ಕುಬೇರ್ ಟೀಲಾ ಶಿವ ದೇವಾಲಯದಲ್ಲಿ ಪ್ರಾರ್ಥನೆ; ‘ಜಟಾಯು’ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಕುಬೇರ ಟೀಲಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕುಬೇರ ಟೀಲಾ ಸುಮಾರು ನೂರು ಅಡಿ ಎತ್ತರವಿರುವ ಈ ದಿಬ್ಬ ಮಣ್ಣು ಮತ್ತು ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ. ಅಲ್ಲಿ ಕಾಮೇಶ್ವರ ಮಹಾದೇವನ ಹಳೆಯ ದೇವಾಲಯವಿದೆ. ರಾಮಮಂದಿರದ ಆವರಣದಲ್ಲಿ ‘ಜಟಾಯು’ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದರು.

ಕುಬೇರ್ ಟೀಲಾ ಶಿವ ದೇವಾಲಯದಲ್ಲಿ ಪ್ರಾರ್ಥನೆ; 'ಜಟಾಯು' ಪ್ರತಿಮೆ ಅನಾವರಣಗೊಳಿಸಿದ ಮೋದಿ
ಜಟಾಯು ಪ್ರತಿಮೆ ಅನಾವರಣಗೊಳಿಸಿದ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Jan 22, 2024 | 6:48 PM

ಅಯೋಧ್ಯೆ, ಜನವರಿ 22: ಅಯೋಧ್ಯೆಯ ರಾಮಮಂದಿರ(Ram mandir) ಆವರಣದಲ್ಲಿರುವ ಕುಬೇರ ಟೀಲಾ(Kuber Tila) ದೇಗುಲಕ್ಕೆ ಸೋಮವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅಲ್ಲಿ ಶಿವನಿಗೆ ಪೂಜೆ ಸಲ್ಲಿಸಿದರು. ಅವರು ‘ಜಲಾಭಿಷೇಕ’ (‘ಶಿವಲಿಂಗ’ದ ಮೇಲೆ ನೀರು ಅರ್ಪಿಸುವುದು) ಮತ್ತು ದೇವಾಲಯದ ಪ್ರದಕ್ಷಿಣೆ ಮಾಡಿದ್ದಾರೆ. ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ಕುಬೇರ್ ಟೀಲಾದಲ್ಲಿರುವ ಪುರಾತನ ಶಿವ ದೇವಾಲಯವನ್ನು ರಾಮ ಮಂದಿರವನ್ನು ನಿರ್ಮಿಸುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ನವೀಕರಿಸಲಾಗುತ್ತಿದೆ.

ಬಳಿಕ ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ‘ಜಟಾಯು’ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದರು. ಶ್ರೀರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಕುಬೇರ ಟೀಲಾ ಇದೆ. ಇದು ಸುಮಾರು ನೂರು ಅಡಿ ಎತ್ತರವಿರುವ ಈ ದಿಬ್ಬ ಮಣ್ಣು ಮತ್ತು ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ. ಅಲ್ಲಿ ಕಾಮೇಶ್ವರ ಮಹಾದೇವನ ಹಳೆಯ ದೇವಾಲಯವಿದೆ.

ವರದಿಗಳ ಪ್ರಕಾರ, ಈ ದೇವಾಲಯದ ಗೋಡೆಯು ಸುಮಾರು ಎರಡೂವರೆ ಅಡಿ ಅಗಲ ಮತ್ತು 5 ಅಡಿ ಎತ್ತರವಿತ್ತು. ರಾಮಮಂದಿರ ನಿರ್ಮಾಣದ ಜೊತೆಗೆ ಟ್ರಸ್ಟ್ ಅದನ್ನು ನವೀಕರಿಸಿದೆ. ಈ ಸ್ಥಳಕ್ಕೆ ಕುಬೇರ ಆಗಮಿಸಿದ್ದ ಎಂದು ಹೇಳಲಾಗುತ್ತದೆ. ದಿಬ್ಬದ ಮೇಲೆ ಶಿವಲಿಂಗವನ್ನು ಸ್ಥಾಪಿಸಲಾಯಿತು. ನಂತರ ಜನರು ಗಣೇಶ, ಮಾತಾ ಪಾರ್ವತಿ, ಕಾರ್ತಿಕೇಯ, ನಂದಿ, ಕುಬೇರ ಸೇರಿದಂತೆ ಒಂಬತ್ತು ದೇವರು ಮತ್ತು ದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು.

ಕುಬೇರ ಟೀಲಾದ ಇತಿಹಾಸ ಪ್ರಾಚೀನವಾದುದು

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕುಬೇರ ಟೀಲಾವನ್ನು ನವೀಕರಿಸಿದೆ. ಅಲ್ಲಿ ಜಟಾಯುವಿನ ಪ್ರತಿಮೆಯನ್ನು ಕುಬೇರ ಟೀಲಾ ಮಾರ್ಗದಲ್ಲಿ ಸ್ಥಾಪಿಸಲಾಗಿದೆ. 30 ಅಡಿ ಎತ್ತರದ ಜಟಾಯು ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಅಂದಹಾಗೆ ಕುಬೇರ ಟೀಲಾದ ಇತಿಹಾಸವೂ ಪ್ರಾಚೀನವಾದುದು. ಭಗವಾನ್ ರಾಮನ ಜನನಕ್ಕೂ ಮುಂಚೆಯೇ ಈ ದಿಬ್ಬ ಇತ್ತು ಎಂದು ನಂಬಲಾಗಿದೆ. ಕುಬೇರ ಟೀಲಾ ಅಯೋಧ್ಯೆಯ ಮಹಾಕಾವ್ಯಗಳಲ್ಲಿಯೂ ಉಲ್ಲೇಖಿತವಾಗಿದೆ. ಇದೊಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ರಾಮಲಲ್ಲಾ ಪ್ರತಿಷ್ಠಾಪನೆ ನಂತರ ಅದರ ಪ್ರಾಮುಖ್ಯತೆಯು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Casinos Closure: ರಾಮಮಂದಿರ ಕಾರ್ಯಕ್ರಮ: ಕ್ಯಾಸಿನೋವಾಗಳು ಬಂದ್; ಇತರ ಉದ್ಯಮ ವಲಯದ ಸ್ಪಂದನೆ ಹೇಗೆ?

ಅಯೋಧ್ಯೆಯ ಪುಸ್ತಕ, ಲೋಹದ ‘ದಿಯಾ’: ಅತಿಥಿಗಳಿಗೆ ಉಡುಗೊರೆ

ಸೋಮವಾರ ರಾಮಮಂದಿರ ಉದ್ಘಾಟನಾ  ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಳಿಗೆ ಅಯೋಧ್ಯೆಯ ಕುರಿತಾದ ಪುಸ್ತಕ, ಲೋಹದ ‘ದಿಯಾ’ (ದೀಪ), ವಿಶೇಷ ‘ಮಾಲಾ’ ಮತ್ತು ರಾಮನ ಹೆಸರನ್ನು ಹೊಂದಿರುವ ಸ್ಕಾರ್ಫ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಡುಗೊರೆಗಳು ಹೊಸ ದೇವಾಲಯದ ಗ್ರಾಫಿಕ್ ಚಿತ್ರ ಮತ್ತು ಅತ್ಯಂತ ಚಿಕ್ಕ ಅವತಾರದಲ್ಲಿ ಶ್ರೀರಾಮನ ಚಿತ್ರವನ್ನು ಹೊಂದಿರುವ ಬ್ಯಾಗ್‌ನಲ್ಲಿವೆ. ಪುಸ್ತಕವು ‘ಅಯೋಧ್ಯಾ ಧಾಮ್ – ದಿ ಲಾರ್ಡ್ಸ್ ಅಬೋಡ್’ ಎಂದು ಹೆಸರಿಸಲ್ಪಟ್ಟಿದೆ, ಅದರ ಮುಖಪುಟ ರಾಮ್ ಲಲ್ಲಾನ ಹಳೆಯ ವಿಗ್ರಹದ ಚಿತ್ರವನ್ನು ಸಹ ಹೊಂದಿದೆ.‘ಉತ್ತರ ಪ್ರದೇಶ ಪ್ರವಾಸೋದ್ಯಮ’ ಮತ್ತು ಅದರ ಅಡಿಬರಹವನ್ನು ಹೊಂದಿರುವ ಫ್ಯಾಬ್ರಿಕ್ ಪೌಚ್‌ನೊಂದಿಗೆ ‘ಮಾಲಾ’ ಬಂದಿದೆ. ಅತಿಥಿಗಳಿಗೆ ನಾಲ್ಕು ಲಡ್ಡೂಗಳು, ಚಿಪ್ಸ್, ರೆವಿಡಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳ ಪೆಟ್ಟಿಗೆಯನ್ನೂ ನೀಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ