Cyclone Gulab: ಗುಲಾಬ್ ಚಂಡಮಾರುತದಿಂದ ಭೂಕುಸಿತದ ಅಪಾಯ; ಒಡಿಶಾ, ಆಂಧ್ರಪ್ರದೇಶದಲ್ಲಿ ರಕ್ಷಣಾ ಪಡೆಗಳು ಸಜ್ಜು, ರೈಲು ಸಂಚಾರ ರದ್ದು
ಓಡಿಶಾದ ದಕ್ಷಿಣ ಭಾಗದಲ್ಲಿರುವ ಒಟ್ಟು ಏಳು ಜಿಲ್ಲೆಗಳಿಗೆ ಗುಲಾಬ್ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದ್ದು, ಅಲ್ಲಿನ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಈಗಾಗಲೇ ಸರ್ಕಾರ ಶುರು ಮಾಡಿದೆ.
ದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ಗುಲಾಬ್ ಚಂಡಮಾರುತ (Cyclone Gulab) ಇಂದು ಸಂಜೆ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಸಂಜೆಯ ಹೊತ್ತಿಗೆ ಒಡಿಶಾದ ಗೋಪಾಲ್ಪುರ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂ ನಡುವೆ ಪ್ರತಿ ಗಂಟೆಗೆ 95 ಕಿಮೀ ವೇಗದಲ್ಲಿ ಚಂಡಮಾರುತದ ವೇಗ ಇರಲಿದ್ದು, ಈ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದೂ ಹೇಳಿದೆ.
ಪ್ರಸ್ತುತ ಗುಲಾಬ್ ಚಂಡಮಾರತ ಓಡಿಶಾದ ಗೋಪಾಲ್ಪುರದಿಂದ ಪೂರ್ವ-ಆಗ್ನೇಯದಿಂದ 270 ಕಿಮೀ ದೂರದಲ್ಲಿ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂನಿಂದ 330 ಕಿಮೀ ದೂರದಲ್ಲಿದೆ. ಚಂಡಮಾರುತದಿಂದ ಉಂಟಾಗಬಹುದಾದ ಹಾನಿ, ಅಪಾಯವನ್ನು ಎದುರಸಿಲು ಓಡಿಶಾದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯ (NDRF)13 ತಂಡಗಳು, ಆಂಧ್ರಪ್ರದೇಶದಲ್ಲಿ 5 ತಂಡಗಳು ಸಜ್ಜಾಗಿವೆ ಎಂದು ಎನ್ಡಿಆರ್ಎಫ್ನ ಡಿಜಿ ಸತ್ಯನಾರಾಯಣ ಪ್ರಧಾನ್ ತಿಳಿಸಿದ್ದಾರೆ.
ರೈಲು ಸಂಚಾರ ರದ್ದು ಗುಲಾಬ್ ಸೈಕ್ಲೋನ್ನಿಂದ ಮಳೆ, ಭೂಕುಸಿತ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕಡೆ ಸಂಚರಿಸುವ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಗುಲಾಬ್ ಚಂಡಮಾರುತದ ಪ್ರಭಾವ ಉಂಟಾಗಬಹುದಾದ ಸ್ಥಳಗಳನ್ನು ಸಂಪರ್ಕಿಸುವ ಹಲವು ರೈಲುಗಳ ಪ್ರಯಾಣದ ಸಮಯವನ್ನು ಮುಂದೂಡಲಾಗಿದೆ.
In view of cyclone “Gulab” supposed to be hit btwn South Odisha & North Andhra Pradesh, it has bn decided to cancel, divert, reschedule,regulate & short terminate below mentioned trains as per following @DRMWaltairECoR @DRMKhurdaRoad @DRMSambalpur pic.twitter.com/lIOj8z75eV
— East Coast Railway (@EastCoastRail) September 25, 2021
ಇನ್ನು ಓಡಿಶಾದ ದಕ್ಷಿಣ ಭಾಗದಲ್ಲಿರುವ ಒಟ್ಟು ಏಳು ಜಿಲ್ಲೆಗಳಿಗೆ ಗುಲಾಬ್ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದ್ದು, ಅಲ್ಲಿನ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಈಗಾಗಲೇ ಸರ್ಕಾರ ಶುರು ಮಾಡಿದೆ. ಅದರಲ್ಲೂ ಗಂಜಮ್ ಮತ್ತು ಗಜಪತಿ ಜಿಲ್ಲೆಗಳಲ್ಲಿ ಹೆಚ್ಚಿನ ರಕ್ಷಣಾ ಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎರಡು ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಅಪಾಯ ಉಂಟಾಗುವ ಸಾಧ್ಯತೆ ಇರಲಿದೆ ಎಂದು ಹೇಳಲಾಗಿದೆ. ಗಂಜಮ್ ಒಂದೇ ಜಿಲ್ಲೆಯಲ್ಲಿ 15 ರಕ್ಷಣಾ ಪಡೆಗಳು ಇವೆ. ಕಳೆದ ನಾಲ್ಕು ತಿಂಗಳ ಹಿಂದೆ ಓಡಿಶಾಕ್ಕೆ ಯಾಸ್ ಚಂಡಮಾರುತ ಅಪ್ಪಳಿಸಿತ್ತು. ಅದಾದ ಬಳಿಕ ಈಗ ಗುಲಾಬ್ ಆಗಮಿಸಿದೆ. 2018ರಲ್ಲಿ ಒಡಿಶಾಕ್ಕೆ ಅಪ್ಪಳಿಸಿದ್ದ ತಿತ್ಲಿಯಷ್ಟೇ ತೀವ್ರವಾಗಿ ಈ ಗುಲಾಬ್ ಚಂಡಮಾರುತ ಇರಲಿದೆ ಎಂದು ಹೇಳಲಾಗಿದೆ.
Viral Video: ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೀಗೂ ಹೇಳಬಹುದಾ?; ಮಜವಾದ ಈ ವಿಡಿಯೊ ನೋಡಿ