ಸಂಸತ್ತಿನ ಹೊಸ ಭವನಕ್ಕೆ ಶಿಲಾನ್ಯಾಸ ಮಾಡಲು ಮುಹೂರ್ತ ಫಿಕ್ಸ್

ಕೊರೊನಾ ಸಂಬಂಧಿತ ಮಾರ್ಗಸೂಚಿಗಳ ಆಧಾರದಲ್ಲಿ ಡಿಸೆಂಬರ್ 10ರಂದು ಮಧ್ಯಾಹ್ನ 1 ಗಂಟೆಗೆ ಶಿಲಾನ್ಯಾಸ ಮಾಡಲಾಗುತ್ತದೆ.

ಸಂಸತ್ತಿನ ಹೊಸ ಭವನಕ್ಕೆ ಶಿಲಾನ್ಯಾಸ ಮಾಡಲು ಮುಹೂರ್ತ ಫಿಕ್ಸ್
ಲೋಕಸಭಾ ಸ್ಪೀಕರ್ ಓಂ ಬಿರ್ಲಾ
Follow us
preethi shettigar
| Updated By: ಸಾಧು ಶ್ರೀನಾಥ್​

Updated on:Dec 10, 2020 | 11:40 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 10ರಂದು ಹೊಸ ಸಂಸತ್ತಿನ ಭವನಕ್ಕೆ ಶಿಲಾನ್ಯಾಸ ಮಾಡಲಿದ್ದು, 2022ರ ವೇಳಗೆ ₹971 ಕೋಟಿ ರೂ. ವೆಚ್ಚದಲ್ಲಿ ಈ ಭವನ ನಿರ್ಮಾಣವಾಗುವ ನಿರೀಕ್ಷೆ ಇದೆ ಎಂದು ಶನಿವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.

ಈಗಿರುವ ಕಟ್ಟಡವು 100 ವರ್ಷಗಳನ್ನು ಪೂರೈಸಲಿದ್ದು, ನಮ್ಮ ಹೊಸ ಭವನ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎನ್ನುವುದು ಹೆಮ್ಮೆಯ ವಿಚಾರ. ಇದು ಆತ್ಮ ನಿರ್ಭರ್ ಭಾರತ್​ಗೆ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದು ಬಿರ್ಲಾ ಹೇಳಿದ್ದಾರೆ.

ಹೊಸ ಕಟ್ಟಡವು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಹೊಸ ಕಟ್ಟಡದಲ್ಲಿ ಸಂಸತ್ತಿನ ಅಧಿವೇಶನ ನಡೆಯಲಿದೆ. ಇದು ಭೂಕಂಪ ನಿರೋಧಕ ಕಟ್ಟಡವಾಗಿರಲಿದೆ ಎಂದು ಬಿರ್ಲಾ ಹೇಳಿದರು.

ಪ್ರಸ್ತುತ ಸಂಸತ್ತಿನ ಭವನ

ಅಸ್ತಿತ್ವದಲ್ಲಿರುವ ಭವನವು ಬ್ರಿಟಿಷ್ ಯುಗದ ಕಟ್ಟಡವಾಗಿದ್ದು, ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್​ ಬೇಕರ್ ವಿನ್ಯಾಸಗೊಳಿಸಿದ್ದಾರೆ. ಇದರ ಅಡಿಪಾಯವನ್ನು ಫೆಬ್ರವರಿ 12, 1921ರಂದು ಹಾಕಲಾಯಿತು ಮತ್ತು 6 ವರ್ಷಗಳ ಅವಧಿಯಲ್ಲಿ ₹ 83 ಲಕ್ಷ ಖರ್ಚಿನಲ್ಲಿ ಸಿದ್ಧವಾದ ಕಟ್ಟಡವನ್ನು 1927ರಲ್ಲಿ ಉದ್ಘಾಟನೆ ಮಾಡಲಾಯಿತು. ದೇಶದ ಪುರಾತತ್ವ ಆಸ್ತಿಯಾಗಿರುವುದರಿಂದ ಇದನ್ನು ಸಂರಕ್ಷಿಸಲಾಗುತ್ತದೆ ಎಂದು ಬಿರ್ಲಾ ಹೇಳಿದರು.

ಹೊಸ ಸಂಸತ್ ಭವನ

ಹೊಸ ಕಟ್ಟಡವು 64500 ಚದರ. ಮೀ ವಿಸ್ತೀರ್ಣವನ್ನು ಹೊಂದಿರಲಿದ್ದು, ₹ 971 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ. 2000 ಜನರು ನೇರವಾಗಿ ಮತ್ತು 9000 ಜನರು ಪರೋಕ್ಷವಾಗಿ ಈ ಹೊಸ ಕಟ್ಟದ ನಿರ್ಮಾಣದಲ್ಲಿ ಭಾಗಿಯಾಗಲಿದ್ದಾರೆ. ಈಗಿರುವ ಕಟ್ಟಡದ ಮಾದರಿಯಲ್ಲಿಯೇ ಹೊಸ ಕಟ್ಟಡವು ಇರುತ್ತದೆ. ನೆಲಮಾಳಿಗೆ, ಮೊದಲ ಮತ್ತು ಎರಡನೇ ಮಹಡಿ ಇರುತ್ತದೆ ಮತ್ತು ಇದರ ಎತ್ತರ ಹಳೆಯ ಕಟ್ಟಡದಂತೆ ಇರುತ್ತದೆ. ಈ ಹೊಸ ಸಂಸತ್ ಭವನದಲ್ಲಿ ಕಾಗದರಹಿತ ಕಚೇರಿಗಳನ್ನು ರಚಿಸುವ ಹಜ್ಜೆಯಾಗಿ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಬಿರ್ಲಾ ಹೇಳಿದರು.

ಭೂಮಿಪೂಜೆಯ ಕಾರ್ಯಕ್ರಮಕ್ಕೆ ಎಲ್ಲ ರಾಜಕೀಯ ಪಕ್ಷಗಳಿಗೂ ಆಹ್ವಾನ ನೀಡಲಾಗಿದೆ. ಕೊರೊನಾ ಸಂಬಂಧಿತ ಮಾರ್ಗಸೂಚಿಗಳ ಆಧಾರದಲ್ಲಿ ಡಿಸೆಂಬರ್ 10ರಂದು ಮಧ್ಯಾಹ್ನ 1 ಗಂಟೆಗೆ ಶಿಲಾನ್ಯಾಸ ಮಾಡಲಾಗುತ್ತದೆ.

‘ಚಿನ್ನ’ದ ಬೇಟೆಗೆ ಪ್ರಧಾನಿ ಮೋದಿ ಮಾಸ್ಟರ್ ಪ್ಲ್ಯಾನ್.. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Published On - 11:10 am, Sun, 6 December 20

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್