಹ ಅನೇಕ ಜಾಗತಿಕ ಸಮೀಕ್ಷೆಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅತ್ಯಂತ ಜನಪ್ರಿಯ ಜಾಗತಿಕ ನಾಯಕರೆಂದು ಹೇಳಿದ್ದು, ಅವರ ಜಾಗತಿಕ ಸಮಕಾಲೀನರಿಗಿಂತ ಹೆಚ್ಚು 75% ಅನುಮೋದನೆ ರೇಟಿಂಗ್ ಅನ್ನು ಹೊಂದಿದೆ.  ಎರಡನೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಗತಿಕ ನಾಯಕರು ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನೋರಾ ಅವರು ಕೇವಲ 64 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಇದು ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ಹೊಂದಿರುವ ಮೂರನೇ ಒಂದು ಭಾಗದಷ್ಟು ಚಂದಾದಾರರಿಗಿಂತ ಸ್ವಲ್ಪ ಕಡಿಮೆ.

ಡಿಸೆಂಬರ್ 2023 ರಲ್ಲಿ 22.4 ಕೋಟಿ ವೀಕ್ಷಣೆಗಳೊಂದಿಗೆ, ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಯೂಟ್ಯೂಬ್ ಚಾನೆಲ್‌ಗಿಂತ 43 ಪಟ್ಟು ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ, ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎರಡನೇ ಅತಿ ಹೆಚ್ಚು ವೀಕ್ಷಣೆ ಹೊಂದಿರುವ ಜಾಗತಿಕ ನಾಯಕರಾಗಿದ್ದಾರೆ.

ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿ, ಡಿಕೆ ಶಿವಕುಮಾರ್ ಸಿಎಂ ಆಗುವ ದಿನ ಬರಲಿದೆ: ರಾಜಗುರು ದ್ವಾರಕಾನಾಥ್ ಭವಿಷ್ಯ

ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ಭಾರತದಲ್ಲಿ ಅವರ ರಾಜಕೀಯ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ. ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ಮತ್ತು ಅದರ ಚಂದಾದಾರರು ರೆಕಾರ್ಡ್ ಮಾಡಿದ ವಿಡಿಯೊ ವೀಕ್ಷಣೆಗಳು ಇತರ ಭಾರತೀಯ ರಾಜಕೀಯ ನಾಯಕರು ಮತ್ತು ಪಕ್ಷಗಳ ಯೂಟ್ಯೂಬ್ ಚಾನೆಲ್‌ಗಳ ವೀಕ್ಷಣೆಗಳು ಮತ್ತು ಚಂದಾದಾರರಿಗಿಂತ ತುಂಬಾ ಮುಂದಿವೆ.

ರಾಹುಲ್ ಗಾಂಧಿಯವರ ಯೂಟ್ಯೂಬ್ ಚಾನೆಲ್ 2023 ರಲ್ಲಿ ಕೇವಲ 22.5 ಲಕ್ಷ ಚಂದಾದಾರರನ್ನು ಗಳಿಸಿದರೆ, ನರೇಂದ್ರ ಮೋದಿ ಚಾನೆಲ್ 2023 ರಲ್ಲಿ 63 ಲಕ್ಷ ಚಂದಾದಾರರೊಂದಿಗೆ ಸುಮಾರು ಮೂರು ಪಟ್ಟು ಮುಂದಿದೆ. ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು AAP ಯ ಯೂಟ್ಯೂಬ್ ಚಾನೆಲ್‌ಗಳಿಗೆ ಹೋಲಿಸಿದರೆ ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ 2023 ರಲ್ಲಿ 4 ಪಟ್ಟು ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಎಷ್ಟು ವ್ಯತ್ಯಾಸ ಇದೆ ಎಂದರೆ ಮೂರು ಚಾನಲ್‌ಗಳ ವೀಕ್ಷಣೆಗಳು 2023 ರಲ್ಲಿ ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್‌ನ ವೀಕ್ಷಣೆಗಳಿಗೆ ಸಮಾನವಾಗುವುದಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Tue, 26 December 23