ಹೈದರಾಬಾದ್: ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣದ ಆರೋಪಿಯ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆ
Hyderabad Child Rape Case: ಸೈದಾಬಾದ್ ಪ್ರದೇಶದ ಸಿಂಗರೇಣಿ ಕಾಲೋನಿಯಲ್ಲಿ ಸೆಪ್ಟೆಂಬರ್ 9 ರಂದು ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಮಧ್ಯರಾತ್ರಿಯ ನಂತರ ಆತನ ಮನೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು
ಹೈದರಾಬಾದ್: ಸೆಪ್ಟೆಂಬರ್ 9 ರಂದು ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಸೈದಾಬಾದ್ ಅತ್ಯಾಚಾರ ಪ್ರಕರಣದ ಆರೋಪಿ ತೆಲಂಗಾಣದ ಘನಪುರ ಸ್ಟೇಷನ್ ಬಳಿ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಬಗ್ಗೆ ದಿ ನ್ಯೂಸ್ ಮಿನಿಟ್ ಜತೆ ಮಾತನಾಡಿದ ಹೈದರಾಬಾದ್ ಪೂರ್ವ ವಲಯದ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ರಮೇಶ್, “ಆರೋಪಿ ಸಾವನ್ನಪ್ಪಿರುವುದು ನಿಜ. ನಾನು ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಯೊಂದಿಗೆ ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಬೇಕು. ಪೊಲೀಸರು ಆತನನ್ನು ಹಿಂಬಾಲಿಸುತ್ತಿದ್ದಾಗ ಎಚ್ಚರಿಕೆಗೆ ಕಿವಿಗೊಡದೆ ಆತ ರೈಲಿನ ಮುಂದೆ ಹಾರಿದ್ದಾನೆ ಎಂದು ನನಗೆ ಹೇಳಲಾಗಿದೆ. ಎಲ್ಲಾ ವಿವರಗಳನ್ನು ಖಚಿತಪಡಿಸಿಕೊಂಡ ನಂತರ ಅದನ್ನು ಮಾಧ್ಯಮದೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದಿದ್ದಾರೆ. ಪಲ್ಲಕೊಂಡ ರಾಜು ಎಂಬ 30 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿರುವ ಆರೋಪಿ, ಘಟನೆ ವರದಿಯಾದಾಗಿನಿಂದ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸಲು ಪೊಲೀಸರು ಒಂಬತ್ತು ವಿಶೇಷ ತಂಡಗಳನ್ನು ರಚಿಸಿದ್ದರು. ಸೆಪ್ಟೆಂಬರ್ 14 ರಂದು ಹೈದರಾಬಾದ್ ಪೊಲೀಸರು ಸಾರ್ವಜನಿಕರಿಗೆ ಆರೋಪಿಯ ದೈಹಿಕ ನೋಟದ ವಿವರಗಳೊಂದಿಗೆ ನೋಟಿಸ್ ನೀಡಿದ್ದರು ಮತ್ತು ಆತನ ಬಗ್ಗೆ ಮಾಹಿತಿ ಇರುವ ಯಾರಾದರೂ ಪೊಲೀಸರ ಮುಂದೆ ಬರುವಂತೆ ಮನವಿ ಮಾಡಿದರು. ಜತೆಗೆ ವಿಶ್ವಾಸಾರ್ಹ ಮಾಹಿತಿಗಾಗಿ 10 ಲಕ್ಷ ಬಹುಮಾನ ಘೋಷಿಸಿದ್ದರು.
ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡ ಎಂಬ ಮೂರು ಪೊಲೀಸ್ ಕಮಿಷನರೇಟ್‌ಗಳ ವ್ಯಾಪ್ತಿಯಲ್ಲಿ ನೂರಾರು ಪೊಲೀಸರನ್ನು ಒಳಗೊಂಡ ಹಲವಾರು ತಂಡಗಳು ಶೋಧ ಕಾರ್ಯದಲ್ಲಿ ನಿರತವಾಗಿವೆ. 10 ಲಕ್ಷ ಬಹುಮಾನವನ್ನು ಘೋಷಿಸಿದ ಒಂದು ದಿನದ ನಂತರ, ಪೋಲಿಸರು ಆತನ ಚಿತ್ರಗಳೊಂದಿಗೆ ವಾಟೆಂಡ್ ಪೋಸ್ಟರ್‌ಗಳನ್ನು ಸೆಪ್ಟೆಂಬರ್ 15 ರಂದು ಬಿಡುಗಡೆ ಮಾಡಿದರು. ಪೋಲಿಸ್ ಸಿಬ್ಬಂದಿ ಗೋಡೆಗಳು, ಬಸ್‌ಗಳು ಮತ್ತು ಆಟೋ-ರಿಕ್ಷಾಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದು ಕಂಡುಬಂತು. ಆರೋಪಿಗಳು ಹೇಗೆ ಕಾಣುತ್ತಾರೆ ಎಂಬುದರ ಕುರಿತು ಕೆಲವರು ನಾಗರಿಕರಿಗೆ ವಿವರಿಸಿದರು.ನೆರೆಯ ರಾಜ್ಯಗಳಿಗೆ ಪಲಾಯನ ಮಾಡುವುದನ್ನು ತಡೆಯಲು ಪೊಲೀಸರು ರಾಜ್ಯದ ಗಡಿಗಳಲ್ಲಿ ವಾಹನ ತಪಾಸಣೆಯನ್ನು ಸಹ ಕೈಗೊಂಡಿದ್ದರು.
ಏನಿದು ಪ್ರಕರಣ? ಸೈದಾಬಾದ್ ಪ್ರದೇಶದ ಸಿಂಗರೇಣಿ ಕಾಲೋನಿಯಲ್ಲಿ ಸೆಪ್ಟೆಂಬರ್ 9 ರಂದು ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಮಧ್ಯರಾತ್ರಿಯ ನಂತರ ಆತನ ಮನೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಈ ಕೃತ್ಯವು ನಗರ ಮತ್ತು ರಾಜ್ಯದಾದ್ಯಂತ ಭಾರೀ ಆಕ್ರೋಶವನ್ನು ಹುಟ್ಟುಹಾಕಿತು, ಕಳೆದ ವರ್ಷ ಹೈದರಾಬಾದಿನಲ್ಲಿ ನಡೆದ ದಿಶಾ ಪ್ರಕರಣದ ಆರೋಪಿಗಳಂತೆ ಆರೋಪಿಗಳನ್ನು ‘ಎನ್ ಕೌಂಟರ್’ ಮಾಡಬೇಕೆಂದು ಹಾಲಿ ರಾಜ್ಯ ಮಂತ್ರಿಗಳು ಸೇರಿದಂತೆ ಹಲವರು ಒತ್ತಾಯಿಸಿದ್ದರು.
ಆರೋಪಿಯನ್ನು ಹಿಡಿಯಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ, ಪೊಲೀಸ್ ಮಹಾನಿರ್ದೇಶಕ ಎಂ.ಮಹೇಂದರ್ ರೆಡ್ಡಿ ವೈಯಕ್ತಿಕವಾಗಿ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಅವರು ಪೊಲೀಸ್ ಆಯುಕ್ತರಿಗೆ ಸೂಚಿಸಿದರು. ಆಯುಕ್ತರ ಕಾರ್ಯಪಡೆ ಮತ್ತು ವಿಶೇಷ ಕಾರ್ಯಾಚರಣೆ ತಂಡದ (ಎಸ್‌ಒಟಿ) ಸಿಬ್ಬಂದಿಯನ್ನು ಬೃಹತ್ ಶೋಧ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗಿದೆ.
ಅಪರಾಧ ವರದಿಯಾದ ಒಂದು ದಿನದ ನಂತರ ಎಲ್‌ಬಿ ನಗರ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಕಾಣಿಸಿಕೊಂಡಿದ್ದ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಟ್ವಿಟರ್ನಲ್ಲಿ justice Served ಟ್ರೆಂಡ್ ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿಯ ಸಾವಿನ ಸುದ್ದಿ ಬಿತ್ತರವಾಗುತ್ತಿದ್ದಂತೆ ಟ್ವಿಟರ್ ನಲ್ಲಿ justice Served ಟ್ರೆಂಡ್ ಆಗಿದೆ.
Justice served Rapist Raju committed suicide today near a railway track, Warangal
Now Rest in Peace chaitra ?#JusticeForChaithra pic.twitter.com/ZWrfvXssrg
— Aryan SuryA ? (@AryanSuryA_) September 16, 2021
Justice Served #RipChaithra pic.twitter.com/ulAOLcHPHw
— Yamini? (@Yamutarak18) September 16, 2021
ಇದನ್ನೂ ಓದಿ: ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡುವುದಾಗಿ ಭರವಸೆ ನೀಡಿದ ತೆಲಂಗಾಣ ಸಚಿವ
(Hyderabad child rape and murder accused Pallakonda Raju found dead at Station Ghanapur railway tracks in Telangana)
Published On - 1:13 pm, Thu, 16 September 21