ಉಕ್ರೇನ್-ಯುದ್ಧ ರಷ್ಯಾ ಯುದ್ಧ: ಪುಟಿನ್​ರೊಂದಿಗೆ ಮಾತಾಡಲಿರುವ ಪ್ರಧಾನಿ ಮೋದಿ

ಉಕ್ರೇನ್-ಯುದ್ಧ ರಷ್ಯಾ ಯುದ್ಧ: ಪುಟಿನ್​ರೊಂದಿಗೆ ಮಾತಾಡಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ

ಇದಕ್ಕೂ ಮೊದಲು, ಗುರುವಾರ ಬೆಳಗ್ಗೆ ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೋರ್ ಪೊಲಿಖಾ ಅವರು, ಜಾಗತಿಕವಾಗಿ ಇಂಡಿಯಾ ಅತ್ಯಂತ ಪ್ರಭಾವಶಾಲಿ ರಾಷ್ಟ್ರವಾಗಿದೆ, ಮಾಸ್ಕೋ ವಿರುದ್ಧ ಅದು ಗಟ್ಟಿ ಧ್ವನಿ ಎತ್ತುವ ಅವಶ್ಯಕತೆಯಿದೆ ಎಂದು ಹೇಳಿದರು.

TV9kannada Web Team

| Edited By: Arun Belly

Feb 24, 2022 | 11:04 PM

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಗುರುವಾರದಂದು ಸಮರ ಸಾರಿದ ನಂತರ ತಲೆದೋರಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾತ್ರಿ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಭಾರತದ ಮಧ್ಯಸ್ಥಿಕೆಯನ್ನು ಬಯಸಿದ್ದು, ಪ್ರಧಾನಿ ಮೋದಿ ಅವರಿಗೆ ರಷ್ಯಾದ ಅಧ್ಯಕ್ಷರೊಂದಿಗೆ ಮಾತಾಡಲು ಕೋರಿದೆ.

ನ್ಯಾಟೋ ದೊಂದಿಗೆ ಉಕ್ರೇನ್‌ನ ಸಹವಾಸ ಮಾಡುವುದು ಬೇಡ ಅಂತ ರಷ್ಯಾ ಎಚ್ಚರಿಸುತ್ತಿದ್ದ ಕಾರಣ ತಿಂಗಳುಗಳ ಕಾಲ ಉಂಟಾದದ ಉದ್ವಿಗ್ನತೆಯ ವಾತಾವರಣದ ಬಳಿಕ ಪುಟಿನ್ ಅವರು ಗುರುವಾರ ಬೆಳಿಗ್ಗೆ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆದೇಶ ನೀಡಿದರು. ಉಕ್ರೇನ್ ಪಶ್ಚಿಮದ ಕೈಗೊಂಬೆಯಾಗಿದೆ ಎಂದು ಹೀಯಾಳಿಸುತ್ತಿದ್ದ ಪುಟಿನ್ ಉಕ್ರೇನ್ ಒಂಮ ರಾಷ್ಟ್ರವೆನಿಸಿಕೊಳ್ಳಲು ನಾಲಾಯಕ್ಕು ಎಂದು ಹೇಳಿದ್ದರು.

ಸಂಜೆಯ ಹೊತ್ತಿಗೆ, ರಷ್ಯಾ ತನ್ನ ಮಿಲಿಟರಿ ಪಡೆಗಳುಉ ಉಕ್ರೇನ್‌ನಲ್ಲಿ 70 ಕ್ಕೂ ಹೆಚ್ಚು ಮಿಲಿಟರಿ ಕೇಂದ್ರಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ, ಇದರಲ್ಲಿ 11 ಏರ್‌ಫೀಲ್ಡ್‌ಗಳು, 18 ರಾಡಾರ್ ಸ್ಟೇಷನ್‌ಗಳು ಎಸ್-300 ಮತ್ತು ಬಯುಕೆ-ಎಮ್1 ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆಗಳು ಸೇರಿವೆ.

ವಿವಿಧ ಉಕ್ರೇನಿನ ಬೇರೆ ಬೇರೆ ಅಧಿಕೃತ ಮೂಲಗಳಿಂದ ಮತ್ತು ಎಎಫ್‌ಪಿ ಸುದ್ದಿಸಂಸ್ಥೆಯ ಅಂದಾಜಿನ ಪ್ರಕಾರ ಕನಿಷ್ಠ 68 ಜನರು ಸೈನಿಕರು ಮತ್ತು ನಾಗರಿಕರು ಈಗಾಗಲೇ ಕೊಲ್ಲಲ್ಪಟ್ಟಿದ್ದಾರೆ.

ಇದಕ್ಕೂ ಮೊದಲು, ಗುರುವಾರ ಬೆಳಗ್ಗೆ ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೋರ್ ಪೊಲಿಖಾ ಅವರು, ಜಾಗತಿಕವಾಗಿ ಇಂಡಿಯಾ ಅತ್ಯಂತ ಪ್ರಭಾವಶಾಲಿ ರಾಷ್ಟ್ರವಾಗಿದೆ, ಮಾಸ್ಕೋ ವಿರುದ್ಧ ಅದು ಗಟ್ಟಿ ಧ್ವನಿ ಎತ್ತುವ ಅವಶ್ಯಕತೆಯಿದೆ ಎಂದು ಹೇಳಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಶ್ವದ ಅತ್ಯಂತ ಪ್ರಬಲ, ಪ್ರಭಾವಶಾಲಿ ಮತ್ತು ಗೌರವಾನ್ವಿತ ನಾಯಕರಲ್ಲಿ ಒಬ್ಬರಾಗಿದ್ದಾರೆ. ಮೋದಿ ಜೀ ಅವರ ಗಟ್ಟಿ ಮತ್ತು ದೃಢವಾದ ಧ್ವನಿ ಪುಟಿನ್ ಅವರಿಗೆ ತಮ್ಮ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಮಾಡುತ್ತದೆ.’ ಎಂದು ಪೊಲಿಖಾ ಹೇಳಿದರು.

ರಷ್ಯಾ ಉಕ್ರೇನಿನ ಮೇಲೆ ದಾಳಿ ಆರಂಭಿಸಿದ ನಂತರ ಪ್ರಧಾನಿ ಮೋದಿ ಅವರು ಭದ್ರತಾ ಸಂಪುಟ ಸಮಿತಿಯೊಂದಿಗೆ ಒಂದು ಸಭೆಯನ್ನು ನಡೆಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಗಳ ಸಚಿವ ಎಸ್ ಜೈಶಂಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇಂದು ರಾತ್ರಿ ಅವರು ರಷ್ಯನ್ ಅಧ್ಯಷ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಇದನ್ನೂ ಓದಿ:  Russia-Ukraine War: ಕೈವ್ ಬಳಿ 14 ಜನರಿದ್ದ ಉಕ್ರೇನ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ರಷ್ಯಾ ಸೇನೆ

Follow us on

Related Stories

Most Read Stories

Click on your DTH Provider to Add TV9 Kannada