Vande Bharat Train: ನೂತನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ: ರೈಲಿನ ವಿಶೇಷತೆ ಏನು?
ಗಾಂಧಿನಗರದ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಅದೇ ರೈಲಿನಲ್ಲಿ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣ ಬೆಳೆಸಿದ್ದಾರೆ.
ಗಾಂಧಿನಗರದ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಅದೇ ರೈಲಿನಲ್ಲಿ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣ ಬೆಳೆಸಿದ್ದಾರೆ. ಈ ನೂತನ ರೈಲು ದೆಹಲಿ ಮತ್ತು ವಾರಾಣಸಿ ನಡುವೆ ಚಲಿಸುತ್ತದೆ ಮತ್ತು ಇನ್ನೊಂದು ಹೊಸ ರೈಲು ದೆಹಲಿ ಮತ್ತು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾವನ್ನು ಸಂಪರ್ಕಿಸುತ್ತದೆ.
ವಂದೇ ಭಾರತ್ ಸರಣಿಯ ಮೂರನೇ ರೈಲು ಇದಾಗಿದ್ದು, ಮೊದಲೆರೆಡು ಆವೃತ್ತಿಗಳಿಗಿಂತ ಈ ರೈಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ ಎಂದು ಭಾರತೀಯ ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.
ಫೆಬ್ರುವರಿ 15, 2019ರಂದು ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ನವದೆಹಲಿ – ಕಾನ್ಪುರ – ಅಲಹಾಬಾದ್ – ವಾರಾಣಸಿ ಮಾರ್ಗದಲ್ಲಿ ಈ ರೈಲು ಸಂಚರಿಸುತ್ತಿದೆ.
ವೇಗ, ಸುರಕ್ಷತೆ ಹಾಗೂ ಅತ್ಯುತ್ತಮ ಸೇವೆಗಳೇ ವಂದೇ ಭಾರತ್ ರೈಲುಗಳ ವಿಶೇಷತೆಯಾಗಿದೆ. ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳ ನಿರ್ಮಾಣ ಮಾಡಲಾಗುತ್ತಿದೆ. ವಂದೇ ಭಾರತ್ ರೈಲುಗಳು ಗರಿಷ್ಠ 160 ಕಿ. ಮೀ. ವೇಗದಲ್ಲಿ ಸಂಚರಿಸುತ್ತವೆ. ಇತರ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್ ರೈಲುಗಳ ಪ್ರಯಾಣದ ಅವಧಿ ಶೇ.45ರಷ್ಟು ಕಡಿಮೆ ಎನ್ನುವುದು ಇದರ ವಿಶೇಷವಾಗಿದೆ.
ಎಲ್ಲಾ ಕೋಚ್‌ಗಳಲ್ಲೂ ಆಟೋ ಮ್ಯಾಟಿಕ್ ಡೋರ್, ಜಿಪಿಎಸ್ ಆಧಾರಿತ ಆಡಿಯೋ ವಿಶ್ಯುಯಲ್ಸ್, ಉಚಿತ ವೈಫೈ ವ್ಯವಸ್ಥೆ, ಆರಾಮದಾಯಕ ಆಸನಗಳು ಮತ್ತು ಪ್ರತಿ ಆಸನಕ್ಕೂ ಪ್ರತ್ಯೇಕ ಬೆಳಕನಿನ ವ್ಯವಸ್ಥೆ, ಬಯೋ ವ್ಯಾಕ್ಯೂಮ್ ಶೌಚಾಲಯಗಳು ಹೀಗೆ ವಂದೇ ಭಾರತ್ ರೈಲು ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ.
ವಂದೇ ಭಾರತ್ ರೈಲುಗಳು ಬುಲೆಟ್ ಟ್ರೈನ್ ಅನ್ನು ಮೀರಿಸುತ್ತಿವೆ. ಇತ್ತೀಚೆಗೆ, ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ಪಾಟೀಲ್ ದನ್ವೆ ಅವರು ಈ ರೈಲು ಕೇವಲ 52 ಸೆಕೆಂಡುಗಳಲ್ಲಿ 100 ಕಿಮೀ / ಗಂ ವೇಗವನ್ನು ಸಾಧಿಸಿದೆ ಎಂದು ಟ್ವೀಟ್ ಮಾಡಿದ್ದರು. ಹೊಸ ವಂದೇ ಭಾರತ್ ರೈಲು ಗಂಟೆಗೆ 160 ಕಿಮೀ ವೇಗವನ್ನು 129 ಸೆಕೆಂಡುಗಳಲ್ಲಿ ತಲುಪುತ್ತದೆ, ಅದರ ಹಿಂದಿನದಕ್ಕಿಂತ ಸುಮಾರು 16 ಸೆಕೆಂಡುಗಳು ವೇಗವಾಗಿರುತ್ತದೆ.
ಹೊಸ ರೈಲುಗಳು ದೇಶೀಯವಾಗಿ ಅಭಿವೃದ್ಧಿಪಡಿಸಿದ ಕವಚ್ ತಂತ್ರಜ್ಞಾನವನ್ನು ಹೊಂದಿವೆ, ಇದು ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆಯಾಗಿದ್ದು ಇದಕ್ಕೆ ಹಿಂದಿನ ರೈಲುಗಳು ಈ ತಂತ್ರಜ್ಞಾನವನ್ನು ಹೊಂದಿದ್ದವು.
ಸಂಪೂರ್ಣ ‘ಮೇಡ್ ಇನ್ ಇಂಡಿಯಾ’ ಈ ರೈಲುಗಳು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಾಗುತ್ತವೆ. ಈ ರೈಲುಗಳು ಕೇವಲ ಶೇಕಡಾ 15 ರಷ್ಟು ಸಲಕರಣೆಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ.
ವಂದೇ ಭಾರತ್ ರೈಲುಗಳಿಗೆ ಇಂಜಿನ್ ಅಗತ್ಯವಿರುವುದಿಲ್ಲ, ಏಕೆಂದರೆ ಅವು ಡಿಸ್ಟ್ರಿಬ್ಯೂಟ್ ಟ್ರಾಕ್ಷನ್ ಪವರ್ ಸಿಸ್ಟಮ್‌ನಲ್ಲಿ ಚಲಿಸುತ್ತವೆ. ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಮುಂದಿನ ಪೀಳಿಗೆಯ ವಂದೇ ಭಾರತ್ ರೈಲುಗಳು ಸ್ಲೀಪರ್ ಕ್ಲಾಸ್ ಮತ್ತು ಎಸಿ-1, ಎಸಿ-2 ಮತ್ತು ಎಸಿ-3 ಟೈಯರ್ ಕೋಚ್‌ಗಳನ್ನು ಹೊಂದಿರುತ್ತವೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ