AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎಸ್​ನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್​ ಭಾರತಕ್ಕೆ ತಂದ ಪ್ರಧಾನಿ ಮೋದಿ; ಹಿಂದೆ ಕಳವಾಗಿದ್ದ ವಿಗ್ರಹಗಳೆಲ್ಲ ಮತ್ತೆ ದೇಶಕ್ಕೆ

ಇದೀಗ ಪ್ರಧಾನಿ ಮೋದಿಯವರು ಭಾರತಕ್ಕೆ ತರಲಿರುವ ಪುರಾತನ ವಸ್ತುಗಳಲ್ಲಿ 12ನೇ ಶತಮಾನದ ಕಂಚಿನ ನಟರಾಜ ವಿಗ್ರಹ, 10ನೇ ಶತಮಾನದ ರೇವಂತ ದೇವರ ಮೂರ್ತಿಗಳು ಇವೆ.

ಯುಎಸ್​ನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್​ ಭಾರತಕ್ಕೆ ತಂದ ಪ್ರಧಾನಿ ಮೋದಿ; ಹಿಂದೆ ಕಳವಾಗಿದ್ದ ವಿಗ್ರಹಗಳೆಲ್ಲ ಮತ್ತೆ ದೇಶಕ್ಕೆ
ಕಂಚಿನಿಂದ ಮಾಡಲಾದ ಲಕ್ಷ್ಮೀ ನಾರಾಯಣ ಅಲಂಕೃತ ಮೂರ್ತಿಗಳು, ಬುದ್ಧ, ವಿಷ್ಣು, ಶಿವ-ಪಾರ್ವತಿ ಮತ್ತು 24 ಜೈನ ತೀರ್ಥಂಕರ ಮೂರ್ತಿಗಳ ವಿಗ್ರಹ ಇದೆ.  ದೇವರ ವಿಗ್ರಹಗಳ ಹೊರತಾಗಿಯೂ ಕೆಲವು ಸಾಂಸ್ಕೃತಿಕ ಪ್ರತಿಬಿಂಬಕ ಕಲಾಕೃತಿಗಳಿವೆ.
TV9 Web
| Edited By: |

Updated on: Sep 26, 2021 | 9:58 AM

Share

ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಯುಎಸ್​ ಪ್ರವಾಸ (PM Modi US Visit) ಮುಗಿಸಿ, ಅಲ್ಲಿಂದ ಹೊರಟಿದ್ದಾರೆ. ನಿನ್ನೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದರು. ಸೆಪ್ಟೆಂಬರ್​ 24ರಂದು ಕ್ವಾಡ್​ ಶೃಂಗಸಭೆ (Quad Summit)ಯಲ್ಲಿ ಮಾತನಾಡಿದ್ದರು. ನಿನ್ನೆ (ಸೆಪ್ಟೆಂಬರ್​ 25) ಅವರ ಅಮೆರಿಕ ಪ್ರವಾಸ ಮುಕ್ತಾಯಗೊಂಡಿದ್ದು, ಈಗಾಗಲೇ ಅಲ್ಲಿಂದ ಹೊರಟಿದ್ದಾರೆ. ಆದರೆ ಹೀಗೆ ಭಾರತಕ್ಕೆ ಬರುವಾಗ, ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್​ ತರುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕಲಾಕೃತಿಗಳೆಲ್ಲ ಹಿಂದೆ ಕಳವಾಗಿ, ಯುಎಸ್​ಗೆ ಸಾಗಿಸಲ್ಪಟ್ಟಿದ್ದವು. ಅದನ್ನೀಗ ಪ್ರಧಾನಿ ಮೋದಿಯವರಿಗೆ ಅಮೆರಿಕ ಹಸ್ತಾಂತರ ಮಾಡಿದೆ.  ಈ ಬಗ್ಗೆ ಪ್ರಧಾನಿ ಮೋದಿ (Narendra Modi)ಯವರೂ ಕೂಡ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ.  

ಇದೀಗ ಪ್ರಧಾನಿ ಮೋದಿಯವರು ಭಾರತಕ್ಕೆ ತರಲಿರುವ ಪುರಾತನ ವಸ್ತುಗಳಲ್ಲಿ 12ನೇ ಶತಮಾನದ ಕಂಚಿನ ನಟರಾಜ ವಿಗ್ರಹ, 10ನೇ ಶತಮಾನದ ರೇವಂತ ದೇವರ ಮೂರ್ತಿಗಳು ಇವೆ. ಹೀಗೆ ವಾಪಸ್​ ತರಲಾದ 45 ಕಲಾಕೃತಿಗಳು ಸಾಮಾನ್ಯ ಯುಗಕ್ಕಿಂತಲೂ ಮುಂಚಿನವು. 71 ಸಾಂಸ್ಕೃತಿಕ ಕಲಾಕೃತಿಗಳಾಗಿದ್ದು, 60 ಹಿಂದೂ ಧರ್ಮ ಬಿಂಬಕ ಕಲಾಕೃತಿಗಳಾಗಿವೆ. ಇನ್ನು 16 ಕಲಾಕೃತಿಗಳು ಬೌದ್ಧಧರ್ಮಕ್ಕೆ ಸೇರಿದ್ದಾಗಿದ್ದು, 9 ಜೈನಧರ್ಮದ್ದಾಗಿವೆ.

ಕಂಚಿನಿಂದ ಮಾಡಲಾದ ಲಕ್ಷ್ಮೀ ನಾರಾಯಣ ಅಲಂಕೃತ ಮೂರ್ತಿಗಳು, ಬುದ್ಧ, ವಿಷ್ಣು, ಶಿವ-ಪಾರ್ವತಿ ಮತ್ತು 24 ಜೈನ ತೀರ್ಥಂಕರ ಮೂರ್ತಿಗಳ ವಿಗ್ರಹ ಇದೆ.  ದೇವರ ವಿಗ್ರಹಗಳ ಹೊರತಾಗಿಯೂ ಕೆಲವು ಸಾಂಸ್ಕೃತಿಕ ಪ್ರತಿಬಿಂಬಕ ಕಲಾಕೃತಿಗಳಿವೆ. ಮೂರು ತಲೆಯ ಬ್ರಹ್ಮ, ರಥ ಚಾಲನೆ ಮಾಡುತ್ತಿರುವ ಸೂರ್ಯ, ವಿಷ್ಣು, ದಕ್ಷಿಣಾಮೂರ್ತಿಯಾಗಿರುವ ಶಿವ, ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹಗಳು, ತಾರ, ಜೈನ ತೀರ್ಥಂಕರ, ಪದ್ಮಾಸನ ತೀರ್ಥಂಕರ ಮತ್ತು ಜೈನ ಚೌಬಿಸಿ ಮೂರ್ತಿಗಳೂ ಇವೆ.

Narendra Modi

ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ: KL Rahul: ಪಡಿಕ್ಕಲ್ ಅಲ್ಲ: ಆರ್​ಸಿಬಿ ಮುಂದಿನ ನಾಯಕ ಈ ಕನ್ನಡಿಗ ಎಂದ ರಾಯಲ್ ಚಾಲೆಂಜರ್ಸ್ ಆಟಗಾರ: ಯಾರು ಗೊತ್ತಾ?

Mann ki Baat: ಇಂದು ಪ್ರಧಾನಿ ಮೋದಿ ಮನ್​ ಕೀ ಬಾತ್​; ಎಲ್ಲೆಲ್ಲಿ ವೀಕ್ಷಿಸಬಹುದು? ಪ್ರಸಾರದ ಸಮಯ ಯಾವುದು? ಇಲ್ಲಿದೆ ಮಾಹಿತಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್