ಕಳೆದ ವರ್ಷ ಬಿಜೆಪಿ ಜತೆ ಕೈಜೋಡಿಸಲು ಶರದ್ ಪವಾರ್ ಸಿದ್ಧರಾಗಿದ್ದರು: ಪ್ರಫುಲ್ ಪಟೇಲ್

ಕಳೆದ ವರ್ಷ ಬಿಜೆಪಿ ಜತೆ ಕೈ ಜೋಡಿಸಲು ಶರದ್ ಪವಾರ್(Sharad Pawar) ಸಿದ್ಧರಾಗಿದ್ದರು ಎಂದು ಎನ್​ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ. ಅಜಿತ್ ಪವಾರ್ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಶರದ್ ಪವಾರ್ ಬಹುತೇಕ ಬಿಜೆಪಿಗೆ ಹೋಗಲು ಸಿದ್ಧರಾಗಿದ್ದರು ಎಂದಿದ್ದಾರೆ. ಜುಲೈ 2, 2023 ರಂದು ಅಜಿತ್ ಪವಾರ್ ಮತ್ತು ನಮ್ಮ ಸಚಿವರು ಮಹಾರಾಷ್ಟ್ರ ಸರ್ಕಾರದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಕಳೆದ ವರ್ಷ ಬಿಜೆಪಿ ಜತೆ ಕೈಜೋಡಿಸಲು ಶರದ್ ಪವಾರ್ ಸಿದ್ಧರಾಗಿದ್ದರು: ಪ್ರಫುಲ್ ಪಟೇಲ್
ಶರದ್ ಪವಾರ್

Updated on: Apr 11, 2024 | 9:52 AM

ಕಳೆದ ವರ್ಷ ಬಿಜೆಪಿ ಜತೆ ಕೈ ಜೋಡಿಸಲು ಶರದ್ ಪವಾರ್(Sharad Pawar) ಸಿದ್ಧರಾಗಿದ್ದರು ಎಂದು ಎನ್​ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ. ಅಜಿತ್ ಪವಾರ್ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಶರದ್ ಪವಾರ್ ಬಹುತೇಕ ಬಿಜೆಪಿಗೆ ಹೋಗಲು ಸಿದ್ಧರಾಗಿದ್ದರು ಎಂದಿದ್ದಾರೆ. ಜುಲೈ 2, 2023 ರಂದು ಅಜಿತ್ ಪವಾರ್ ಮತ್ತು ನಮ್ಮ ಸಚಿವರು ಮಹಾರಾಷ್ಟ್ರ ಸರ್ಕಾರದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಜುಲೈ 15 ಮತ್ತು 16 ರಂದು ನಾವು ಮುಂಬೈನಲ್ಲಿ ಶರದ್ ಪವಾರ್ ಅವರನ್ನು ಭೇಟಿಯಾದೆವು. ನಾವು ನಿಮ್ಮ ನಾಯಕತ್ವದಲ್ಲಿ ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳಿದ್ದರು.

ನಂತರ, ಅಜಿತ್ ಪವಾರ್ ಮತ್ತು ಶರದ್ ಪವಾರ್ ಪುಣೆಯಲ್ಲಿ ಭೇಟಿಯಾದರು. ಬಳಿಕ ಎನ್‌ಸಿಪಿಯಲ್ಲಿನ ಒಡಕು ಅಜಿತ್ ಪವಾರ್ ಮತ್ತು ಶರದ್ ಪವಾರ್ ಬಣಗಳ ನಡುವೆ ಪಕ್ಷದ ಚುನಾವಣಾ ಚಿಹ್ನೆಯ ಹಕ್ಕಿನ ಬಗ್ಗೆ ಜಗಳಕ್ಕೆ ಕಾರಣವಾಯಿತು.

ಮತ್ತಷ್ಟು ಓದಿ:Sharad Pawar: ಶರದ್ ಪವಾರ್ ಬಣಕ್ಕೆ ಹೊಸ ಹೆಸರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಶರದ್ಚಂದ್ರ ಪವಾರ್

ಅಂತಿಮವಾಗಿ, ಚುನಾವಣಾ ಆಯೋಗವು ಫೆಬ್ರವರಿಯಲ್ಲಿ ಅಜಿತ್ ಪವಾರ್ ಅವರ ಬಣ ನಿಜವಾದ ಎನ್‌ಸಿಪಿ ಎಂದು ತೀರ್ಪು ನೀಡಿತು ಮತ್ತು ಶರದ್ ಪವಾರ್ ಅವರ ಬಣಕ್ಕೆ ಎನ್‌ಸಿಪಿ-ಶರದ್ಚಂದ್ರ ಪವಾರ್ ಎಂಬ ಹೊಸ ಹೆಸರನ್ನು ನೀಡಿತು.

ಎನ್‌ಸಿಪಿಯ ಬಹುಪಾಲು ನಾಯಕರು 2022ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಸೇರಲು ಬಯಸಿದ್ದರು ಎಂದು ಪ್ರಫುಲ್ ಪಟೇಲ್ ಹೇಳಿದರು.

ಜೂನ್ 2022 ರಲ್ಲಿ, ಏಕನಾಥ್ ಶಿಂಧೆ ಶಿವಸೇನೆ ವಿಭಜನೆಯ ನೇತೃತ್ವ ವಹಿಸಿ ಬಿಜೆಪಿ ಸೇರಿದಾಗ, ಎನ್‌ಸಿಪಿಯ 51 ಶಾಸಕರು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ನೇತೃತ್ವದ ಒಕ್ಕೂಟವನ್ನು ಸೇರಲು ಬಯಸಿದ್ದರು. ಎನ್‌ಸಿಪಿ ನಾಯಕರು ಈ ಬಗ್ಗೆ ಶರದ್ ಪವಾರ್‌ಗೆ ಪತ್ರ ಬರೆದಿದ್ದರು.

ನಾನು ಪಕ್ಷದಲ್ಲಿ ಬಹಳ ಸಮಯದಿಂದ ಇದ್ದೇನೆ ಮತ್ತು ಶರದ್ ಪವಾರ್ ಅವರನ್ನು ನೋಡಿದ್ದೇನೆ. ನಾನು ಅವರೊಂದಿಗೆ ತುಂಬಾ ನಿಕಟ ಸಂಬಂಧ ಹೊಂದಿದ್ದೇನೆ. ಆದರೆ ಅವರು ಯಾವಾಗಲೂ ಕೊನೆಯ ಕ್ಷಣದಲ್ಲಿ ಹಿಂಜರಿಯುತ್ತಾರೆ. ಅವರು ಹಿಂಜರಿಯದಿದ್ದರೆ 1996ರಲ್ಲಿ ಅವರು ಪ್ರಧಾನಿಯಾಗಬಹುದಿತ್ತು ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us