‘ಅಮೆರಿಕದಲ್ಲಿ ಮೋದಿಗೆ ರಾತ್ರಿ ನಿದ್ದೆಯಿಲ್ಲದಂತೆ ಮಾಡುತ್ತೇವೆ’: ಖಲಿಸ್ತಾನಿ ಉಗ್ರರಿಂದ ನರೇಂದ್ರ ಮೋದಿಗೆ ಬೆದರಿಕೆ

ಪ್ರಧಾನಿ  ಮೋದಿಗೆ "ಅಮೆರಿಕಾದಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು" ನೀಡುವುದಾಗಿ ಎಸ್ಎಫ್ ಜೆ ಸಲಹೆಗಾರರಾದ ಗುರುಪತ್ವಂತ್ ಸಿಂಗ್ ಪನ್ನುನ್ ಹೇಳಿದ್ದಾರೆ.

‘ಅಮೆರಿಕದಲ್ಲಿ ಮೋದಿಗೆ ರಾತ್ರಿ ನಿದ್ದೆಯಿಲ್ಲದಂತೆ ಮಾಡುತ್ತೇವೆ’: ಖಲಿಸ್ತಾನಿ ಉಗ್ರರಿಂದ ನರೇಂದ್ರ ಮೋದಿಗೆ ಬೆದರಿಕೆ
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 16, 2021 | 3:49 PM

ದೆಹಲಿ: ಖಲಿಸ್ತಾನಿ ಭಯೋತ್ಪಾದಕ ಗುಂಪು ಸಿಖ್ಸ್ ಫಾರ್ ಜಸ್ಟಿಸ್ (SFJ) ಪ್ರಧಾನಿ ಮೋದಿಗೆ “ಅಮೆರಿಕದಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು” ನೀಡುವುದಾಗಿ  ಬೆದರಿಕೆಯೊಡ್ಡಿದೆ. ಅದೇ ವೇಳೆ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA)ಯಲ್ಲಿ ಭಾಗವಹಿಸಲು ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುವಾಗ ಅಮೆರಿಕದ ಶ್ವೇತಭವನದ ಹೊರಗೆ ಪ್ರತಿಭಟನೆ ನಡೆಸಲು ಎಸ್ಎಫ್​​ಜೆ ಯೋಚಿಸಿದೆ. ಭಾರತದಲ್ಲಿ ‘ರೈತರ ಮೇಲಿನ ದೌರ್ಜನ್ಯ’ವನ್ನು ಖಂಡಿಸಿ ಈ ಸಂಘಟನೆ ಅಮೆರಿಕದಲ್ಲಿ ಮೋದಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದೆ. ಪ್ರಧಾನಿ  ಮೋದಿಗೆ “ಅಮೆರಿಕಾದಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು” ನೀಡುವುದಾಗಿ ಎಸ್ಎಫ್ ಜೆ ಸಲಹೆಗಾರರಾದ ಗುರುಪತ್ವಂತ್ ಸಿಂಗ್ ಪನ್ನುನ್ ಹೇಳಿದ್ದಾರೆ.

ಸೆಕ್ಯುರಿಟಿ ಗ್ರಿಡ್‌ನ ಮೂಲಗಳ ಪ್ರಕಾರ “ಎಸ್‌ಎಫ್‌ಜೆಗೆ ಹೆಚ್ಚಿನ ಬೆಂಬಲವೇನೂ  ಇಲ್ಲ. ಅವರ ಹಲವಾರು ವಾಟ್ಸಾಪ್ ಗುಂಪುಗಳನ್ನು ಪ್ರಚಾರ ಉದ್ದೇಶಗಳಿಗಾಗಿ ರಚಿಸಿದ್ದಾರೆ. ಹಲವಾರು ಸಂಖ್ಯೆಯ ಪಾಕಿಸ್ತಾನಿಗಳು, ಹೆಚ್ಚಾಗಿ ಐಎಸ್‌ಐ ಏಜೆಂಟರು ಇದರಲ್ಲಿದ್ದಾರೆ. ಅಮೆರಿಕದಲ್ಲಿ ಕೂಡ ಅವರು ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸುವುದಕ್ಕಾಗಿ ಹೆಚ್ಚಿನ ಜನರನ್ನು ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದೆ.

ಹಲವಾರು ವರ್ಷಗಳಿಂದ ಈ ಗುಂಪು ಆಕ್ಷೇಪಾರ್ಹ ವಿಷಯವನ್ನು ಅಪ್‌ಲೋಡ್ ಮಾಡಿದೆ ಮತ್ತು ಡಾರ್ಕ್ ವೆಬ್‌ನಲ್ಲಿ ವೆಬ್‌ಸೈಟ್‌ಗಳನ್ನು ತೆರೆದಿದೆ.

ಅವುಗಳಲ್ಲಿ ಹಲವು ಕಾಣಿಸಿಕೊಂಡ ತಕ್ಷಣ ಅವುಗಳನ್ನು ತೆಗೆದುಹಾಕಲಾಗಿದೆ. ಅವರು  ನಗದು ಬಹುಮಾನಗಳನ್ನು ಘೋಷಿಸುವ ಮೂಲಕ ರೈತರನ್ನು ಸೆಳೆಯಲು ಪ್ರಯತ್ನಿಸುತ್ತಾರೆ ಅಥವಾ ವಿದೇಶಗಳಲ್ಲಿ ಪೌರತ್ವದ ಭರವಸೆಯೊಂದಿಗೆ ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡಲು ಯುವಕರನ್ನು ಪ್ರೋತ್ಸಾಹಿಸುತ್ತಾರೆ. ಇತರ ಪ್ರಮುಖ ತಂತ್ರವೆಂದರೆ ಗುಂಪಿಗೆ ಯಾವುದೇ ಪ್ರಾಮುಖ್ಯತೆ ನೀಡದೆ ಆದರೆ ಅದರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದಾಗಿದೆ.

ಸಿಖ್ಸ್ ಫಾರ್ ಜಸ್ಟೀಸ್ ಗುಂಪನ್ನು ಜುಲೈ 10, 2019 ರಂದು ಭಾರತ ಸರ್ಕಾರವು ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ನಿಷೇಧಿಸಿತು.

ಸೆಪ್ಟೆಂಬರ್ 24 ರಂದು, ವಾಷಿಂಗ್ಟನ್‌ನಲ್ಲಿ ಕ್ವಾಡ್ರಿಲಾಟರಲ್ ಫ್ರೇಮ್ ವರ್ಕ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಇದನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಯೋಜಿಸಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಕೂಡ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ನಾಲ್ಕು ರಾಷ್ಟ್ರಗಳ ನಾಯಕರಿಗೆ ಆತಿಥ್ಯ ವಹಿಸುವ ಮೊದಲ ವೈಯಕ್ತಿಕ ಕ್ವಾಡ್ ಶೃಂಗಸಭೆ ಇದಾಗಿದೆ. ಮಾರ್ಚ್ ತಿಂಗಳಲ್ಲಿ ಜೋ ಬಿಡೆನ್ ಕ್ವಾಡ್ ನಾಯಕರ ಮೊದಲ ಶೃಂಗಸಭೆಯನ್ನು ವರ್ಚುವಲ್ ರೂಪದಲ್ಲಿ ಆಯೋಜಿಸಿದರು.

ಸಿಖ್  ಉಗ್ರರ ಈ ಗುಂರು ತನ್ನ ಪ್ರಚಾರವನ್ನು ಹರಡಲು ಗೂಗಲ್ ಪ್ಲೇ ಸ್ಟೋರ್ ಅನ್ನು ಬಳಸಲು ಯೋಜಿಸಿದೆ, ಮತ್ತು ಜನಮತ ಸಂಗ್ರಹಣೆಗೆ ಜನರು ನೋಂದಾಯಿಸಲು ಅಪ್ಲಿಕೇಶನ್ ಅನ್ನು ಅಪ್‌ಲೋಡ್ ಮಾಡಲಾಗಿದೆ. ಕಳೆದ ವರ್ಷ, ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಕ್ಕಾಗಿ ಆಗಸ್ಟ್ 15 ರಂದು ಲಂಡನ್‌ನಲ್ಲಿ ಮೊದಲ ಮತದಾನ ನಡೆಯಲಿದೆ ಎಂದು ಗುಂಪು ಘೋಷಿಸಿತ್ತು. ಆದರೆ ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ, ಅದನ್ನು ಮತ್ತೊಮ್ಮೆ ಅಕ್ಟೋಬರ್‌ಗೆ ಮುಂದೂಡಿದರು. ಇತ್ತೀಚೆಗೆ, ಗುರುಪತ್ವಂತ್ ಸಿಂಗ್ ಪನ್ನುನ್ ವಿಡಿಯೊದಲ್ಲಿ ಖಲಿಸ್ತಾನ್ ಜನಾಭಿಪ್ರಾಯದ ಮತದಾನವು 2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಸಮಾನಾಂತರವಾಗಿ ನಡೆಯಲಿದೆ ಎಂದು ಹೇಳಿದರು.

ಅದೇ ವಿಡಿಯೊದಲ್ಲಿ ಬ್ರಿಟನ್, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ತಾಲಿಬಾನ್ ಅನ್ನು ಅಂಗೀಕರಿಸಿದಕೆ ಖಲಿಸ್ತಾನ್ ಜನಾಭಿಪ್ರಾಯಕ್ಕಾಗಿ ಎಸ್‌ಎಫ್‌ಜೆ ತನ್ನ ಬೆಂಬಲಕ್ಕಾಗಿ ತಾಲಿಬಾನ್ ಅನ್ನು ಸಂಪರ್ಕಿಸುತ್ತದೆ ಎಂದು ಪನ್ನುನ್ ಹೇಳಿದ್ದರು.

ಎಸ್‌ಎಫ್‌ಜೆ ವಿಷಯದ ಕುರಿತು ಚರ್ಚಿಸಲು ಗುಪ್ತಚರ ಗ್ರಿಡ್ ಇತ್ತೀಚೆಗೆ ದೆಹಲಿಯಲ್ಲಿ ಪಂಜಾಬ್ ಪೊಲೀಸರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವಿಶೇಷವಾಗಿ ನಿಷೇಧಿತ ಸಂಘಟನೆಯು ಪಂಜಾಬ್‌ನ ಯುವಕರನ್ನು ವಿಧ್ವಂಸಕ ಚಟುವಟಿಕೆಗಳಿಗೆ ಪ್ರಚೋದಿಸಲು ಪ್ರಯತ್ನಿಸುತ್ತಿದೆ.

ಸೆಕ್ಯುರಿಟಿ ಗ್ರಿಡ್‌ನ ಅಧಿಕಾರಿಗಳು ಐಎಸ್‌ಐ ಸಂಘಟಿತ ಪ್ರಯತ್ನಗಳು ಮತ್ತು ಬೆಂಬಲದ ಹೊರತಾಗಿಯೂ, ಈ ಗುಂಪು ಯುವಕರನ್ನು ಸೆಳೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಪ್ರಚಾರ ಸಾಧನವನ್ನು ಭಾರತ ಸರ್ಕಾರವನ್ನು ಟೀಕಿಸಲು ಬಳಸಲಾಗುತ್ತಿದೆ ಎಂದಿದೆ.

ಇದನ್ನೂ ಓದಿ: ರಕ್ಷಣಾ ಸಚಿವಾಲಯದ ನೂತನ ಕಚೇರಿ ಉದ್ಘಾಟಿಸಿದ ಮೋದಿ; ಸೆಂಟ್ರಲ್ ವಿಸ್ಟಾ ಯೋಜನೆ ವಿರೋಧಿಸುವವರ ವಿರುದ್ಧ ವಾಗ್ದಾಳಿ 

(Ahead of PM’s US visit Khalistani terror group vowed to give PM Narendra Modi sleepless nights in America)

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ