ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರಮಿಸಿದ ಕಾರ್ಮಿಕರಿಗೆ ಪುಷ್ಪವೃಷ್ಟಿ ಮಾಡಿದ ಪ್ರಧಾನಿ ಮೋದಿ

ರಾಮಮಂದಿರದ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರನ್ನು ಮರೆಯುವಂತಿಲ್ಲ. ಈ ಸುಂದರ ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲ ಕಾರ್ಮಿಕರಿಗೂ ಪ್ರಧಾನಿ ಮೋದಿ ಅವರು ಪುಷ್ಪವೃಷ್ಟಿ ಮಾಡುವ ಮೂಲಕ ಅವರಿಗೆ ಧನ್ಯವಾದ ತಿಳಿಸಿದರು. ರಾಮನ ಎಲ್ಲ ಕೆಲಸದಲ್ಲೂ ಭಾಗವಹಿಸಿದ ಕಾರ್ಮಿಕರಿಗೆ ಮೋದಿ ಕೃತಜ್ಞತೆ ತಿಳಿಸಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರಮಿಸಿದ ಕಾರ್ಮಿಕರಿಗೆ ಪುಷ್ಪವೃಷ್ಟಿ ಮಾಡಿದ ಪ್ರಧಾನಿ ಮೋದಿ

Updated on: Jan 22, 2024 | 4:56 PM

ಅಯೋಧ್ಯೆ, ಜ.22: ಇಂದು ರಾಮ ಭಕ್ತರಿಗೆ ಪರಪುಣ್ಯ ಕಾಲ, 500 ವರ್ಷಗಳ ನಿರಂತರ ಹೋರಾಟ ಹಾಗೂ ಶ್ರಮದ ಫಲವಾಗಿ ಇಂದು ಅಯೋಧ್ಯೆ ರಾಮಮಂದಿರದಲ್ಲಿ (Ram Temple)  ರಾಮ ಲಲ್ಲಾನ ಪ್ರಾಣ ಪ್ರತಿಷ್ಠಪಾನೆಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ, ಹಿಂದೂ ಧಾರ್ಮಿಕ ವಿಧಿವಿಧಾನದಂತೆ ಬಾಲರಾಮ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾರೆ. ಇದರ ನಡುವೆ ರಾಮಮಂದಿರದ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರನ್ನು ಮರೆಯುವಂತಿಲ್ಲ. ಈ ಸುಂದರ ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲ ಕಾರ್ಮಿಕರಿಗೂ ಪ್ರಧಾನಿ ಮೋದಿ ಅವರು ಪುಷ್ಪವೃಷ್ಟಿ ಮಾಡುವ ಮೂಲಕ ಅವರಿಗೆ ಧನ್ಯವಾದ ತಿಳಿಸಿದರು.

ರಾಮನ ಎಲ್ಲ ಕೆಲಸದಲ್ಲೂ ಭಾಗವಹಿಸಿದ ಕಾರ್ಮಿಕರಿಗೆ ಮೋದಿ ಕೃತಜ್ಞತೆ ತಿಳಿಸಿದರು. ಪ್ರಧಾನಿ ಮೋದಿ ಅವರು ಧಾರ್ಮಿಕ ವಿಧಿವಿಧಾನದ ಮೂಲಕ ರಾಮ ಲಲ್ಲಾನ ಪ್ರತಿಷ್ಠೆಯನ್ನು ಮಾಡಿದ್ದಾರೆ. ಈ ಕಾರ್ಯಕ್ರಮದ ನಂತರ ದೇಶದ ರಾಮಭಕ್ತರನ್ನುದ್ದೇಶಿ ಮಾತನಾಡಿದ್ದಾರೆ. ನಂತರ ವೇದಿಕೆಯ ಕಾರ್ಯಕ್ರಮ ಮುಗಿದ ನಂತರ ರಾಮಮಂದಿರ ಕಾರ್ಯಕ್ರಮಕ್ಕೆ ಬಂದಿದ್ದ ಅನೇಕ ಗಣ್ಯರನ್ನು ಭೇಟಿಯಾಗಿ ಅವರಿಗೂ ಧನ್ಯವಾದ ತಿಳಿಸಿದರು. ಅಲ್ಲಿಂದ ರಾಮಮಂದಿರ ನಿರ್ಮಾಣಕ್ಕಾಗಿ ಹಗಲು-ರಾತ್ರಿ ಎನ್ನದೇ ದುಡಿದ ಕಾರ್ಮಿಕರ ಮೇಲೆ ಪುಷ್ಪವೃಷ್ಟಿ ಮಾಡಿದರು.

ಇದನ್ನೂ ಓದಿ: ಸೂರ್ಯನ ಕಿರಣದ ಮೂಲಕ ಅಯೋಧ್ಯೆ ರಾಮಮಂದಿರದ ಚಿತ್ರ ಬಿಡಿಸಿದ ಮೈಸೂರು ಕಲಾವಿದ

ರಾಮಮಂದಿರದಲ್ಲಿ ಇನ್ನು ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಬೇರೆ ಬೇರೆ ರಾಜ್ಯದಿಂದ ತಂಡಗಳು ಕೂಡ ಬಂದಿದೆ. ಇನ್ನು ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಪೂರ್ವ-ಪಶ್ಚಿಮ ಉದ್ದ 380 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿ. ಇದು 392 ಕಂಬಗಳಿಂದ ಬೆಂಬಲಿತವಾಗಿದೆ ಮತ್ತು 44 ಬಾಗಿಲುಗಳನ್ನು ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us