Sidhu Moosewala ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕಾಂಗ್ರೆಸ್‌ಗೆ ಸೇರ್ಪಡೆ

ಎಐಸಿಸಿ ಕಾರ್ಯದರ್ಶಿ ಹರೀಶ್ ಚೌಧರಿ ಮೂಸೆವಾಲಾರನ್ನು ಸ್ವಾಗತಿಸಿ, ಅವರು ಪಂಜಾಬ್ ಮಾತ್ರವಲ್ಲದೆ ವಿಶ್ವದಲ್ಲೇ ಧ್ವನಿ ಎತ್ತಿದ್ದಾರೆ. ರೈತರು ಆಂದೋಲನ ನಡೆಸುತ್ತಿದ್ದಾಗ ಮೂಸೆವಾಲಾ ಅವರದ್ದು ಪ್ರಬಲ ದನಿಯಾಗಿತ್ತು ಎಂದರು.

Sidhu Moosewala ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕಾಂಗ್ರೆಸ್‌ಗೆ ಸೇರ್ಪಡೆ
ನವಜೋತ್ ಸಿಂಗ್ ಸಿಧು ಜತೆ ಸಿಧು ಮೂಸೆವಾಲಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 03, 2021 | 5:57 PM

ಚಂಡೀಗಢ: ಜನಪ್ರಿಯ ಪಂಜಾಬಿ ಗಾಯಕ (Punjabi singer) ಮತ್ತು ರಾಪರ್ (rapper) ಸಿಧು ಮೂಸೆವಾಲಾ (Sidhu Moosewala) ಶುಕ್ರವಾರ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ(Charanjit Singh Channi) ಮತ್ತು ಪಿಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು(Navjot Singh Sidhu) ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರಿದ ನಂತರ ಮಾತನಾಡಿದ ಮೂಸೆವಾಲಾ ನಾಲ್ಕು ವರ್ಷಗಳ ಹಿಂದೆ ನಾನು ಸಂಗೀತ ವೃತ್ತಿಜೀವನವನ್ನು ಪ್ರಾರಂಭಿಸಿದ್ದೆ. ಆದರೆ ಈಗ ತಮ್ಮ ಜೀವನದಲ್ಲಿ ಹೊಸ ಹೆಜ್ಜೆ ಇಡಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.“ನಾನು ಈಗಲೂ ನನ್ನ ಹಳ್ಳಿಯ ಅದೇ ಮನೆಯಲ್ಲಿ ಇದ್ದೇನೆ. ನನ್ನ ತಂದೆ ಮಾಜಿ ಸೈನಿಕ ಮತ್ತು ನನ್ನ ತಾಯಿ ಸರಪಂಚ್. ನನ್ನ ಪ್ರದೇಶದ ನಿವಾಸಿಗಳಾದ ಬಟಿಂಡಾ ಮತ್ತು ಮಾನ್ಸಾ ನನ್ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ನನ್ನಿಂದ ನಿರೀಕ್ಷೆಗಳನ್ನು ಹೊಂದಿದ್ದಾರೆ ”ಎಂದು ಹೇಳಿದರು. ನಾನು ಸ್ಥಾನಮಾನಕ್ಕಾಗಿ ಅಥವಾ ಪ್ರಶಂಸೆಗಾಗಿ ರಾಜಕೀಯಕ್ಕೆ ಬರುತ್ತಿಲ್ಲ. ವ್ಯವಸ್ಥೆಯನ್ನು ಪರಿವರ್ತಿಸಲು ಅದರ ಭಾಗವಾಗಲು ಬಯಸುತ್ತೇನೆ. ಜನರ ದನಿ ಎತ್ತಲು ಕಾಂಗ್ರೆಸ್ ಸೇರುತ್ತಿದ್ದೇನೆ. ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕುಟುಂಬದಿಂದ ಬಂದ ನಾಯಕರು ಇರುವುದರಿಂದ ಕಾಂಗ್ರೆಸ್‌ ಸೇರುತ್ತಿದ್ದೇನೆ. ಉದಾಹರಣೆಗೆ, ಕ್ಯಾಬಿನೆಟ್ ಸಚಿವ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಸಾಮಾನ್ಯ ಕುಟುಂಬದಿಂದ ಬಂದಿದ್ದಾರೆ ಎಂದು ಅವರು ಹೇಳಿದರು. ಮೂಸೆವಾಲಾ ಅವರು ಯುವಕರ ಭಾವನೆಗಳನ್ನು ಅರಿತು ಅವರಿಗೆ ನಿರ್ದೇಶನ ನೀಡುವ ವ್ಯಕ್ತಿ ಎಂದು ಬಣ್ಣಿಸಿದ ಚನ್ನಿ, ಕಾಂಗ್ರೆಸ್‌ಗೆ ಅವರ ಸೇರ್ಪಡೆ ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ “ದೊಡ್ಡ ದಿನ” ಎಂದು ಗುರುತಿಸುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮೂಸೆವಾಲಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಸಿಧು ನಾವು ಸಿಧು ಮೂಸೆವಾಲಾ ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಅವರು ನಮಗಾಗಿ ಚುನಾವಣೆಯಲ್ಲಿ ಹೋರಾಡುತ್ತಾರೆ ಎಂದಿದ್ದಾರೆ. ಎಐಸಿಸಿ ಕಾರ್ಯದರ್ಶಿ ಹರೀಶ್ ಚೌಧರಿ ಮೂಸೆವಾಲಾರನ್ನು ಸ್ವಾಗತಿಸಿ, ಅವರು ಪಂಜಾಬ್ ಮಾತ್ರವಲ್ಲದೆ ವಿಶ್ವದಲ್ಲೇ ಧ್ವನಿ ಎತ್ತಿದ್ದಾರೆ. ರೈತರು ಆಂದೋಲನ ನಡೆಸುತ್ತಿದ್ದಾಗ ಮೂಸೆವಾಲಾ ಅವರದ್ದು ಪ್ರಬಲ ದನಿಯಾಗಿತ್ತು ಎಂದರು.

ಮೂಸೆವಾಲಾ ಅವರನ್ನು ಕಾಂಗ್ರೆಸ್‌ಗೆ ಸೇರಿಸುವಲ್ಲಿ ರಾಜಾ ವಾರಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಇಂದು ಬೆಳಗ್ಗೆ ವಾರಿಂಗ್ ನಿವಾಸದಲ್ಲಿ ಚನ್ನಿ ಮತ್ತು ಸಿಧು ಅವರೊಂದಿಗೆ ಸಭೆ ನಡೆಸಿದರು.

ಮೂಸೆವಾಲಾ ಅವರ ಹಾಡೊಂದರಲ್ಲಿ ಹಿಂಸಾಚಾರ ಮತ್ತು ಬಂದೂಕು ಸಂಸ್ಕೃತಿಯನ್ನು ಉತ್ತೇಜಿಸಿದ ಆರೋಪದ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಕಳೆದ ವರ್ಷ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅದಕ್ಕೂ ಮೊದಲು ಕೊವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಫೈರಿಂಗ್ ರೇಂಜ್‌ನಲ್ಲಿ ಎಕೆ 47 ರೈಫಲ್‌ನಿಂದ ಗುಂಡು ಹಾರಿಸಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಯಿತು.

ಕಾಂಗ್ರೆಸ್ ಸೇರುವ ಮುನ್ನ ಮೂಸ್ ವಾಲಾ ಅವರು ಎರಡು ವಾರಗಳ ಹಿಂದೆ ತಮ್ಮ ಇತ್ತೀಚಿನ ಹಾಡು ‘ಸ್ಯಾಟಿಸ್ಫೈ(Satisfy) ’ ಬಿಡುಗಡೆ ಮಾಡಿದರು. ಅದರಲ್ಲಿ ದೇವರು ತನಗೆ ಏನು ಕೊಟ್ಟರೂ ಅದರಲ್ಲಿ ತೃಪ್ತಿ ಇದೆ ಎಂದು ಹಾಡಿದ್ದಾರೆ. ಮೂಸೆವಾಲಾ ಅವರ ತಂದೆ ನಿವೃತ್ತ ಸರ್ಕಾರಿ ನೌಕರ ಮತ್ತು ರೈತ.

ಇದನ್ನೂ ಓದಿ: Omicron: ಲಸಿಕೆ ಪಡೆಯದವರಿಗೆ ಸರ್ಕಾರಿ ಸೇವೆ ಕಟ್: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಕಠಿಣ ಎಚ್ಚರಿಕೆ