ಡಿ.11ರಂದು ಮಹಾರಾಷ್ಟ್ರ, ಗೋವಾಕ್ಕೆ ಮೋದಿ ಭೇಟಿ: ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ
ನರೇಂದ್ರ ಮೋದಿ ಅವರು ಡಿಸೆಂಬರ್ 11ರಂದು ಮಹಾರಾಷ್ಟ್ರ ಮತ್ತು ಗೋವಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಸಾವಿರಾರು ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
ನವದೆಹಲಿ: ಕಳೆದೊಂದು ತಿಂಗಳಿನಿಂದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ (Gujarat Election 2022) ಬ್ಯುಸಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡಿಸೆಂಬರ್ 11ರಂದು ಮಹಾರಾಷ್ಟ್ರ(Maharashtra) ಮತ್ತು ಗೋವಾ (Goa) ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಮೊದಲು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಮೋದಿ, ನಾಗಪುರ ಮತ್ತು ಬಿಲಾಸ್ಪುರ್ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ಗೆ(Vande Bharat Express )ಚಾಲನೆ ನೀಡಲಿದ್ದಾರೆ.
ಬಳಿಕ ನರೇಂದ್ರ ಮೋದಿ ಅವರು ನಾಗ್ಪುರ ಮೆಟ್ರೋ ಹಂತ I ಅನ್ನು ಉದ್ಘಾಟಿಸಲಿದ್ದು, 2ನೇ ಹಂತದ ಮೆಟ್ರೋ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ನಾಗ್ಪುರ ಮತ್ತು ಶಿರಡಿಯನ್ನು ಸಂಪರ್ಕಿಸುವ ಒಂದನೇ ಹಂತರ ಚತುಷ್ಪಥ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಇನ್ನು ನಾಗ್ಪುರದಲ್ಲಿ ಬೆಳಗ್ಗೆ 11:30ರ ಸುಮಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿಯವರು 1500 ಕೋಟಿ ರೂ.ಗೂ ಹೆಚ್ಚು ಮೊತ್ತದ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದೇ ವೇಳೆ ನಾಗ್ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ (ಎನ್‌ಐಒ) ಮತ್ತು ನಾಗಪುರದ ನಾಗ್ ನದಿ ಮಾಲಿನ್ಯ ನಿವಾರಣೆ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (CIPET) ಹಾಗೂ ಚಂದ್ರಾಪುರದ ಹಿಮೋಗ್ಲೋಬಿನೋಪಥಿ ಸಂಶೋಧನೆ, ನಿರ್ವಹಣೆ ಕೇಂದ್ರ,ವನ್ನು ಉದ್ಘಾಟಿಸಲಿದ್ದಾರೆ.
2017ರ ಜುಲೈನಲ್ಲಿ ಶಂಕುಸ್ಥಾಪನೆ ಮಾಡಿದ್ದ AIIMS ಆಸ್ಪತ್ರೆಯನ್ನು ಸಹ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. 1575 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. OPD, IPD, ಆಪರೇಷನ್ ಥಿಯೇಟರ್‌ಗಳು ಮತ್ತು 38 ವಿಭಾಗಗಳು ವೈದ್ಯಕೀಯದ ಎಲ್ಲಾ ಪ್ರಮುಖ ವಿಶೇಷತೆ ಮತ್ತು ಸೂಪರ್ ಸ್ಪೆಷಾಲಿಟಿಗಳನ್ನು ಒಳಗೊಂಡಿದೆ. ಆಸ್ಪತ್ರೆಯು ಮಹಾರಾಷ್ಟ್ರದ ವಿದರ್ಭ ಭಾಗದಲ್ಲಿ ಬರುವ ಗಡ್ಚಿರೋಲಿ, ಗೊಂಡಿಯಾ ಮತ್ತು ಮೆಲ್ಘಾಟ್ ಸುತ್ತಮುತ್ತಲಿನ ಬುಡಕಟ್ಟು ಪ್ರದೇಶಗಳಿಗೆ ವರದಾನವಾಗಿದೆ.
ರೈಲು ಯೋಜನೆಗಳು
ನಾಗಪುರ ರೈಲು ನಿಲ್ದಾಣದಲ್ಲಿ ಪ್ರಧಾನಮಂತ್ರಿಯವರು ನಾಗಪುರ ಮತ್ತು ಬಿಲಾಸ್ಪುರ್ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ನಾಗಪುರದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ, ಪ್ರಧಾನಿಯವರು ನಾಗಪುರ ರೈಲು ನಿಲ್ದಾಣ ಮತ್ತು ಅಜ್ನಿ ರೈಲು ನಿಲ್ದಾಣಗಳ ಕ್ರಮವಾಗಿ 590 ಕೋಟಿ ಮತ್ತು 360 ಕೋಟಿ ರೂ. ವೆಚ್ಚದ ಮರು ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸರ್ಕಾರಿ ನಿರ್ವಹಣಾ ಡಿಪೋ, ಅಜ್ನಿ (ನಾಗ್ಪುರ) ಮತ್ತು ನಾಗ್ಪುರದ ಕೊಹ್ಲಿ-ನಾರ್ಖರ್ ವಿಭಾಗ-ಇಟಾರ್ಸಿ ಮೂರನೇ ಮಾರ್ಗದ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳನ್ನು ಕ್ರಮವಾಗಿ 110 ಕೋಟಿ ಮತ್ತು ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಗೋವಾಕ್ಕೆ ಭೇಟಿ
ಮಹಾರಾಷ್ಟ್ರದಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಬಳಿಕ ಪ್ರಧಾನಿ ನರೇಂದ್ರ ಮೋದಿ, ಗೋವಾಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಮಧ್ಯಾಹ್ನ 3:15ಕ್ಕೆ ಮೋದಿ, 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಉದ್ಘಾಟಿಸಲಿದ್ದಾರೆ. ಸಂಜೆ 5:15 ರ ಸುಮಾರಿಗೆ ಗೋವಾದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. 2016ರ ನವೆಂಬರ್ನಲ್ಲಿ ಪ್ರಧಾನಿಯವರು ಈ ವಿಮಾನ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿದ್ದರು.
ಸುಮಾರು 2,870 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ವಿಮಾನ ನಿಲ್ದಾಣವು ಸುಸ್ಥಿರ ಮೂಲಸೌಕರ್ಯಗಳ ಧ್ಯೇಯದ ಮೇಲೆ ನಿರ್ಮಿಸಲ್ಪಟ್ಟಿದೆ ಮತ್ತು ಸೌರ ವಿದ್ಯುತ್ ಸ್ಥಾವರ, ಹಸಿರು ಕಟ್ಟಡಗಳು, ರನ್ವೇಯಲ್ಲಿ ಎಲ್ಇಡಿ ದೀಪಗಳು, ಮಳೆ ನೀರು ಕೊಯ್ಲು, ಮರುಬಳಕೆ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಒಳಚರಂಡಿ ಸಂಸ್ಕರಣಾ ಘಟಕವನ್ನು ಹೊಂದಿದೆ.
ಇಂತಹ ಇತರ ಸೌಲಭ್ಯಗಳ ನಡುವೆ. ಇದು 3-D ಏಕಶಿಲೆಯ ಪ್ರೀಕಾಸ್ಟ್ ಕಟ್ಟಡಗಳು, ಸ್ಟೆಬಿಲ್ರೋಡ್, ರೋಬೋಮ್ಯಾಟಿಕ್ ಹಾಲೋ ಪ್ರಿಕಾಸ್ಟ್ ಗೋಡೆಗಳು, 5ಜಿ ಸಕ್ರಿಯವಾದ ಐಟಿ ಮೂಲಸೌಕರ್ಯಗಳಂತಹ ಕೆಲವು ಅತ್ಯುತ್ತಮ ದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ವಿಮಾನ ನಿಲ್ದಾಣದ ಕೆಲವು ವೈಶಿಷ್ಟ್ಯಗಳಲ್ಲಿ ವಿಶ್ವದ ಅತಿದೊಡ್ಡ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ರನ್ವೇ, 14 ಪಾರ್ಕಿಂಗ್ ಬೇಗಳು ಜೊತೆಗೆ ವಿಮಾನಗಳಿಗೆ ರಾತ್ರಿ ಪಾರ್ಕಿಂಗ್ ಸೌಲಭ್ಯ, ಸ್ವಯಂ-ಬ್ಯಾಗೇಜ್ ಡ್ರಾಪ್ ಸೌಲಭ್ಯಗಳು, ಅತ್ಯಾಧುನಿಕ ಮತ್ತು ಸ್ವತಂತ್ರ ಏರ್ ನ್ಯಾವಿಗೇಷನ್ ಮೂಲಸೌಕರ್ಯಗಳು ಸೇರಿವೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ