
ಹೈದರಾಬಾದ್, ನವೆಂಬರ್ 12: ಹೈದರಾಬಾದ್ ಬಳಿಯ ಅಂಬರ್‌ಪೇಟೆ ಪೊಲೀಸರು ಬಹು ವಾಹನ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಮೂವರನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು 19 ಟಿವಿಎಸ್ ಎಕ್ಸ್‌ಎಲ್ ಮೊಪೆಡ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ಯಾಂಗ್ ಅನ್ನು ರಚಿಸಿ ಮೊಪೆಡ್‌ಗಳನ್ನು ಕದಿಯುತ್ತಿದ್ದ ಮೂವರನ್ನು ಅಂಬರ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 7ರಂದು ಪ್ರೇಮನಗರದಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಟಿವಿಎಸ್ ಎಕ್ಸ್‌ಎಲ್ ಬೈಕ್ ಕಳುವಾಗಿದೆ ಎಂದು ದೂರು ದಾಖಲಿಸಿದ್ದರು. ಇದಾದ ನಂತರ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ದರೋಡೆಕೋರರ ಗ್ಯಾಂಗ್ ಸಿಕ್ಕಿಬಿದ್ದಿದೆ. ಸಿಸಿಟಿವಿ ದೃಶ್ಯಗಳ (CCTV Video) ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಪ್ರಮುಖ ಆರೋಪಿ ಶ್ರವಣ್ (28) ಚತ್ರಿನಕ ಮೂಲದವನು. ಈತ ತರಕಾರಿ ವ್ಯಾಪಾರಿ. ಈತನ ಜೊತೆ ಬೀಬಿನಗರ ಮತ್ತು ಮೆಡ್ಚಲ್ ಪ್ರದೇಶಗಳ ಇಬ್ಬರು ಕಾರ್ಮಿಕರಾದ ಕಲಿಯ ರಾಜು (38) ಮತ್ತು ಶಕತ್ ಮುಖೇಂದರ್ (40) ಸೇರಿಕೊಂಡಿದ್ದರು. ಟಿವಿಎಸ್ ಎಕ್ಸ್‌ಎಲ್ ಮೊಪೆಡ್‌ಗಳನ್ನು ಕದ್ದರೆ ಮಾಲೀಕರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಭಾವಿಸಿ ಅವರು ಕದಿಯಲು ಪ್ರಾರಂಭಿಸಿದ್ದರು.
ಇದನ್ನೂ ಓದಿ: ಆಸ್ತಿ ಆಸೆ, ಹಣದ ಮೇಲೆ ಮೋಹ: ಸ್ಕೆಚ್ ಹಾಕಿ ಸಾಕು ತಾಯಿಯನ್ನೇ ಮುಗಿಸಿದ ಮಗಳು
ತನಿಖೆಯ ಸಮಯದಲ್ಲಿ ಶ್ರವಣ್‌ನನ್ನು ಈ ಹಿಂದೆ ಅಫ್ಜಲ್‌ಗಂಜ್ ಮತ್ತು ಬಾಲನಗರ ಪೊಲೀಸ್ ಠಾಣೆಗಳ ಅಡಿಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ. ಅಗ್ಗದ ಬೈಕ್‌ಗಳನ್ನು ಕದ್ದರೆ ಮಾಲೀಕರು ದೂರು ನೀಡುವುದಿಲ್ಲ ಎಂದು ಭಾವಿಸಿ ಅವರು ಟಿವಿಎಸ್ ಮೊಪೆಡ್ ಕದಿಯಲು ಪ್ರಾರಂಭಿಸಿದರು.
ಇದನ್ನೂ ಓದಿ: ಭೋಪಾಲ್‌ನ 27 ವರ್ಷದ ಮಾಡೆಲ್ ನಿಗೂಢ ಸಾವು; ಲವ್ ಜಿಹಾದ್ ಶಂಕೆ
ಏಪ್ರಿಲ್ ಮತ್ತು ನವೆಂಬರ್ ಮೊದಲ ವಾರದ ನಡುವೆ ನಗರದ ವಿವಿಧ ಭಾಗಗಳಿಂದ 19 ಟಿವಿಎಸ್ ಎಕ್ಸ್‌ಎಲ್ ಬೈಕ್‌ಗಳನ್ನು ಕದ್ದಿರುವುದು ಬಹಿರಂಗವಾಗಿದೆ. ಪೊಲೀಸರು ಒಟ್ಟು 19 ಬೈಕ್‌ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ