‘ಇಂದಿರಾನಗರ್ ಕಾ ಗೂಂಡಾ’ ಬಳಸಿ ವಿವಿಧ ರಾಜ್ಯಗಳ ಟ್ರಾಫಿಕ್ ಪೊಲೀಸ್ ಟ್ವೀಟ್; ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ದ್ರಾವಿಡ್ ಹವಾ
Rahul Dravid: ಇಂದಿರಾನಗರ್ ಕಾ ಗೂಂಡಾ ಹು ಮೈ ಎಂಬ ಸಾಲು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಗುಜರಾತ್ ಹಾಗೂ ಸೂರತ್ ಸಿಟಿ ಪೊಲೀಸರು ಜಾಹೀರಾತಿನ ಚಿತ್ರವನ್ನು ಬಳಸಿಕೊಂಡು ರಸ್ತೆ ಜಾಗೃತಿ ಮೂಡಿಸಿದ್ದಾರೆ.
ಕ್ರಿಕೆಟ್ ಲೋಕ ಕಂಡ ಅಜಾತಶತ್ರು, ಜಂಟಲ್ಮನ್ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಕಾಣಿಸಿಕೊಂಡಿರುವ ಜಾಹೀರಾತು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಯಾವತ್ತೂ ತಾಳ್ಮೆ ಕಳೆದುಕೊಳ್ಳದ ವಾಲ್ ಟ್ರಾಫಿಕ್ನಲ್ಲಿ ಈ ಪರಿ ಸಿಟ್ಟಾಗಿದ್ದಾರೆ. ಅಯ್ಯೋ.. ದ್ರಾವಿಡ್ ಸಿಟ್ಟು ಕೂಡ ಎಷ್ಟು ಖುಷಿ ಕೊಡುತ್ತಿದೆ. ಇಂದಿರಾನಗರ್ ಕಾ ಗೂಂಡಾ ಹು ಮೈ ಎಂಬ ಸಾಲು, ಇತ್ಯಾದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಟ್ರೆಂಡ್ ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ಗುಜರಾತ್ ಸೂರತ್ ಸಿಟಿ ಪೊಲೀಸ್, ನಾಗ್ಪುರ್ ಸಿಟಿ ಪೊಲೀಸ್ ಹಾಗೂ ಮುಂಬೈ ಪೊಲೀಸ್ ಕೂಡ ಈ ತುಣುಕನ್ನು ಬಳಸಿಕೊಂಡಿದ್ದಾರೆ. ಗುಜರಾತ್ ಹಾಗೂ ಸೂರತ್ ಸಿಟಿ ಪೊಲೀಸರು ಜಾಹೀರಾತಿನ ಒಂದು ಚಿತ್ರವನ್ನು ಬಳಸಿಕೊಂಡು ರಸ್ತೆ ಜಾಗೃತಿ ಮೂಡಿಸಿದ್ದಾರೆ. ‘ಗೂಂಡಾಗಿರಿ ಸಿನಿಮಾದಲ್ಲಿ ಚೆನ್ನಾಗಿರುತ್ತದೆ. ಆದರೆ ರಸ್ತೆ ಮೇಲಲ್ಲ. ಅದು ಇಂದಿರಾನಗರ್ ಆಗಿರಲಿ ಅಥವಾ ಸೂರತ್ ರಸ್ತೆಯೇ ಆಗಿರಲಿ. ಗೂಂಡಾಗಿರಿ ಸಾಧುವಲ್ಲ’ ಎಂದು ಬರೆದುಕೊಂಡಿದ್ದಾರೆ.
View this post on Instagram
Be it in “indiranagar” or anywhere. Keep your calm, Avoid unnecessary honking.#NagpurPolice pic.twitter.com/CTcfEV6AL8
— Nagpur City Police (@NagpurPolice) April 10, 2021
ಜೊತೆಗೆ ಮುಂಬೈ ಪೊಲೀಸರು ಕೂಡ ಈ ಜಾಹೀರಾತಿನ ಚಿತ್ರ ಬಳಸಿ ಜನಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಕೊರೊನಾ ವೈರಸ್ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಅವಶ್ಯ ಎಂದು ತಿಳಿಸಿಕೊಟ್ಟಿದ್ದಾರೆ.
Mask, seeing the the virus approaching you! #WallOfSafety #MaskUp #MaskIsMust pic.twitter.com/gVBbQ9XbGf
— Mumbai Police (@MumbaiPolice) April 10, 2021
ಈ ಜಾಹೀರಾತು ಕ್ರೆಡಿಟ್ ಕಾರ್ಡ್ ಪೇಮೆಂಟ್ ಅಪ್ಲಿಕೇಷನ್, CREDನ ಇಂಡಿಯನ್ ಪ್ರೀಮಿಯರ್ ಲೀಗ್ ಕ್ಯಾಂಪೇನ್ನ ಭಾಗವಾಗಿತ್ತು. ಈ ಜಾಹೀರಾತು ಹೊರಬಿದ್ದ ಮರುಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಸಾಲು ಸಾಲು ಮಿಮ್ಸ್ಗಳು ಹಂಚಲ್ಪಟ್ಟಿದ್ದವು. ಜನಸಾಮಾನ್ಯರು ಕೂಡ ಈ ಜಾಹೀರಾತಿಗೆ ವಿವಿಧ ಆಯಾಮ ನೀಡಿ ಹಂಚಿಕೊಂಡಿದ್ದರು. ದ್ರಾವಿಡ್ ಅವರನ್ನು ಈ ರೀತಿ ನೋಡೇ ಇರಲಿಲ್ಲ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಈ ಪರ್ಫಾಮೆನ್ಸ್ಗೆ ದ್ರಾವಿಡ್ಗೆ ಆಸ್ಕರ್ ಕೊಡಬೇಕು ಎಂದು ಹಲವರು ಸಂತಸಪಟ್ಟಿದ್ದಾರೆ. ರಾಹುಲ್ ದ್ರಾವಿಡ್ ಇರುವ ಜಾಹೀರಾತು ತರಹೇವಾರಿ ರೂಪದಲ್ಲಿ ಟ್ವಿಟರ್ನಲ್ಲಿ ಶೇರ್ ಆಗಿರುವುದು..
Never seen this side of Rahul bhai ?? pic.twitter.com/4W93p0Gk7m
— Virat Kohli (@imVkohli) April 9, 2021
And the Oscar goes to… #RahulDravid ??? https://t.co/iTZ4lGw3jZ
— Ajith Ramamurthy (@Ajith_tweets) April 9, 2021
No one :
Some students in college : pic.twitter.com/4iHcFYjXCq
— sarcastic bunny (@sarcasticbunny_) April 10, 2021
ಇದನ್ನೂ ಓದಿ: Rahul Dravid: ವೆಂಕಟೇಶ್ ಪ್ರಸಾದ್ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್ ಬಳಿಕ ಇನ್ನೊಂದು ವಿಡಿಯೋ ವೈರಲ್
Rahul Dravid: ದ್ರಾವಿಡ್ ನಟಿಸಬಹುದಾದ 8 ಕನ್ನಡ ಸಿನಿಮಾಗಳು! ಟೈಟಲ್ ಕೇಳಿ ನಗುತ್ತಿರುವ ನೆಟ್ಟಿಗರು
(Police Forces use Rahul Dravids Indiranagar ka gunda hashtag memes Ad featuring Rahul Dravid goes viral)
Published On - 8:29 pm, Sun, 11 April 21