ಸುಭಾಷ್​ ಚಂದ್ರ ಬೋಸ್​ ಭಾವಚಿತ್ರ ವಿವಾದ: ರಾಜ್​ದೀಪ್​ ಸರ್​ದೇಸಾಯಿ ನಡೆಗೆ ರಾಷ್ಟ್ರಪತಿ ಕಚೇರಿ ಖಂಡನೆ

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಭಾಷ್​ ಚಂದ್ರ ಬೋಸ್​ ಭಾವಚಿತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತ್ರಕರ್ತರ ನಡೆಯನ್ನು ಪ್ರಶ್ನಿಸಿ ರಾಷ್ಟ್ರಪತಿ ಭವನದ ಪತ್ರಿಕಾ ಕಾರ್ಯದರ್ಶಿ ಅಜಯ್​ ಕುಮಾರ್​, ಇಂಡಿಯಾ ಟುಡೆ ಸಮೂಹದ ಪ್ರಧಾನ ಸಂಪಾದಕ ಅರುಣ್​ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ಸುಭಾಷ್​ ಚಂದ್ರ ಬೋಸ್​ ಭಾವಚಿತ್ರ ವಿವಾದ: ರಾಜ್​ದೀಪ್​ ಸರ್​ದೇಸಾಯಿ ನಡೆಗೆ ರಾಷ್ಟ್ರಪತಿ ಕಚೇರಿ ಖಂಡನೆ
ರಾಜ್​ದೀಪ್​ ಸರ್​ದೇಸಾಯಿ
Follow us
ರಾಜೇಶ್ ದುಗ್ಗುಮನೆ
|

Updated on:Jan 30, 2021 | 10:07 PM

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇತ್ತೀಚೆಗೆ ಅನಾವರಣಗೊಂಡಿದ್ದ ಸುಭಾಷ್​ ಚಂದ್ರ ಬೋಸ್​ ಅವರ ಭಾವಚಿತ್ರ ವಿವಾದಕ್ಕೆ ಸಂಬಂಧಿಸಿ ಮತ್ತೊಂದು ಬೆಳವಣಿಗೆ ನಡೆದಿದೆ. ರಾಷ್ಟ್ರಪತಿ ಪತ್ರಿಕಾ ಕಾರ್ಯದರ್ಶಿ ಅಜಯ್​ ಕುಮಾರ್​ ಸಿಂಗ್ ಈ ಸಂಬಂಧ ​ಇಂಡಿಯಾ ಟುಡೆ ಸಮೂಹದ ಪ್ರಧಾನ ಸಂಪಾದಕ ಅರುಣ್​ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜನವರಿ 25 ರಂದು ನೇತಾಜಿ ಸುಭಾಸ್ ಚಂದ್ರ ಬೋಸ್ ಬದಲಿಗೆ ಬಂಗಾಳಿ ನಟ ಪ್ರೊಸೆನ್​ಜಿತ್​​ ಚಟರ್ಜಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳು ಆಕ್ಷೇಪಿಸಿದ್ದರು. ತೃಣಮೂಲ ಕಾಂಗ್ರೆಸ್ ನಾಯಕರು, ಪ್ರಮುಖ ಪತ್ರಕರ್ತರಾದ ರಾಜ್​ದೀಪ್​ ಸರ್​​ದೇಸಾಯಿ ಅವರ ಹೆಸರು ಈ ವಿಚಾರದಲ್ಲಿ ಕೇಳಿ ಬಂದಿತ್ತು. ಆದರೆ, ಪತ್ರಕರ್ತೆ ನಿಸ್ತುಲಾ ಹೆಬ್ಬಾರ್​, ಇದು ಮೂಲ ಫೋಟೋವನ್ನೇ ಬಳಕೆ ಮಾಡಿಕೊಂಡು ಚಿತ್ರಿಸಿದ ಕಲಾಕೃತಿ ಎನ್ನುವುದನ್ನು ನಿರೂಪಿಸಿದ್ದರು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಭಾಷ್​ ಚಂದ್ರ ಬೋಸ್​ ಭಾವಚಿತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತ್ರಕರ್ತರ ನಡೆಯನ್ನು ಪ್ರಶ್ನಿಸಿ ರಾಷ್ಟ್ರಪತಿ ಭವನದ ಪತ್ರಿಕಾ ಕಾರ್ಯದರ್ಶಿ ಅಜಯ್​ ಕುಮಾರ್​, ಇಂಡಿಯಾ ಟುಡೆ ಸಮೂಹದ ಪ್ರಧಾನ ಸಂಪಾದಕ ಅರುಣ್​ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ಇಂಡಿಯಾ ಟುಡೆ ಪತ್ರಕರ್ತರು ಸತ್ಯ-ಪರಿಶೀಲನೆ ನಡೆಸಲು ಮುಂದಾಗಿಲ್ಲ ಮತ್ತು ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪಗಳನ್ನು ಎಸೆಯುವವರ ಜತೆ ಸೇರಿಕೊಂಡರು.ಇಂತಹ ಬೇಜವಾಬ್ದಾರಿಯುತ ವರ್ತನೆಯು ರಾಷ್ಟ್ರಪತಿ ಭವನದ ಘನತೆಗೆ ಧಕ್ಕೆಯುಂಟು ಮಾಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮೇಲೆ ತಿಳಿಸಿದ ಪತ್ರಕರ್ತರು ತಮ್ಮ ಟ್ವೀಟ್ ಮಾಡಿ ನಂತರ ಅದನ್ನು ಡಿಲೀಟ್​ ಮಾಡಿದ್ದಾರೆ. ತಾವು ಮಾಡಿದ ಬ್ಲಂಡರ್​ಗೆ ಒಂದೇ ಒಂದು ಕ್ಷಮೆ ಕೂಡ ಯಾಚಿಸಿಲ್ಲ. ಈ ಘಟನೆಯಿಂದ ರಾಷ್ಟ್ರಪತಿ ಭವನಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ದೆಹಲಿ ಗಲಾಟೆ ಬಗ್ಗೆ ಆತುರದ ಟ್ವೀಟ್​ ಮಾಡಿದ ಪತ್ರಕರ್ತ ರಾಜ್​ದೀಪ್ ಸರ್ದೇಸಾಯಿಗೆ 2 ವಾರ ಟಿವಿ ಪರದೆಯಿಂದ ದೂರ ಉಳಿಯುವಂತೆ ನಿರ್ಬಂಧ

Published On - 10:05 pm, Sat, 30 January 21

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ