AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಿ ವಸ್ತು ಮಾರಾಟದಿಂದ ಮೋದಿ ಸರ್ಕಾರ ಗಳಿಸಿದ್ದು ₹1,163 ಕೋಟಿ

ಈ ವರ್ಷ ಸರ್ಕಾರವು ಗುಜರಿ ಮಾರಾಟದಿಂದ ಗಳಿಸಿದ 556 ಕೋಟಿ ರೂಪಾಯಿಗಳಲ್ಲಿ ಸುಮಾರು 225 ಕೋಟಿ ರೂಪಾಯಿಗಳನ್ನು ರೈಲ್ವೇ ಸಚಿವಾಲಯದಿಂದಲೇ ಗಳಿಸಿದೆ. ಇತರ ಪ್ರಮುಖ ಆದಾಯಗಳೆಂದರೆ ರಕ್ಷಣಾ ಸಚಿವಾಲಯ 168 ಕೋಟಿ ರೂ., ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 56 ಕೋಟಿ ರೂ. ಮತ್ತು ಕಲ್ಲಿದ್ದಲು ಸಚಿವಾಲಯ 34 ಕೋಟಿ ರೂ ಗಳಿಸಲಾಗಿದೆ.

ಗುಜರಿ ವಸ್ತು ಮಾರಾಟದಿಂದ ಮೋದಿ ಸರ್ಕಾರ ಗಳಿಸಿದ್ದು ₹1,163 ಕೋಟಿ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: Dec 28, 2023 | 4:52 PM

Share

ದೆಹಲಿ ಡಿಸೆಂಬರ್ 28: ಚಂದ್ರನತ್ತ ಭಾರತದ ಯಶಸ್ವಿ ಚಂದ್ರಯಾನ-3 (Chandrayaan-3)ಮಿಷನ್ ಗೆ ಖರ್ಚಾದ ಹಣ ಸುಮಾರು 600 ಕೋಟಿ ರೂ. ಆದರೆ ನರೇಂದ್ರ ಮೋದಿ (Narendra Modi) ಸರ್ಕಾರವು ಹಳೇ ಕಡತ, ಕಚೇರಿಯಲ್ಲಿನ ತುಂಡಾದ ಉಪಕರಣಗಳು ಮತ್ತು ಬಳಕೆಯಲ್ಲಿಲ್ಲದ ವಾಹನ ಸೇರಿದಂತೆ ಗುಜರಿ ವಸ್ತುಗಳನ್ನು (Selling Scrap) ಮಾರಾಟ ಮಾಡಿ ಚಂದ್ರಯಾನಕ್ಕೆ ಖರ್ಚಾದ ಹಣದ ಎರಡು ಪಟ್ಟು ಹಣವನ್ನು ಗಳಿಸಿದೆ. ಸರ್ಕಾರದ ವರದಿ ಪ್ರಕಾರ, ಅಕ್ಟೋಬರ್ 2021 ರಿಂದ ಸುಮಾರು 1,163 ಕೋಟಿ ರೂಪಾಯಿಗಳನ್ನು ಗುಜರಿ ವಸ್ತು ಮಾರಾಟದಿಂದ ಗಳಿಸಿದೆ ಎಂದು ಹೇಳುತ್ತದೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಒಂದು ತಿಂಗಳ ಅವಧಿಯ ಪ್ರಚಾರದ ಸಮಯದಲ್ಲಿ ಗಳಿಸಿದ 557 ಕೋಟಿ ರೂ. ಅಕ್ಟೋಬರ್ 2021 ರಿಂದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ 96 ಲಕ್ಷ ಕಡತಗಳನ್ನು ತೆರವು ಮಾಡಲಾಗಿಗದ್ದು, ಸರ್ಕಾರಿ ಕಚೇರಿಗಳಲ್ಲಿ ಸುಮಾರು 355 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದೆ ಎಂದು ವರದಿ ಹೇಳುತ್ತದೆ. ಇದು ಕಚೇರಿಗಳಲ್ಲಿನ ಕಾರಿಡಾರ್‌ಗಳನ್ನು ಸ್ವಚ್ಛಗೊಳಿಸಲು, ಮುಕ್ತ ಸ್ಥಳವನ್ನು ಮನರಂಜನಾ ಕೇಂದ್ರಗಳಾಗಿ ಮತ್ತು ಇತರ ಉಪಯುಕ್ತ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಕಾರಣವಾಗಿದೆ.

16,000 ಕೋಟಿ ರೂ ವ್ಯಯಿಸಿದ್ದ ರಷ್ಯಾದ ಚಂದ್ರನ ಮಿಷನ್ ವಿಫಲವಾಗಿದೆ. ನಮ್ಮ (ಚಂದ್ರಯಾನ-3) ಮಿಷನ್ ಗೆ ಖರ್ಚಾಗಿದ್ದು ಕೇವಲ 600 ಕೋಟಿ ರೂ. ಚಂದ್ರ ಮತ್ತು ಬಾಹ್ಯಾಕಾಶ ಯಾನಗಳನ್ನು ಆಧರಿಸಿದ ಹಾಲಿವುಡ್ ಚಲನಚಿತ್ರಗಳಿಗೆ 600 ಕೋಟಿ ರೂ.ಗಿಂತ ಹೆಚ್ಚು ವೆಚ್ಚವಾಗುತ್ತದೆ ಎಂದು ಈ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದರು.

ಗುಜರಿ ಮಾರಾಟದಿಂದ 1,163 ಕೋಟಿ ರೂಪಾಯಿ ಆದಾಯದ ಅಂಕಿ ಅಂಶವು ಪಿಎಂ ನರೇಂದ್ರ ಮೋದಿಯವರ ಸರ್ಕಾರದ ಸ್ವಚ್ಛತೆಯ ಕಾರ್ಯಕ್ರಮವು ಎಷ್ಟು ದೊಡ್ಡ ಮತ್ತು ಮಹತ್ವದ್ದಾಗಿದೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ:ಅಂದು ಕಾಂಗ್ರೆಸ್ ಪಕ್ಷದ ಮುಂದೆ ವಿಪಕ್ಷಗಳೇ ಇರಲಿಲ್ಲ, ಇಂದು ವಿಪಕ್ಷ ಸ್ಥಾನವೂ ಸಿಗಲಿಲ್ಲ 

ಯಾರು ಗರಿಷ್ಠ ಆದಾಯವನ್ನು ಗಳಿಸಿದ್ದು?

ಈ ವರ್ಷ ಸರ್ಕಾರವು ಗುಜರಿ ಮಾರಾಟದಿಂದ ಗಳಿಸಿದ 556 ಕೋಟಿ ರೂಪಾಯಿಗಳಲ್ಲಿ ಸುಮಾರು 225 ಕೋಟಿ ರೂಪಾಯಿಗಳನ್ನು ರೈಲ್ವೇ ಸಚಿವಾಲಯದಿಂದಲೇ ಗಳಿಸಿದೆ. ಇತರ ಪ್ರಮುಖ ಆದಾಯಗಳೆಂದರೆ ರಕ್ಷಣಾ ಸಚಿವಾಲಯ 168 ಕೋಟಿ ರೂ., ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 56 ಕೋಟಿ ರೂ. ಮತ್ತು ಕಲ್ಲಿದ್ದಲು ಸಚಿವಾಲಯ 34 ಕೋಟಿ ರೂ. ಈ ವರ್ಷ ಮುಕ್ತಗೊಳಿಸಲಾದ ಒಟ್ಟು 164 ಲಕ್ಷ ಚದರ ಅಡಿ ಜಾಗದಲ್ಲಿ ಗರಿಷ್ಠ ಜಾಗವನ್ನು ಕಲ್ಲಿದ್ದಲು ಸಚಿವಾಲಯದಲ್ಲಿ 66 ಲಕ್ಷ ಚದರ ಅಡಿ ಮತ್ತು ಭಾರೀ ಕೈಗಾರಿಕೆ ಸಚಿವಾಲಯ 21 ಲಕ್ಷ ಚದರ ಅಡಿಗಳಲ್ಲಿ ಮುಕ್ತಗೊಳಿಸಲಾಗಿದೆ. ರಕ್ಷಣಾ ಸಚಿವಾಲಯ 19 ಲಕ್ಷ ಚದರ ಅಡಿಗಳಲ್ಲಿ ಮುಕ್ತಗೊಳಿಸಿದೆ ಎಂದು ವರದಿ ತೋರಿಸುತ್ತದೆ.

ಈ ವರ್ಷ, ಸುಮಾರು 24 ಲಕ್ಷ ಕಡತಗಳನ್ನು ನಾಶ ಮಾಡಲಾಗಿದೆ. ಇವುಗಳ ಪೈಕಿ ಗರಿಷ್ಠ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (3.9 ಲಕ್ಷ ಕಡತಗಳು) ನಂತರ ಸೇನಾ ವ್ಯವಹಾರಗಳ ಇಲಾಖೆ (3.15 ಲಕ್ಷ ಕಡತಗಳು) ತೆಗೆಯಲಾಗಿದೆ. ಸ್ವಚ್ಛತಾ ಅಭಿಯಾನದ ಪ್ರಭಾವದಿಂದಾಗಿ ಒಟ್ಟಾರೆ ಇ-ಫೈಲ್ ಅಳವಡಿಕೆಯು ಸರ್ಕಾರದಲ್ಲಿ ಸುಮಾರು ಶೇ 96ಕ್ಕೆ ಏರಿಕೆ ಆಗಿದೆ. ಈ ವರ್ಷ ಸುಮಾರು 2.58 ಲಕ್ಷ ಕಚೇರಿ ಸೈಟ್‌ಗಳನ್ನು ಅಭಿಯಾನದಲ್ಲಿ ಒಳಪಡಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ