ರಕ್ಷಣಾ ಸಚಿವಾಲಯದ ನೂತನ ಕಚೇರಿ ಉದ್ಘಾಟಿಸಿದ ಮೋದಿ; ಸೆಂಟ್ರಲ್ ವಿಸ್ಟಾ ಯೋಜನೆ ವಿರೋಧಿಸುವವರ ವಿರುದ್ಧ ವಾಗ್ದಾಳಿ
Narendra Modi: ಈ ಹೊಸ ಕಚೇರಿಗಳು ರಾಜಧಾನಿಯಲ್ಲಿ ಆಧುನಿಕ ರಕ್ಷಣಾ ಸಚಿವಾಲಯದ ನಿರ್ಮಾಣದತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ಇದು ನಮ್ಮ ಸಶಸ್ತ್ರ ಪಡೆಗಳ ಕೆಲಸದ ರೀತಿಗೆ ಹೆಚ್ಚು ಅನುಕೂಲಕರ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಲು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ ಮೋದಿ.
ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಗುರುವಾರ ಬೆಳಿಗ್ಗೆ ದೆಹಲಿಯಲ್ಲಿ ಹೊಸ ರಕ್ಷಣಾ ಸಚಿವಾಲಯದ ಕಚೇರಿಗಳನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು(Central Vista project) ವಿರೋಧಿಸುತ್ತಿರುವವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸೆಂಟ್ರಲ್ ವಿಸ್ಟಾ -ಮಹತ್ವಾಕಾಂಕ್ಷೆಯ ₹ 20,000 ಕೋಟಿ ಯೋಜನೆಯಾಗಿದ್ದು ಇದರಲ್ಲಿ ಹೊಸ ಸಂಸತ್ತು ಮತ್ತು ಕೇಂದ್ರ ಸರ್ಕಾರಿ ಕಚೇರಿ, ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳ ನವೀಕರಣ, ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಸಚಿವಾಲಯಗಳು ಇರಲಿವೆ.
“ಕೆಲವು ಜನರು ಹೇಗೆ ಪ್ರಮುಖವಾದ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಹಾಳುಗೆಡವಲು ಪ್ರಯತ್ನಿಸಿದರು ತಪ್ಪು ಮಾಹಿತಿಗಳನ್ನು ಹರಡಲು ಅವರು ಹೇಗೆ ವೈಯಕ್ತಿಕ ಕಾರ್ಯಸೂಚಿಗಳನ್ನು ನಡೆಸುತ್ತಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಇವುಗಳ ಸ್ಥಿತಿಯ ಬಗ್ಗೆ ಅವರು ಒಮ್ಮೆ ಮಾತನಾಡಲಿಲ್ಲ ನಮ್ಮ ಸಚಿವಾಲಯಗಳು ಎಲ್ಲಿಂದ ಕೆಲಸ ಮಾಡುತ್ತವೆ. ಅವರು ಹೊಸ ರಕ್ಷಣಾ ಸಚಿವಾಲಯ ಸಂಕೀರ್ಣಗಳನ್ನು ಮತ್ತು ಅವು ಎಷ್ಟು ನಿರ್ಣಾಯಕವಾಗಿವೆ ಎಂದು ಎಂದಾದರೂ ಉಲ್ಲೇಖಿಸಿದ್ದಾರೆಯೇ? ” ಅವರು ಹಾಗೆ ಮಾಡಿದ್ದರೆ, ಅವರ ಸುಳ್ಳುಗಳು ಮತ್ತು ಕಾರ್ಯಸೂಚಿಗಳು ಬಹಿರಂಗಗೊಳ್ಳುತ್ತಿದ್ದವು” ಎಂದು ಹೇಳಿದ ಮೋದಿ ರಾಹುಲ್ ಗಾಂಧಿಯಂತಹ ವಿರೋಧ ಪಕ್ಷದ ನಾಯಕರನ್ನು ಟೀಕಿಸಿದರು.
ಮೇ ತಿಂಗಳಲ್ಲಿ ಕಾಂಗ್ರೆಸ್ ಸಂಸದರು ಸೆಂಟ್ರಲ್ ವಿಸ್ಟಾವನ್ನು ಸಂಪನ್ಮೂಲಗಳ “ಕ್ರಿಮಿನಲ್ ವ್ಯರ್ಥ” ಎಂದು ಹೇಳಿದ್ದು, ಸಾಂಕ್ರಾಮಿಕ ರೋಗವನ್ನು ಎದುರಿಸಲು ಈ ಹಣವನ್ನು ವಿನಿಯೋಗಿಸಲು ಸರ್ಕಾರವನ್ನು ಒತ್ತಾಯಿಸಿದರು.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಮತ್ತು ವೈದ್ಯಕೀಯ ಮೂಲಸೌಕರ್ಯವನ್ನು ಉನ್ನತೀಕರಿಸಲು ಆದ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಹೊರತಾಗಿಯೂ ನಿರ್ಮಾಣವನ್ನು ಮುಂದುವರಿಸಲು ಅನುವು ಮಾಡಿಕೊಡುವ ಯೋಜನೆಯನ್ನು “ಅಗತ್ಯ ಸೇವೆ” ಎಂದು ವರ್ಗೀಕರಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
Inaugurating Defence Offices Complexes in New Delhi. https://t.co/4n202IC2ei
— Narendra Modi (@narendramodi) September 16, 2021
ಆದಾಗ್ಯೂ, ಪ್ರಧಾನ ಮಂತ್ರಿಯವರು ಇಂದು ಉದ್ಘಾಟಿಸಿದ ಹೊಸ ರಕ್ಷಣಾ ಸಚಿವಾಲಯದ ಕಚೇರಿಗಳು ಕಸ್ತೂರ್ಬಾ ಗಾಂಧಿ ಮಾರ್ಗ ಮತ್ತು ಮಧ್ಯ ದೆಹಲಿಯ ಆಫ್ರಿಕಾ ಅವೆನ್ಯೂದಲ್ಲಿನ ಎರಡು ಸಂಕೀರ್ಣಗಳಲ್ಲಿ 7,000 ಅಧಿಕಾರಿಗಳನ್ನು ಹೊಂದಿದ್ದು, ರಾಷ್ಟ್ರದ ಸಶಸ್ತ್ರ ಪಡೆಗಳಿಗೆ “ಅತ್ಯುನ್ನತ ಆದ್ಯತೆ ಮತ್ತು ಗೌರವ” ನೀಡುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಹಳೆಯ ಕಛೇರಿಗಳು ಸುಮಾರು 700 ಸಣ್ಣ ಕಟ್ಟಡಗಳಿಂದ ಕೂಡಿದ್ದು 50 ಎಕರೆಜಾಗದಲ್ಲಿದೆ. ಇವುಗಳನ್ನು ಹೊಸ ‘ಎಕ್ಸಿಕ್ಯುಟಿವ್ ಎನ್ಕ್ಲೇವ್’ ಆಗಿ ಪುನರ್ ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಪ್ರಧಾನ ಮಂತ್ರಿಯ ಹೊಸ ನಿವಾಸವೂ ಇರಲಿದೆ.
“ಇತರರಂತೆ, ರಕ್ಷಣಾ ಸಚಿವಾಲಯವು ಎರಡನೆಯ ಮಹಾಯುದ್ಧದ ಕಾಲದ ಕಟ್ಟಡಗಳಿಂದ ನಡೆಸಲ್ಪಡುತ್ತಿರುವುದು ನನಗೆ ಯಾವಾಗಲೂ ಆಶ್ಚರ್ಯವನ್ನುಂಟು ಮಾಡಿತು. ಇವುಗಳು ಕುದುರೆಗಳು ಮತ್ತು ಅಶ್ವಶಾಲೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಲ್ಪಟ್ಟವು. ಇಂತಹ ಮಹತ್ವದ ಸಚಿವಾಲಯಗಳು ಹಳೆಯ, ಶಿಥಿಲಾವಸ್ಥೆಯಿಂದ ಹೇಗೆ ನಡೆಯುತ್ತಿವೆ ಎಂದು ನಾನು ಯಾವಾಗಲೂ ಆಶ್ಚರ್ಯ ಪಡುತ್ತಿದ್ದೆ ಎಂದು ಮೋದಿ ಹೇಳಿದರು.
“ಈ ಹೊಸ ಕಚೇರಿಗಳು ರಾಜಧಾನಿಯಲ್ಲಿ ಆಧುನಿಕ ರಕ್ಷಣಾ ಸಚಿವಾಲಯದ ನಿರ್ಮಾಣದತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ಇದು ನಮ್ಮ ಸಶಸ್ತ್ರ ಪಡೆಗಳ ಕೆಲಸದ ರೀತಿಗೆ ಹೆಚ್ಚು ಅನುಕೂಲಕರ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಲು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ ಮೋದಿ.
“ಇದು ಸೆಂಟ್ರಲ್ ವಿಸ್ಟಾದ ಒಂದು ಭಾಗವಾಗಿದೆ. ತಪ್ಪು ಅಜೆಂಡಾಗಳನ್ನು ಹೊಂದಿರುವ ಮತ್ತು ತಪ್ಪು ಮಾಹಿತಿಗಳನ್ನು ಹರಡುವವರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಈ ಯೋಜನೆಯ ಅಡಿಯಲ್ಲಿ ಪ್ರಮುಖ ಕೆಲಸಗಳನ್ನು ಮಾಡುವುದನ್ನು ನೀವು ಈಗ ನೋಡಬಹುದು.”
#WATCH | “People who were after Central Vista Project would be conveniently quiet on this, which is also part of Centra Vista… They knew their falsity would be exposed…,” says PM Narendra Modi at the launch of New Defence Offices Complexes in Delhi pic.twitter.com/jIFNaVv55d
— ANI (@ANI) September 16, 2021
ಪ್ರಧಾನ ಮಂತ್ರಿಗಳು “ದೆಹಲಿಯ ಮಾಧ್ಯಮ ಸಂಸ್ಥೆಗಳ” ಮೇಲೆ ಟೀಕಾಪ್ರಹಾರ ಮಾಡಿದ್ದು, ನಮ್ಮ ಪ್ರಮುಖ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿದ್ದ ಪರಿಸ್ಥಿತಿಗಳನ್ನು ನೋಡಿ ಅವುಗಳನ್ನು ಮಚ್ಚಲು ವಿಫಲವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಸೆಂಟ್ರಲ್ ವಿಸ್ಟಾ ಯೋಜನೆಯು ಭಾರೀ ವಿವಾದ ಮತ್ತು ಟೀಕೆಗಳನ್ನು ಸೃಷ್ಟಿಸಿದೆ. ಟೀಕಾಕಾರರು ಮತ್ತು ಪ್ರತಿಪಕ್ಷದ ನಾಯಕರು ಲಸಿಕೆ ಅಭಿವೃದ್ಧಿ ಮತ್ತು ವಿತರಣೆ ಅಥವಾ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಬದಲು ಸರ್ಕಾರಿ ಕಟ್ಟಡಗಳಿಗೆ ಸಾವಿರಾರು ಕೋಟಿ ಖರ್ಚು ಮಾಡುವ ಅಗತ್ಯವನ್ನು ಪ್ರಶ್ನಿಸಿದ್ದಾರೆ. ದೆಹಲಿಯ ಹಸಿರು ಹೊದಿಕೆಯ ಮೇಲೆ ಇದು ಪರಿಣಾಮ ಬೀರುತ್ತದೆ ಮತ್ತು ನಗರದ ಕೆಲವು ಐತಿಹಾಸಿಕ ಮಹತ್ವದ ಕಟ್ಟಡಗಳ ನಾಶಕ್ಕೆ ಇದು ಕಾರಣವಾಗುತ್ತದೆ ಎಂದು ದೆಹಲಿಯ ಪರಿಸರ ಪ್ರೇಮಿಗಳು ಸೆಂಟ್ರಲ್ ವಿಸ್ಟಾಗೆ ವಿರೋಧ ಸೂಚಿಸಿದ್ದರು.
ಆದಾಗ್ಯೂ ಸರ್ಕಾರವು ಎಲ್ಲಾ ಟೀಕೆಗಳನ್ನು ತಿರಸ್ಕರಿಸಿದ್ದು ಈ ಯೋಜನೆಯನ್ನು ಸೆಪ್ಟೆಂಬರ್ 2019 ರಲ್ಲಿ (ಸಾಂಕ್ರಾಮಿಕ ರೋಗದ ಮೊದಲು) ಸಿದ್ಧಪಡಿಸಲಾಗಿದೆ ಮತ್ತು ಯಾವುದೇ ಐತಿಹಾಸಿಕ ಕಟ್ಟಡಗಳನ್ನು ಕೆಡವುದಿಲ್ಲ ಎಂದಿದೆ.
ರಾಷ್ಟ್ರದ ಕೊವಿಡ್ ವ್ಯಾಕ್ಸಿನೇಷನ್ ಪ್ರಯತ್ನಗಳಿಂದ ವೆಚ್ಚಗಳು ಹಣವನ್ನು ಬೇರೆಡೆಗೆ ವ್ಯಯಿಸುವ ವರದಿಗಳನ್ನು ಕೇಂದ್ರ ತಳ್ಳಿಹಾಕಿದೆ. “ಸಾಕಷ್ಟು ಹಣವಿದೆ. ಲಸಿಕೆಗಾಗಿ ಮುಂಗಡ ಪಾವತಿಗಳನ್ನು ಆಗಸ್ಟ್ ವರೆಗೆ ಮಾಡಲಾಗಿದೆ. ಡಿಸೆಂಬರ್ ವೇಳೆಗೆ ಎಲ್ಲರಿಗೂ ಸಾಕಷ್ಟು ಲಸಿಕೆಗಳು ದೊರೆಯುತ್ತವೆ ಎಂದು ಕೇಂದ್ರ ಹೇಳಿತ್ತು.
ಸೆಂಟ್ರಲ್ ವಿಸ್ಟಾವನ್ನು ಸುಪ್ರೀಂ ಕೋರ್ಟ್‌ನಲ್ಲಿ ಕೂಡ ಪ್ರಶ್ನಿಸಲಾಯಿತು, ಇದು ಸಾಂಕ್ರಾಮಿಕ ರೋಗದ ಹೊರತಾಗಿಯೂ ಕೆಲವು ನಿರ್ಮಾಣಗಳನ್ನು ಮುಂದುವರಿಸಲು ಅನುವು ಮಾಡಿಕೊಡುವ ದೆಹಲಿ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಜೂನ್ ನಲ್ಲಿ ಹೇಳಿತ್ತು.
ಇದನ್ನೂ ಓದಿ: ನರೇಂದ್ರ ಮೋದಿ, ಅಕ್ಷಯ್, ರಜನಿಕಾಂತ್ ಸಾಲಿನಲ್ಲಿ ಅಜಯ್ ದೇವಗನ್, ವಿಕ್ಕಿ ಕೌಶಲ್; ಏನಿದು ಸಮಾಚಾರ?
(PM Narendra Modi inaugurates new Defence Ministry offices in Delhi Slams Central Vista Critics)
Published On - 2:23 pm, Thu, 16 September 21