UNWTO–Pochampally: ಪೂಚಂಪಲ್ಲಿ ಗ್ರಾಮಕ್ಕೆ ವಿಶ್ವಸಂಸ್ಥೆ ಮಾನ್ಯತೆ- ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ! ಏನಿದರ ವಿಶೇಷತೆ?
ಕೇಂದ್ರ ಸರ್ಕಾರವು ಒಟ್ಟು ಮೂರು ರಾಜ್ಯಗಳಿಂದ ಮೂರು ಗ್ರಾಮಗಳನ್ನು ವಿಶ್ವ ಸಂಸ್ಥೆಗೆ ಕಳಿಸಿತ್ತು. ಮೇಘಾಲಯದಿಂದ ಕೊಂಗ್ತಾಂಗ್, ಮಧ್ಯಪ್ರದೇಶದಿಂದ ಲಾಧ್ಪುರಖಾಸ್ ಮತ್ತು ತೆಲಗಾಣದಲ್ಲಿನ ಈ ಪೂಚಂಪಲ್ಲಿ ಗ್ರಾಮವನ್ನು ಆಯ್ದು ಕಳಿಸಿತ್ತು. ಈ ಮೂರೂ ಗ್ರಾಮಗಳನ್ನು ಖುದ್ದಾಗಿ ಪರಿಶೀಲಿಸಿದ ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆಯ ಪ್ರತಿನಿಧಿಗಳ ತಂಡವು ಅಂತಿಮವಾಗಿ ತೆಲಗಾಣದ ಪೂಚಂಪಲ್ಲಿ ಗ್ರಾಮವನ್ನು ಆಯ್ಕೆ ಮಾಡಿದೆ.
UNWTO–Pochampally: ತೆಲಂಗಾಣ ರಾಜ್ಯದ ಪೂಚಂಪಲ್ಲಿ ಎಂಬ ಗ್ರಾಮಕ್ಕೆ ವಿಶ್ವ ಮಾನ್ಯತೆ ಲಭಿಸಿದೆ. ಭಾರತದಿಂದ ಆಯ್ಕೆಯಾದ ಏಕೈಕ ಗ್ರಾಮ ಇದಾಗಿದೆ! ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆ (united nations world tourism organisation – un wto) ಈ ಆಯ್ಕೆ ಮಾಡಿದೆ. ಡಿಸೆಂಬರ್ 2 ರಂದು ಸ್ಪೇನ್ನ ಮ್ಯಾಡ್ರಿಡ್ನಲ್ಲಿ ನಡೆದ ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆಯ (un wto) 24ನೇ ಹನರ್ದ ಅಸೆಂಬ್ಲಿ ಸಭೆಯಲ್ಲಿ ಈ ಪ್ರತಿಷ್ಠಿತ ಅವಾರ್ಡ್ ಅನ್ನು ಕೊಡಮಾಡಲಿದ್ದಾರೆ. ಕೇಂದ್ರ ಸರ್ಕಾರವು ಒಟ್ಟು ಮೂರು ರಾಜ್ಯಗಳಿಂದ ಮೂರು ಗ್ರಾಮಗಳನ್ನು ವಿಶ್ವ ಸಂಸ್ಥೆಗೆ ಕಳಿಸಿತ್ತು. ಮೇಘಾಲಯದಿಂದ ಕೊಂಗ್ತಾಂಗ್, ಮಧ್ಯಪ್ರದೇಶದಿಂದ ಲಾಧ್ಪುರಖಾಸ್ ಮತ್ತು ತೆಲಗಾಣದಲ್ಲಿನ ಈ ಪೂಚಂಪಲ್ಲಿ ಗ್ರಾಮವನ್ನು ಆಯ್ದು ಕಳಿಸಿತ್ತು.
ಈ ಮೂರೂ ಗ್ರಾಮಗಳನ್ನು ಖುದ್ದಾಗಿ ಪರಿಶೀಲಿಸಿದ ವಿಶ್ವ ಸಂಸ್ಥೆಯ ಪ್ರಪಂಚ ಪ್ರವಾಸೋದ್ಯಮ ಸಂಸ್ಥೆಯ ಪ್ರತಿನಿಧಿಗಳ ತಂಡವು ಅಂತಿಮವಾಗಿ ತೆಲಗಾಣದ ಪೂಚಂಪಲ್ಲಿ ಗ್ರಾಮವನ್ನು ಆಯ್ಕೆ ಮಾಡಿದೆ. ಪೂಚಂಪಲ್ಲಿ ಗ್ರಾಮಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿರುವುದಕ್ಕೆ ಕೇಂದ್ರ ಸಚಿವ ಕಿಷನ್ ರೆಡ್ಡಿ ಹರ್ಷ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಶ್ರಮಿಸಿದ ಅಧಿಕಾರಿ ವರ್ಗವನ್ನು ಮತ್ತು ಗ್ರಾಮಸ್ಥರನ್ನು ಅಭಿನಂದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ಅಭಿಯಾನದ ಭಾಗವಾಗಿ (Atmanirbhar Bharat Abhiyaan or Self-reliant India campaign vocal for local) ವೋಕಲ್ ಫಾರ್ ಲೋಕಲ್ ಘೋಷ ಮಂತ್ರದಡಿ ಈ ಗ್ರಾಮಕ್ಕೆ ವಿಶ್ವ ಮಾನ್ಯತೆ ಲಭಿಸುವಂತೆ ಅಧಿಕಾರಿವರ್ಗ ಶ್ರಮಿಸಿದೆ. ಪೂಚಂಪಲ್ಲಿ ಗ್ರಾಮದಲ್ಲಿ ಸೀರೆಗಳ ತಯಾರಿಕೆಯಲ್ಲಿ ಅಳವಡಿಸಿಕೊಂಡಿರುವ ವಿಶೇಷವಾದ ನೇಯ್ಗೆ ಶೈಲಿಗಳು (Weaving styles), ವಿನೂತನ ನಮೂನೆಗಳು ಪ್ರಪಂಚವನ್ನು ಆಕರ್ಷಿಸಿದೆ. ಗ್ರಾಮಸ್ಥರ ಶ್ರಮ, ಸ್ವಯಂಕೃಷಿ, ಅಧಿಕಾರಿಗಳ ಮಾರ್ಗದರ್ಶನದಿಂದಾಗಿ ಈ ಸಾಧನೆ ಮಾಡಲಾಗಿದೆ ಎಂದು ಕೇಂದ್ರ ಮಂತ್ರಿ ಕಿಷನ್ ರೆಡ್ಡಿ (Minister for Municipal Admin & Urban Dev, Industry & Commerce, ITE&C, MLA from Siricilla, Telangana) ಸಂತಸ ವ್ಯಕ್ತಪಡಿಸಿದ್ದಾರೆ.
My compliments to the people of Pochampally, Telangana on being selected as one of the best Tourism Villages by United Nations World Tourism Organisation ?
The prestigious award will be given on the occasion of 24th session of the UNWTO General Assembly on Dec 2 in Madrid,Spain
— KTR (@KTRTRS) November 16, 2021
(pochampally village in telangana selected as best tourism village by united nations world tourism organisation un wto)