ಮಹಿಳೆಯ ತಲೆ ಮೇಲೆ ‘ಉಗುಳುವ’ ವಿಡಿಯೊ ವೈರಲ್ ಆದ ಬೆನ್ನಲ್ಲೇ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ವಿರುದ್ಧ ಪ್ರಕರಣ ದಾಖಲು

Hairstylist Jawed Habib ಮನ್ಸೂರ್‌ಪುರ ಪೊಲೀಸ್ ಠಾಣೆಯಲ್ಲಿ ದೂರಿನ ಮೇರೆಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 355 (ದಾಳಿ) ಮತ್ತು 504 (ನೋವು ಉಂಟು ಮಾಡುವುದು) ಮತ್ತು ಸಾಂಕ್ರಾಮಿಕ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಜಾವೇದ್ ಹಬೀಬ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ಮಹಿಳೆಯ ತಲೆ ಮೇಲೆ 'ಉಗುಳುವ' ವಿಡಿಯೊ ವೈರಲ್ ಆದ ಬೆನ್ನಲ್ಲೇ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ವಿರುದ್ಧ ಪ್ರಕರಣ  ದಾಖಲು
ಜಾವೇದ್ ಹಬೀಬ್ (ಕೃಪೆ: ಇನ್​ಸ್ಟಾಗ್ರಾಮ್)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 07, 2022 | 11:46 AM

ದೆಹಲಿ: ಮುಜಾಫರ್‌ನಗರದಲ್ಲಿ (Muzaffarnagar) ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳೆಯ ಹೇರ್ ಕಟ್ ಮಾಡುವಾಗ ತಲೆಕೂದಲಿಗೆ ಉಗುಳುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ಖ್ಯಾತ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ (Jawed Habib) ವಿರುದ್ಧ ಪ್ರಕರಣ ದಾಖಲಾಗಿದೆ. ಮನ್ಸೂರ್‌ಪುರ ಪೊಲೀಸ್ ಠಾಣೆಯಲ್ಲಿ ದೂರಿನ ಮೇರೆಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 355 (ದಾಳಿ) ಮತ್ತು 504 (ನೋವು ಉಂಟು ಮಾಡುವುದು) ಮತ್ತು ಸಾಂಕ್ರಾಮಿಕ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.  ಅಧಿಕಾರಿಗಳ ಪ್ರಕಾರ ನಾಲ್ಕು ದಿನಗಳ ಹಿಂದೆ ಮುಜಾಫರ್‌ನಗರದ ಕಿಂಗ್ ವಿಲ್ಲಾ ಹೋಟೆಲ್‌ನಲ್ಲಿ ಕೂದಲ ರಕ್ಷಣೆಯ ಕುರಿತು ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಜಾವೇದ್ ಹಬೀಬ್ ಮುಖ್ಯ ಅತಿಥಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಹಬೀಬ್ ಮಹಿಳೆಯೊಬ್ಬರಿಗೆ ಹೇರ್ ಕಟ್ ಮಾಡುವಾಗ ತಲೆಯ ಮೇಲೆ ಉಗುಳುವುದನ್ನು ಕಾಣಬಹುದು. ಈ ವಿಡಿಯೊದಲ್ಲಿ ಜಾವೇದ್, ನೀರಿಲ್ಲದಿದ್ದರೆ ಉಗುಳಬಹುದು ಎಂದು ಹೇಳುವುದನ್ನು ಕೇಳಬಹುದು. ಆದಾಗ್ಯೂ, ಮಹಿಳೆ ನಂತರ ಜಾವೇದ್ ಹಬೀಬ್‌ನ ಕಡೆಯಿಂದ ಅನುಚಿತ ವರ್ತನೆಯನ್ನು ಆರೋಪಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದರು. “ನಾನು ಬ್ಯೂಟಿ ಸಲೂನ್ ನಡೆಸುತ್ತಿದ್ದೇನೆ ಮತ್ತು ಜಾವೇದ್ ಹಬೀಬ್ ಅವರ ಸೆಮಿನಾರ್‌ನಲ್ಲಿ ಭಾಗವಹಿಸುತ್ತಿದ್ದೆ. ಹೇರ್ ಕಟ್ ಮಾಡಲು ನನ್ನನ್ನು ವೇದಿಕೆಗೆ ಕರೆಯಲಾಯಿತು. ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ನಿಮ್ಮ ಬಳಿ ನೀರಿಲ್ಲದಿದ್ದರೆ, ಕೂದಲು ಕತ್ತರಿಸಲು ನೀವು ಉಗುಳನ್ನು ಸಹ ಬಳಸಬಹುದು ಎಂದು ಅವರು ಹೇಳಿದರು ಎಂದು ಬರಾವುತ್ ನಿವಾಸಿ ಪೂಜಾ ಗುಪ್ತಾ ಹೇಳಿದರು. ಬಳಿಕ ಈ ಮಹಿಳೆ ಹಬೀಬ್ ವಿರುದ್ಧ ದೂರು ದಾಖಲಿಸಿದ್ದರು.

ರಾಷ್ಟ್ರೀಯ ಮಹಿಳಾ ಆಯೋಗವೂ ಘಟನೆಯ ಬಗ್ಗೆ ಗಮನಹರಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಗುರುವಾರ ಹಬೀಬ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಬಲಪಂಥೀಯ ಸಂಘಟನೆಯಾದ ಹಿಂದೂ ಜಾಗರಣ್ ಮಂಚ್ ಹಬೀಬ್ ಪ್ರತಿಕೃತಿಯನ್ನು ಸುಟ್ಟು ಬಂಧಿಸುವಂತೆ ಒತ್ತಾಯಿಸಿತು.

View this post on Instagram

A post shared by Jawed Habib (@jh_hairexpert)

ಕ್ಷಮೆಯಾಚಿಸಿದ ಹಬೀಬ್ ಸಾಮಾಜಿಕ ಮಾಧ್ಯಮಗಳಲ್ಲಿ ಹಬೀಬ್ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವರ್ತನೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದು, ಹಬೀಬ್ ಇನ್​​ಸ್ಟಾಗ್ರಾಮ್​​ನಲ್ಲಿ ಕ್ಷಮೆಯಾಚಿಸಿದ್ದಾರೆ “ಈವೆಂಟ್‌ನಲ್ಲಿ ಮಾತನಾಡಿದ ಕೆಲವು ಮಾತುಗಳು ಜನರನ್ನು ನೋಯಿಸುವಂತಿದೆ. ಈ ಕಾರ್ಯಕ್ರಮದಲ್ಲಿ ವೃತ್ತಿಪರರು ಭಾಗವಹಿಸುತ್ತಾರೆ ಮತ್ತು ಅವು ಸಾಮಾನ್ಯವಾಗಿ ದೀರ್ಘವಾಗಿರುತ್ತವೆ. ಕೆಲವೊಮ್ಮೆ, ನೀವು ಹಾಸ್ಯವನ್ನು ಕಾಪಾಡಿಕೊಳ್ಳಬೇಕು. ಹಾಗಿದ್ದರೂ, ನನ್ನ ಹೃದಯದಿಂದ ಹೇಳುತ್ತೇನೆ, ನಿಮಗೆ ನೋವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹಬೀಬ್ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ:  ನೀರಿಲ್ಲದಿದ್ದರೆ ಉಗುಳು ಸಾಕು ಎಂದು ಮಹಿಳೆಯ ತಲೆಕೂದಲು ಮೇಲೆ ಉಗುಳಿದ ಖ್ಯಾತ ಹೇರ್ ಸ್ಟೈಲಿಸ್ಟ್​​; ವಿಡಿಯೊ ವೈರಲ್