ನಟಿ ಚಿತ್ರಾ ಆತ್ಮಹತ್ಯೆಗೆ ಹೊಸ ತಿರುವು: 6 ದಿನಗಳ ವಿಚಾರಣೆ ಬಳಿಕ ಪತಿ ಹೇಮಂತ್ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Dec 15, 2020 | 12:35 PM

ಡಿಸೆಂಬರ್ 9 ರಂದು ಚೆನ್ನೈನ ನಜರೀತ್ ಪೆಟೈ ಎಂಬ ಖಾಸಗಿ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿಜೆ ಚಿತ್ರಾ ಅವರ ಸಾವಿಗೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದೆ.

ನಟಿ ಚಿತ್ರಾ ಆತ್ಮಹತ್ಯೆಗೆ ಹೊಸ ತಿರುವು: 6 ದಿನಗಳ ವಿಚಾರಣೆ ಬಳಿಕ ಪತಿ ಹೇಮಂತ್ ಅರೆಸ್ಟ್
ನಟಿ ಚಿತ್ರಾ ಮತ್ತು ಪತಿ ಹೇಮಂತ್
Follow us on

ಚೆನ್ನೈ: ಹೆಸರಾಂತ ಕಿರುತೆರೆ ನಟಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಸದ್ಯ ಹೊಸ ಟ್ವಿಸ್ಟ್ ಸಿಕ್ಕಿದ್ದು, ನಟಿ ಚಿತ್ರಾ ಪತಿ ಹೇಮಂತ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 9 ರಂದು ಚೆನ್ನೈನ ನಜರೀತ್ ಪೆಟೈ ಎಂಬ ಖಾಸಗಿ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಚಿತ್ರಾ ಮೃತದೇಹ ಪತ್ತೆಯಾಗಿತ್ತು. ಸದ್ಯ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, 6 ದಿನಗಳ ವಿಚಾರಣೆ ಬಳಿಕ ನಟಿ ಚಿತ್ರಾಳ ಪತಿ ಹೇಮಂತ್ ಆತ್ಮಹತ್ಯೆಗೆ ಪ್ರಚೋಧನೆ ನೀಡಿದ್ದಾನೆ ಎಂಬ ಆರೋಪದಡಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳು ಧಾರಾವಾಹಿ ಪಾಂಡಿಯನ್ ಸ್ಟೋರ್ಸ್‌ ಖ್ಯಾತಿಯ ನಟಿ ಚಿತ್ರಾ ಆತ್ಮಹತ್ಯೆ