ಪುಣೆ: ಬಸ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ, ಆರೋಪಿ ದತ್ತಾತ್ರೇಯ ಗಡೆ ಬಂಧನ

|

Updated on: Feb 28, 2025 | 8:27 AM

ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪುಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿ ದತ್ತಾತ್ರೇಯ ಗಾಡೆ ಅವರನ್ನು ಪುಣೆ ಪೊಲೀಸರು ಮಧ್ಯರಾತ್ರಿಯ ಸುಮಾರಿಗೆ ನಗರದ ಶಿರೂರ್ ತಹಸಿಲ್‌ನಿಂದ ಬಂಧಿಸಿದ್ದಾರೆ..ಶಿರೂರು ತಾಲೂಕಿನ ಗುನಾತ್ ಗ್ರಾಮದಲ್ಲಿ ದತ್ತಾತ್ರೇಯ ಗಡೆಯನ್ನು ಬಂಧಿಸಲಾಗಿದೆ.  ಗಡೆಯನ್ನು ಹುಡುಕಲು ಪುಣೆ ಪೊಲೀಸರು 13ಕ್ಕೂ ಅಧಿಕ ತಂಡಗಳನ್ನು ನಿಯೋಜಿಸಿದ್ದರು.

ಪುಣೆ: ಬಸ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ, ಆರೋಪಿ ದತ್ತಾತ್ರೇಯ ಗಡೆ ಬಂಧನ
ದತ್ತಾತ್ರೇಯ
Image Credit source: Free Press Journal
Follow us on

ಪುಣೆ, ಫೆಬ್ರವರಿ 28: ಪುಣೆಯ ಸ್ವರ್ಗೇಟ್​ನಲ್ಲಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ದತ್ತಾತ್ರೇಯ ಗಡೆಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗಿನ ಜಾವ 26 ವರ್ಷದ ಮಹಿಳೆ ಮೇಲೆ ಗಡೆ ಬಸ್​ನಲ್ಲಿ ಅತ್ಯಾಚಾರವೆಸಗಿದ್ದ. ಶಿರೂರು ತಾಲೂಕಿನ ಗುನಾತ್ ಗ್ರಾಮದಲ್ಲಿ ದತ್ತಾತ್ರೇಯ ಗಡೆಯನ್ನು ಬಂಧಿಸಲಾಗಿದೆ.  ಗಡೆಯನ್ನು ಹುಡುಕಲು ಪುಣೆ ಪೊಲೀಸರು 13ಕ್ಕೂ ಅಧಿಕ ತಂಡಗಳನ್ನು ನಿಯೋಜಿಸಿದ್ದರು.

ಶಿರೂರು ತಾಲೂಕಿನ ಗುನಾತ್ ಗ್ರಾಮಗಳಲ್ಲಿ ಬೆಳಗಿನ ಜಾವ 1.30 ರ ಸುಮಾರಿಗೆ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ದತ್ತಾತ್ರೇಯ ಗಡೆಯನ್ನು ಬಂಧಿಸಲಾಯಿತು. ದತ್ತಾತ್ರೇಯ ಗಡೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅದೇ ಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಒಂದು ಬಾಟಲಿ ನೀರು ಕೇಳಲು ಹೋಗಿದ್ದರು. ನೀರಿನ ಬಾಟಲಿಯನ್ನು ತೆಗೆದುಕೊಂಡ ನಂತರ ತಾನು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದ ಎಂದು ಅವರು ಹೇಳಿದ್ದಾರೆ.

ತಾನು ಪೊಲೀಸರಿಗೆ ಶರಣಾಗಲು ಬಯಸುತ್ತೇನೆ ಎಂದು ಹೇಳಿ ಹೊರಟುಹೋಗಿದ್ದನಂತೆ , ದತ್ತಾತ್ರೇಯ ನೀರನ್ನು ತೆಗೆದುಕೊಂಡು ಹೋದ ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಪೊಲೀಸರು ಬಂಧಿಸಿದ್ದಾರೆ. ಗಡೆಯನ್ನು ಸ್ವರ್ಗೇಟ್ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಮುಂದಿನ ತನಿಖೆ ನಡೆಸಲಿದ್ದಾರೆ.

ಪುಣೆ ಮತ್ತು ಅಹಲ್ಯಾನಗರ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಮತ್ತು ಸರಗಳ್ಳತನ ಸೇರಿದಂತೆ ಅರ್ಧ ಡಜನ್ ಪ್ರಕರಣಗಳಲ್ಲಿ ಗಡೆ ಹೆಸರು ದಾಖಲಾಗಿದೆ. ಈ ಅಪರಾಧಗಳಲ್ಲಿ ಒಂದರಲ್ಲಿ ಅವರು 2019 ರಿಂದ ಜಾಮೀನಿನ ಮೇಲೆ ಹೊರಗಿದ್ದಾರೆ.

ಪುಣೆ: ಅಕ್ಕಾ ಎಂದು ಕರೆದು ಅತ್ಯಾಚಾರವೆಸಗಿದ ಕಾಮುಕ, ಆರೋಪಿ ಹುಡುಕಾಟಕ್ಕೆ 13 ಪೊಲೀಸ್​ ತಂಡ ರಚನೆ

ಪುಣೆ ಪೊಲೀಸರು ಗಡೆಯನ್ನು ಬಂಧಿಸಲು ಶಿರೂರ್ ತಹಸಿಲ್‌ನಲ್ಲಿ ಡ್ರೋನ್‌ಗಳು ಮತ್ತು ಶ್ವಾನ ದಳಗಳನ್ನು ನಿಯೋಜಿಸಿದ್ದರು. ಪುಣೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ಶಿವ ಶಾಹಿ ಬಸ್ಸಿನೊಳಗೆ ಆತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ . ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ನೀಡುವುದಾಗಿ ಈಗಾಗಲೇ ಪೊಲೀಸರು ತಿಳಿಸಿದ್ದರು.

ಬೆಳಗ್ಗೆ 5.45 ರ ಸುಮಾರಿಗೆ ಪಕ್ಕದ ಸತಾರ ಜಿಲ್ಲೆಯ ಫಾಲ್ಟನ್‌ಗೆ ಹೋಗುವ ಬಸ್‌ಗಾಗಿ ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಹತ್ತಿರ ಬಂದು ಅವಳನ್ನು ಅಕ್ಕಾ ಎಂದು ಕರೆದು ಮಾತನಾಡಲು ಶುರು ಮಾಡಿದ್ದ, ಸತಾರಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿದ್ದ, ವಿಶಾಲವಾದ ನಿಲ್ದಾಣದ ಆವರಣದಲ್ಲಿ ಬೇರೆಡೆ ನಿಲ್ಲಿಸಿದ್ದ ಖಾಲಿ ಶಿವ ಶಾಹಿ ಎಸಿ ಬಸ್‌ಗೆ ಅವಳನ್ನು ಕರೆದೊಯ್ದಿದ್ದಾನೆ.

ಬಸ್ಸಿನೊಳಗೆ ಲೈಟ್ ಇಲ್ಲದ ಕಾರಣ ಆಕೆ ಹಿಂಜರಿಕೆಯಿಂದಲೇ ಬಸ್​ ಹತ್ತಿದ್ದಳು. ಆಕೆ ವಿಚಾರ ತಿಳಿದು ಓಡಿ ಹೋಗಲು ಪ್ರಯತ್ನಿಸುವ ಮುನ್ನವೇ ಅತ್ಯಾಚಾರವೆಸಗಿದ್ದಾನೆ. ಆರೋಪಿಯು ಮಹಿಳೆಗೆ ತಾನು ಫಾಲ್ಟನ್ ಬಸ್‌ನ ಕಂಡಕ್ಟರ್ ಎಂದು ಹೇಳಿದ್ದಾನೆ, ಆದ್ದರಿಂದ ಆಕೆ ಅವನನ್ನು ನಂಬಿ ಅವನೊಂದಿಗೆ ಹೋಗಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:22 am, Fri, 28 February 25