ಪ್ರಣಬ್ ಮುಖರ್ಜಿ ಜನ್ಮದಿನ: ಮಾಜಿ ರಾಷ್ಟ್ರಪತಿಯನ್ನು ಸ್ಮರಿಸಿದ ಪ್ರಧಾನಿ ಮೋದಿ

Pranab Mukherjee Birth anniversary: ಇಂದು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜನ್ಮದಿನ. ಇಂದು ಅವರನ್ನು ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಅನೇಕ ಗಣ್ಯರು ಎಕ್ಸ್​​ನಲ್ಲಿ ಸ್ಮರಿಸಿದ್ದಾರೆ.

ಪ್ರಣಬ್ ಮುಖರ್ಜಿ ಜನ್ಮದಿನ: ಮಾಜಿ ರಾಷ್ಟ್ರಪತಿಯನ್ನು ಸ್ಮರಿಸಿದ ಪ್ರಧಾನಿ ಮೋದಿ
Follow us
ಅಕ್ಷಯ್​ ಪಲ್ಲಮಜಲು​​
|

Updated on:Dec 11, 2023 | 11:33 AM

ದೆಹಲಿ, ಡಿ.11: ಇಂದು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜನ್ಮದಿನ (Pranab Mukherjee Birth anniversary) . ಈ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್​​ ಮೂಲಕ ಅವರ ಜನ್ಮದಿನವನ್ನು ಸ್ಮರಿಸಿದ್ದಾರೆ. “ಇಂದು ಶ್ರೀ ಪ್ರಣಬ್ ಮುಖರ್ಜಿ ಅವರ ಜನ್ಮ ವಾರ್ಷಿಕೋತ್ಸವದಂದು, ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ, ಅವರ ರಾಜನೀತಿ ಮತ್ತು ಬೌದ್ಧಿಕ ವಿಚಾರಗಳು ನಮ್ಮ ರಾಷ್ಟ್ರದ ಹಾದಿಯನ್ನು ತುಂಬಾ ಅದ್ಭುತವಾಗಿ ರೂಪಿಸಿದೆ. ಅವರ ಒಳನೋಟಗಳು ಮತ್ತು ನಾಯಕತ್ವವು ಅಮೂಲ್ಯವಾದುದು, ಹಾಗೂ ನಮ್ಮಿಬ್ಬರ ವೈಯಕ್ತಿಕವಾದ ಸ್ನೇಹ ಯಾವಾಗಲೂ ಸಮೃದ್ಧವಾಗಿತ್ತು. ಅವರ ಸಮರ್ಪಣೆ ಮತ್ತು ಬುದ್ಧಿವಂತಿಕೆಯು ನಮಗೆ ಮಾರ್ಗದರ್ಶನ ನೀಡುತ್ತದೆ” ಎಂದು ಎಕ್ಸ್​​ನಲ್ಲಿ ಟ್ವೀಟ್​ ಮಾಡಿದ್ದಾರೆ.

ಪ್ರಣಬ್ ಮುಖರ್ಜಿ ಅವರು ಡಿಸೆಂಬರ್ 11, 1935 ರಂದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಮಿರಾಟಿ ಗ್ರಾಮದಲ್ಲಿ ಜನಿಸಿದರು. ಇವರು ಭಾರತದ 13ನೇ ರಾಷ್ಟ್ರಪತಿಯಾಗಿ ದೇಶವನ್ನು ನಿಭಾಯಿಸಿದ್ದರು. ಇದು ಮಾತ್ರವಲ್ಲದೆ ವಿದೇಶಾಂಗ ಸಚಿವ, ರಕ್ಷಣಾ ಸಚಿವ ಮತ್ತು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು.

ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿಯಾಗಿ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದರು.  ಅಜಾತಶತ್ರುವಾಗಿ ಎಲ್ಲರನ್ನೂ ಒಪ್ಪಿಕೊಂಡು ಮುನ್ನಡೆಯುತ್ತಿದ್ದರು, ಸ್ವಪಕ್ಷದವರು ಮಾಡಿದ ತಪ್ಪುಗಳು ಮುಲಾಜು ಇಲ್ಲದೆ ಹೇಳುತ್ತಿದ್ದರು. 2020ರಲ್ಲಿ ಅವರು ನಿಧನ ಹೊಂದಿದರು.

ಪ್ರಣಬ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವ ಸಲ್ಲಿಸಿದರು

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮುಖರ್ಜಿ ಅವರನ್ನು ಸ್ಮರಿಸಿದ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್​​​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಎಕ್ಸ್​​ ಮೂಲಕ ಪ್ರಣಬ್ ಮುಖರ್ಜಿ ಅವರ ಜನ್ಮದಿನವನ್ನು ಸ್ಮರಿಸಿದ್ದಾರೆ. “ಶಾಂತಿಯೇ ನಮ್ಮ ಸಿದ್ಧಾಂತವಾಗಿರಬೇಕು, ಪ್ರಗತಿ ನಮ್ಮ ದಿಗಂತವಾಗಿರಬೇಕು ಎಂದು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸ್ಮರಿಸುತ್ತಿದ್ದರು. ಅವರು ರಾಷ್ಟ್ರೀಯ ಜೀವನದ ಅವಿಭಾಜ್ಯ ಅಂಗವಾಗಿದ್ದರು, ಮತ್ತು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷ, ಮತ್ತು ಅವರ ಬುದ್ಧಿವಂತಿಕೆ, ಅನುಭವ ಮತ್ತು ಅಸಂಖ್ಯಾತ ವಿಷಯಗಳ ತಿಳುವಳಿಕೆಗೆ ನಮಗೆ ಮಾರ್ಗದರ್ಶನ” ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಮನ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೂಡ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜನ್ಮದಿನವನ್ನು ಸ್ಮರಿಸಿಕೊಂಡಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜನ್ಮದಿನದಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಎಕ್ಸ್​​​​ ಮೂಲಕ ಸ್ಮರಿಸಿದ್ದಾರೆ.

ಇದನ್ನೂ ಓದಿ: The Presidential Years ಪ್ರಣಬ್ ಮುಖರ್ಜಿ ಆತ್ಮಚರಿತ್ರೆ.. ಕಾಂಗ್ರೆಸ್ ಮತ್ತು ಮೋದಿ ಇಬ್ಬರಿಗೂ ಬಿಸಿ ತುಪ್ಪ

ಪ್ರಣಬ್ ಮುಖರ್ಜಿ ಅವರನ್ನು ಸ್ಮರಿಸಿದ ಅಮಿತ್​​ ಶಾ

ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ಎಕ್ಸ್​​ ಮೂಲಕ ಪ್ರಣಬ್ ಮುಖರ್ಜಿ ಅವರ ಜನ್ಮದಿನವನ್ನು ಸ್ಮರಿಸಿದ್ದಾರೆ. “ನಮ್ಮ ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇವೆ. ಪ್ರಣಬ್ ದಾ ಪಕ್ಷಾತೀತವಾಗಿ ಗೌರವವನ್ನು ಗಳಿಸಿದರು. ಅವರು ತಮ್ಮ ರಾಜಕೀಯ ಕುಶಾಗ್ರಮತಿ, ರಾಜತಾಂತ್ರಿಕ ಕೌಶಲ್ಯ ಮತ್ತು ಹಣಕಾಸು ಮತ್ತು ಆಡಳಿತದಲ್ಲಿ ಅಪಾರ ಅನುಭವದೊಂದಿಗೆ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:30 am, Mon, 11 December 23