ಪ್ರಧಾನಿ ಮೋದಿಯಿಂದ ಮುಂಬೈನಲ್ಲಿ ನಾಳೆ ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಉದ್ಘಾಟನೆ

ಮುಂಬೈನಲ್ಲಿ ನಾಳೆ ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಆರಂಭವಾಗಲಿದೆ. 415,000 ಚದರ ಅಡಿಗಳಿಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಈ ಟರ್ಮಿನಲ್ ಅನ್ನು ವಾರ್ಷಿಕವಾಗಿ 1 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಏಕಕಾಲದಲ್ಲಿ 5 ಕ್ರೂಸ್ ಹಡಗುಗಳಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. 72 ಚೆಕ್-ಇನ್ ಮತ್ತು ವಲಸೆ ಕೌಂಟರ್‌ಗಳನ್ನು ಹೊಂದಿರುವ ಈ ಟರ್ಮಿನಲ್, ಪ್ರಯಾಣಿಕರಿಗೆ ತಡೆರಹಿತ ಮತ್ತು ಪರಿಣಾಮಕಾರಿ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಪ್ರಧಾನಿ ಮೋದಿಯಿಂದ ಮುಂಬೈನಲ್ಲಿ ನಾಳೆ ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಉದ್ಘಾಟನೆ
Mumbai Terminal

Updated on: Sep 19, 2025 | 8:16 PM

ಮುಂಬೈ, ಸೆಪ್ಟೆಂಬರ್ 19: ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಳೆ (ಶನಿವಾರ) ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಮುಂಬೈನಲ್ಲಿ ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಅನ್ನು ಉದ್ಘಾಟನೆ ಮಾಡಲಿದ್ದಾರೆ. 4,15,000 ಚದರ ಅಡಿಗಳಿಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಮುಂಬೈ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಅನ್ನು ವರ್ಷಕ್ಕೆ 1 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಶೀಘ್ರದಲ್ಲೇ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಲಿದೆ. ಈ ಟರ್ಮಿನಲ್ ವಿಶೇಷತೆಯ ಬಗ್ಗೆ ಮಾಹಿತಿ ಇಲ್ಲಿದೆ.

ಇಂದಿರಾ ಡಾಕ್‌ನಲ್ಲಿರುವ ಈ ಅತ್ಯಾಧುನಿಕ ಸೌಲಭ್ಯವು ಭಾರತೀಯ ಕ್ರೂಸ್ ಪ್ರವಾಸೋದ್ಯಮಕ್ಕೆ ಮಹತ್ವದ ದ್ವಾರವಾಗಿ ಹೊರಹೊಮ್ಮಲಿದೆ. ಭಾರತದ ಮಹತ್ವಾಕಾಂಕ್ಷೆಯ ಬಂದರು ಅಭಿವೃದ್ಧಿ ಉಪಕ್ರಮದ ಭಾಗವಾಗಿ ನಿರ್ಮಿಸಲಾದ ಈ ಕ್ರೂಸ್ ಟರ್ಮಿನಲ್ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. 4,15,000 ಚದರ ಅಡಿಗಳಿಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಮುಂಬೈ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಅನ್ನು ವರ್ಷಕ್ಕೆ 1 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ಲಾನ್ ಮಾಡಿ ನಿರ್ಮಿಸಲಾಗಿದೆ.


ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಕಿಂಗ್ ಚಾರ್ಲ್ಸ್ ಉಡುಗೊರೆಯಾಗಿ ಕೊಟ್ಟ ಕದಂಬ ಸಸಿ ನೆಟ್ಟ ಪ್ರಧಾನಿ ಮೋದಿ

ಇದು ಏಕಕಾಲದಲ್ಲಿ 5 ಕ್ರೂಸ್ ಹಡಗುಗಳಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಪ್ರತಿ ವರ್ಷ 1 ಮಿಲಿಯನ್ ಪ್ರಯಾಣಿಕರನ್ನು ಅಥವಾ ದಿನಕ್ಕೆ ಸುಮಾರು 10,000 ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. 72 ಚೆಕ್-ಇನ್ ಮತ್ತು ವಲಸೆ ಕೌಂಟರ್‌ಗಳನ್ನು ಹೊಂದಿರುವ ಟರ್ಮಿನಲ್ ಅನ್ನು ಪ್ರಯಾಣಿಕರಿಗೆ ಸುಗಮ, ಪರಿಣಾಮಕಾರಿ ಮತ್ತು ತೊಂದರೆಮುಕ್ತ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ 300ಕ್ಕೂ ಹೆಚ್ಚು ವಾಹನಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದು.

ಇದನ್ನೂ ಓದಿ: ‘ನಾನು ಮೋದಿಗೆ ತುಂಬಾ ಆಪ್ತ’; ಭಾರತದೊಂದಿಗಿನ ಬಿರುಕು ಸರಿಪಡಿಸಲು ಟ್ರಂಪ್ ಪ್ರಯತ್ನ

ಕ್ರೂಸ್ ಭಾರತ್ ಮಿಷನ್ ಪ್ರಕಾರ ಅಭಿವೃದ್ಧಿಪಡಿಸಲಾದ MICT ಅನ್ನು ಇತ್ತೀಚಿನ ಜಾಗತಿಕ ಮಾನದಂಡಗಳ ಪ್ರಕಾರ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ಈ ಮಿಷನ್ 3 ಸ್ತಂಭಗಳನ್ನು ಒಳಗೊಂಡಿದೆ. ಸಾಗರ ಮತ್ತು ಬಂದರು ಕ್ರೂಸ್‌ಗಳು, ನದಿ ಮತ್ತು ಒಳನಾಡಿನ ಕ್ರೂಸ್‌ಗಳು, ದ್ವೀಪ ಮತ್ತು ಲೈಟ್‌ಹೌಸ್ ಕ್ರೂಸ್‌ಗಳು. MICTನಲ್ಲಿ ಕ್ರೂಸ್ ಕಾರ್ಯಾಚರಣೆಗಳು ಏಪ್ರಿಲ್ 21ರಂದು ಪ್ರಾರಂಭವಾದವು. ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವುಗಳನ್ನು ಉದ್ಘಾಟಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Fri, 19 September 25