Presidential Election Results 2022 Live: ಭಾರತದ 15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು

TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 21, 2022 | 8:24 PM

Presidential Polls 2022 Live Counting Updates in Kannada: ದೇಶದ ನೂತನ ರಾಷ್ಟ್ರಪತಿ ಯಾರಾಗುತ್ತಾರೆ ಎಂಬ ಕುತೂಹಲದಿಂದ ಜನರು ಚುನಾವಣಾ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಇಂದು 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ ಫಲಿತಾಂಶ ಹೊರಬಿಳಲಿದೆ.

Presidential Election Results 2022 Live: ಭಾರತದ 15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಗಳಾದ ದ್ರೌಪದಿ ಮುರ್ಮು ಮತ್ತು ಯಶವಂತ್ ಸಿನ್ಹಾ

Presidential Election Results 2022 Live | ದೇಶದ ನೂತನ ರಾಷ್ಟ್ರಪತಿ ಯಾರಾಗುತ್ತಾರೆ ಎಂಬ ಕುತೂಹಲದಿಂದ ಜನರು ಚುನಾವಣಾ ಫಲಿತಾಂಶವನ್ನು(Presidential Election) ಎದುರು ನೋಡುತ್ತಿದ್ದು, ಇಂದು (ಗುರುವಾರ) 11 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ದೇಶದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಜುಲೈ 18 ಸೋಮವಾರದಂದು ಮತದಾನ ನಡೆದಿದ್ದು, ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದರು. ಆಡಳಿತಾರೂಢ ಎನ್‌ಡಿಎಯ ದ್ರೌಪದಿ ಮುರ್ಮು(Droupadi Murmu) ಮತ್ತು ಪ್ರತಿಪಕ್ಷದ ಯಶವಂತ ಸಿನ್ಹಾ(Yashwant Sinha) ಚುನಾವಣಾ ಕಣದಲ್ಲಿದ್ದಾರೆ. ಬುಡಕಟ್ಟು ಜನಾಂಗದ ನಾಯಕಿ ಹಾಗೂ ಜಾರ್ಖಂಡ್​​​ನ ಮಾಜಿ ರಾಜ್ಯಪಾಲರಾಗಿದ್ದವರು ದ್ರೌಪದಿ ಮುರ್ಮು.

ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

64ರ ಹರೆಯದ ಮುರ್ಮು ಆಯ್ಕೆಯಾದರೆ ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಎರಡನೇ ಮಹಿಳೆ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಮಾಜಿ ಬಿಜೆಪಿ ನಾಯಕರಾಗಿರುವ ಸಿನ್ಹಾ, 1984ರಲ್ಲಿ ಐಎಎಸ್​ನಿಂದ ರಾಜೀನಾಮೆ ನೀಡಿ ಜನತಾ ದಳ ಸೇರಿದ್ದರು. 1988ರಲ್ಲಿ ಅವರು  ಸಂಸದರಾಗಿದ್ದ, ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಮತ್ತು ವಾಜಪೇಯಿ ಸಚಿವ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದರು. ಕೋವಿಂದ್ ಅವರ ಅಧಿಕಾರವಧಿ ಜುಲೈ 24ರಂದು ಮುಗಿಯಲಿದ್ದು ನೂತನ ರಾಷ್ಟ್ರಪತಿ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Presidential Election Results 2022 ಯಾರಾಗುತ್ತಾರೆ ಮುಂದಿನ ರಾಷ್ಟ್ರಪತಿ? ಚುನಾವಣಾ ಫಲಿತಾಂಶ ಇಂದು

ಎಲ್ಲಾ ರಾಜ್ಯಗಳ ಮತಪೆಟ್ಟಿಗೆಗಳು ಸಂಸತ್ ಭವನವನ್ನು ತಲುಪಿದ್ದು, ಚುನಾವಣಾಧಿಕಾರಿಗಳು ಸಂಸತ್ತಿನ ಸ್ಟ್ರಾಂಗ್‌ರೂಮ್ ಕೊಠಡಿ ಸಂಖ್ಯೆ 63 ರಲ್ಲಿ ಎಣಿಕೆಗೆ ಸಿದ್ಧರಾಗಿದ್ದಾರೆ. ಚುನಾವಣೆಯ ಮುಖ್ಯ ಚುನಾವಣಾಧಿಕಾರಿಯಾಗಿರುವ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ ಸಿ ಮೂಡಿ ಅವರು ಗುರುವಾರ ಮತ ಎಣಿಕೆಯನ್ನು ನೋಡಿಕೊಳ್ಳಲಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

LIVE NEWS & UPDATES

The liveblog has ended.
  • 21 Jul 2022 07:52 PM (IST)

    ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ

    ದೇಶದ 15ನೇ ರಾಷ್ಟ್ರಪತಿ ಹುದ್ದೆಗಾಗಿ ನಡೆದ ಚುನಾವಣೆೆಯಲ್ಲಿ ದ್ರೌಪದಿ ಮುರ್ಮು ಗೆಲುವು ಸಾಧಿಸಿದ್ದಾರೆ. ಮೂರು ಸುತ್ತಿನ ಮತ ಎಣಿಕೆಯಲ್ಲೂ ದ್ರೌಪದಿ ಮುರ್ಮು ಮುನ್ನಡೆ ಸಾಧಿಸಿದ್ದರು.

  • 21 Jul 2022 07:34 PM (IST)

    ಬಾಗಲಕೋಟೆಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

    ಬಾಗಲಕೋಟೆ ಬಿಜೆಪಿ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗಿದೆ. ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಪ್ರಮುಖರು ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.

  • 21 Jul 2022 07:33 PM (IST)

    ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ ಬಹುತೇಕ ಖಚಿತವಾಗುತ್ತಿದ್ದಂತೆ ಯಾದಗಿರಿ ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ ಶುರುವಾಗಿದೆ. ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಕಾರ್ಯಕರ್ತರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲರೆಡ್ಡಿ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆದಿದೆ. ಮಹಿಳಾ ರಾಷ್ಟ್ರಪತಿಗೆ ಜೈ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

  • 21 Jul 2022 07:31 PM (IST)

    ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಪರ ಅಡ್ಡ ಮತದಾನ

    ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ವಿರೋಧ ಪಕ್ಷದವರಿಂದ ಅಡ್ಡ ಮತದಾನ ನಡೆದಿದೆ. ಬಿಜೆಪಿ ಲೆಕ್ಕಾಚಾರದ ಪ್ರಕಾರ ದ್ರೌಪದಿಗೆ 523 ಮತ ಬರಬೇಕಿತ್ತು. ಆದರೆ ದ್ರೌಪದಿ ಮುರ್ಮುಗೆ 540 ಸಂಸದರ ಮತಗಳು ಸಿಕ್ಕಿವೆ. ಹೀಗಾಗಿ ವಿಪಕ್ಷದ 17 ಸಂಸದರಿಂದ ಕ್ರಾಸ್ ವೋಟಿಂಗ್ ಆಗಿರುವುದು ಖಚಿತ ಎಂದು ಮೂಲಗಳು ವರದಿ ಮಾಡಿವೆ

  • 21 Jul 2022 05:37 PM (IST)

    ಎರಡನೇ ಸುತ್ತಿನ ಮತ ಎಣಿಕೆ ಪೂರ್ಣ; ದ್ರೌಪದಿ ಮುರ್ಮು ಮುನ್ನಡೆ

    ಎರಡನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು ಒಟ್ಟು 1,138 ಮತಗಳಲ್ಲಿ ದ್ರೌಪದಿ ಮುರ್ಮ 809 ಮತಗಳನ್ನು ಪಡೆದಿದ್ದಾರೆ. ಅದೇ ವೇಳೆ  ಯಶವಂತ ಸಿನ್ಹಾ ಅವರು 329  ಮತಗಳನ್ನು ಗಳಿಸಿದ್ದಾರೆ.  ಎರಡೂ ಸುತ್ತಿನ  ಮತ ಎಣಿಕೆ ನಂತರ  ದ್ರೌಪದಿ ಮುರ್ಮು ಅವರು 1886 ಮತಗಳಲ್ಲಿ  1,349 ಮತಗಳನ್ನು ಪಡೆದಿದ್ದು ಸಿನ್ಹಾ ಅವರು 537 ಮತಗಳನ್ನು ಪಡೆದಿದ್ದಾರೆ.

  • 21 Jul 2022 04:33 PM (IST)

    ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ರಾತ್ರಿ 8 ಗಂಟೆಗೆ ಪ್ರಕಟ

    ರಾಷ್ಟ್ರಪತಿ ಚುನಾವಣೆಯ ಮತಎಣಿಕೆ  ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು  ರಾತ್ರಿ 8ಗಂಟೆಯ ಹೊತ್ತಿಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ರಾಜ್ಯಸಭಾ ಸೆಕ್ರಟರಿಯೇಟ್ ಹೇಳಿದೆ.

  • 21 Jul 2022 03:53 PM (IST)

    ಮೊದಲ ಸುತ್ತಿನಲ್ಲಿ ದ್ರೌಪದಿ ಮುರ್ಮುಗೆ ಸಿಕ್ಕಿದ ಮತ ಶೇ 72.19

    ರಾಷ್ಟ್ರಪತಿ ಚುನಾವಣೆಯಲ್ಲಿ  ಸಂಸದರ ಮತ ಎಣಿಕೆ ಮಾಡಿದಾಗ  ದ್ರೌಪದಿ ಮುರ್ಮು ಶೇ 72.19 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

  • 21 Jul 2022 03:48 PM (IST)

    ದ್ರೌಪದಿ ಮುರ್ಮು ಸ್ಥಾಪಿಸಿದ ಶಾಲೆಯಲ್ಲಿಯೂ ಸಂಭ್ರಮಾಚರಣೆ

    ದ್ರೌಪದಿ ಮುರ್ಮು ಅವರು ತಮ್ಮನ್ನು ಅಗಲಿದ ಪತಿ ಮತ್ತು ಇಬ್ಬರು ಪುತ್ರರ ನೆನಪಿಗಾಗಿ  ಪಹಾದ್​​ಪುರ್ ಎಂಬಲ್ಲಿ ಸ್ಥಾಪಿಸಿದ  ಎಸ್ಎಲ್​ಎಸ್ ( ಶ್ಯಾಮ್, ಲಕ್ಷ್ಮಣ್  ಮತ್ತು ಸಿಪುನ್) ಸ್ಮಾರಕ ವಸತಿ ಶಾಲೆಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ.

  • 21 Jul 2022 02:47 PM (IST)

    ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಮುರ್ಮು ಮುನ್ನಡೆ

    ರಾಷ್ಟ್ರಪತಿ ಚುನಾವಣೆಯ  ಮೊದಲ ಸುತ್ತಿನ ಮತ ಎಣಿಕೆ ಫಲಿತಾಂಶ ಪ್ರಕಟವಾಗಿದ್ದು ಎನ್​​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮ ಮುನ್ನಡೆ ಸಾಧಿಸಿದ್ದಾರೆ. ಮುರ್ಮ ಅವರಿಗೆ 540 ಮತಗಳು  ಲಭಿಸಿದ್ದು  ಒಟ್ಟು ಮತದ ಮೌಲ್ಯ 3,78,000  ಆಗಿದೆ. ಅದೇ ವೇಳೆ ಯಶವಂತ ಸಿನ್ಹಾ ಅವರಿಗೆ 1,45,600 ಮೌಲ್ಯದ 208 ಮತಗಳು ಲಭಿಸಿದೆ. 15 ಮತಗಳು ಅಸಿಂಧುವಾಗಿವೆ. ಇಂದು ಸಂಸತ್ ನಲ್ಲಿನ ಮತಗಳ ಎಣಿಕೆ. ಮುಂದಿನ ಘೋಷಣೆಗಾಗಿ ನಿರೀಕ್ಷಿಸಿ ಎಂದು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೂಡಿ ಹೇಳಿದ್ದಾರೆ.

  • 21 Jul 2022 02:25 PM (IST)

    ಶೀಘ್ರದಲ್ಲೇ ಮೊದಲ ಸುತ್ತಿನ ಮತ ಎಣಿಕೆ ಫಲಿತಾಂಶ

    ರಿಟರ್ನಿಂಗ್ ಆಫೀಸರ್ ಪಿಸಿ ಮೂಡಿ ಅವರು ಮೊದಲ ಸುತ್ತಿನ ಮತ ಎಣಿಕೆಯ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಸಂಸತ್ ಭವನದಲ್ಲಿ ಮತದಾನ ಮಾಡಿದ ಸಂಸದರ ಮತವನ್ನು ಎಣಿಸಲಾಗುತ್ತದೆ.

  • 21 Jul 2022 02:22 PM (IST)

    ದ್ರೌಪದಿ ಮುರ್ಮು ಗ್ರಾಮದಲ್ಲಿ ಸಂಭ್ರಮಾಚರಣೆ

    ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕಿಂತ ಮುನ್ನವೇ ದ್ರೌಪದಿ ಮುರ್ಮು ಅವರ  ಗ್ರಾಮ, ಒಡಿಶಾದ ರಾಯಿರಂಗಪುರ್ ಗ್ರಾಮದಲ್ಲಿ ಸಂಭ್ರಮಾಚರಣೆ ಶುರುವಾಗಿದೆ

  • 21 Jul 2022 01:18 PM (IST)

    ನಾನು ಆಯ್ಕೆಯಾದರೆ ಸಿಎಎ ಅನುಷ್ಠಾನ ಮಾಡಲ್ಲ:ಯಶವಂತ ಸಿನ್ಹಾ

    ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದರೆ  ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೆ ತರುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದ ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಹೇಳಿದ್ದಾರೆ.

  • 21 Jul 2022 01:15 PM (IST)

    ಬುಡಕಟ್ಟು ಜನಾಂಗದ ಮಹಿಳೆ ದೇಶದ ರಾಷ್ಟ್ರಪತಿ ಆಗಲಿದ್ದಾರೆ ಎಂಬುದು ಹೆಮ್ಮೆ

    ಬುಡಕಟ್ಟು ಜನಾಂಗದ ಮಹಿಳೆ ದೇಶದ ರಾಷ್ಟ್ರಪತಿ ಆಗಲಿದ್ದಾರೆ ಎಂಬುದರ ಬಗ್ಗೆ ಬುಡಕಟ್ಟು  ಜನಾಂಗ ಮಾತ್ರವಲ್ಲ ಇಡೀ ದೇಶವೇ ಹೆಮ್ಮೆ ಪಡಲಿದೆ. ಮುರ್ಮು ಅವರನ್ನು ಅಭಿನಂದಿಸುವುದಕ್ಕಾಗಿ ಬುಡಕಟ್ಟು ಜನಾಂಗದ ನಾಯಕರು ದೆಹಲಿಗೆ ಬರಲಿದ್ದಾರೆ ಎಂಬುದು ನನಗೆ ತಿಳಿದು ಬಂದಿದೆ: ಕೇಂದ್ರ ಸಚಿವ ಕಿರಣ್ ರಿಜಿಜು

  • 21 Jul 2022 10:43 AM (IST)

    ರಾಷ್ಟ್ರಪತಿ ಚುನಾವಣೆ: ಯಾವ ಅಭ್ಯರ್ಥಿಗೆ ಯಾರ್ಯಾರು ಬೆಂಬಲ?

    ಎನ್‌ಡಿಎಯ ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಆಡಳಿತ ಪಕ್ಷ ಬಿಜು ಜನತಾ ದಳ (ಬಿಜೆಡಿ) ಬೆಂಬಲವಿದೆ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (YSRCP), ಬಹುಜನ ಸಮಾಜ ಪಕ್ಷ (BSP), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK), ತೆಲುಗು ದೇಶಂ ಪಕ್ಷ (TDP), ಜನತಾ ದಳ (ಜಾತ್ಯತೀತ), ಶಿರೋಮಣಿ ಅಕಾಲಿದಳ, ಶಿವಸೇನೆಯ ಎರಡೂ ಸತ್ಯಗಳು ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸಹ ಅವಳನ್ನು ಬೆಂಬಲಿಸುತ್ತದೆ. ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಂಬಲಿಸಿದೆ.

  • 21 Jul 2022 10:00 AM (IST)

    ಮತ ಎಣಿಕೆ

    ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಕಾರ್ಯ ಶುರುವಾಗಲಿದೆ

  • 21 Jul 2022 09:58 AM (IST)

    ದ್ರೌಪದಿ ಮುರ್ಮು ಭಾರತದ ಮುಂದಿನ ರಾಷ್ಟ್ರಪತಿ

    ದ್ರೌಪದಿ ಮುರ್ಮು ಭಾರತದ ಮುಂದಿನ ರಾಷ್ಟ್ರಪತಿಯಾಗುತ್ತಾರೆ ಎಂದು ನಾವು ಆಶಿಸುತ್ತಿರುವುದರಿಂದ ಇಲ್ಲಿ ಸಂತೋಷದ ವಾತಾವರಣವಿದೆ. ಇದು ಬುಡಕಟ್ಟು ಸಮುದಾಯ, ಒಡಿಶಾ ಮತ್ತು ದೇಶಕ್ಕೆ ಹೆಮ್ಮೆಯ ವಿಷಯ ಎಂದು ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಸಹೋದರ ತಾರಿನಿಸೇನ್ ತುಡು ಹೇಳಿದ್ದಾರೆ.

  • 21 Jul 2022 08:11 AM (IST)

    Presidential Election Results 2022: ಯಾರಾಗಲಿದ್ದಾರೆ ಭಾರತದ 15ನೇ ರಾಷ್ಟ್ರಪತಿ?

    ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಇಂದು ದೆಹಲಿಯ ಸಂಸತ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಜುಲೈ 18 ರಂದು ಸಂಸತ್ ಭವನದಲ್ಲಿ ಮತ್ತು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಲ್ಲಿ 4,796 ಸಂಸದರು ಮತ್ತು ಶಾಸಕರಲ್ಲಿ 99%ರಷ್ಟು ಮತದಾನ ನಡೆದಿತ್ತು. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದೆ ಮತ್ತು ಅವರ ಉತ್ತರಾಧಿಕಾರಿ ಜುಲೈ 25 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

  • 21 Jul 2022 07:50 AM (IST)

    Presidential Election Results 2022 Live: 11 ರಾಜ್ಯಗಳಲ್ಲಿ ಶೇ 100ರಷ್ಟು ಮತದಾನ

    ರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದಾರೆ. ಜುಲೈ 18ರಂದು ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳಲ್ಲಿನ 30 ಕೇಂದ್ರಗಳಲ್ಲಿ ಮತದಾನ ನಡೆದಿದೆ. ಈ ದಿನ ಶೇ 99.18 ಮತದಾನವಾಗಿದೆ. 11 ರಾಜ್ಯಗಳಲ್ಲಿ ಶೇ 100ರಷ್ಟು ಮತದಾನವಾಗಿದೆ.

  • 21 Jul 2022 07:36 AM (IST)

    Presidential Election Results 2022 Live: ಇಂದು ಸಂಜೆ ಫಲಿತಾಂಶ ಪ್ರಕಟ ಸಾಧ್ಯತೆ

    ದೇಶದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಜುಲೈ 18ರಂದು ಚುನಾವಣೆ (Presidential Election 2022) ನಡೆದಿದ್ದು, ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದರು. ಇಂದು ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

  • 21 Jul 2022 07:31 AM (IST)

    Presidential Election 2022 Results Live: ಸಂಸತ್ ಭವನ ತಲುಪಿದ ಮತಪೆಟ್ಟಿಗೆಗಳು

    ಎಲ್ಲಾ ರಾಜ್ಯಗಳ ಮತಪೆಟ್ಟಿಗೆಗಳು ಸಂಸತ್ ಭವನವನ್ನು ತಲುಪಿದ್ದು, ಸಂಸತ್ತಿನ ಸ್ಟ್ರಾಂಗ್‌ರೂಮ್ ಕೊಠಡಿಯಲ್ಲಿ ಇರಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಯಾಗಿರುವ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೂಡಿ ಅವರು ಗುರುವಾರ ಮತ ಎಣಿಕೆಯನ್ನು ನೋಡಿಕೊಳ್ಳಲಿದ್ದಾರೆ.

  • 21 Jul 2022 07:25 AM (IST)

    Presidential Election 2022 Results Live: ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮತದಾನ ನಡೆದಿತ್ತು

    ರಾಷ್ಟ್ರಪತಿ ಚುನಾವಣೆಗೆ ಸೋಮವಾರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಸಂಸತ್ ಭವನ ಸೇರಿದಂತೆ 31 ಸ್ಥಳಗಳು ಮತ್ತು ರಾಜ್ಯ ವಿಧಾನಸಭೆಗಳ ವ್ಯಾಪ್ತಿಯ 30 ಕೇಂದ್ರಗಳಲ್ಲಿ ಮತದಾನ ನಡೆದಿತ್ತು.

  • 21 Jul 2022 07:18 AM (IST)

    Presidential Election 2022 Results Live: ಇಂದು ರಾಷ್ಟ್ರಪತಿ ಚುನಾವಣಾ ಫಲಿತಾಂಶ

    ಬಹು ನಿರೀಕ್ಷಿತ ರಾಷ್ಟ್ರಪತಿ ಚುನಾವಣಾ ಫಲಿತಾಂಶಕ್ಕೆ ಇಡೀ ದೇಶದ ಜನ ಎದುರು ನೋಡುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ ನಂತರ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ದೇಶದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಜುಲೈ 18ರಂದು ಚುನಾವಣೆ (Presidential Election 2022) ನಡೆದಿದ್ದು, ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದರು.

  • Published On - Jul 21,2022 7:09 AM

    Follow us
    29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
    29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
    ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
    ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
    ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
    ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
    ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
    ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
    ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
    ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
    ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
    ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
    ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
    ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್