ಅಕ್ರಮ ಸಂಬಂಧವಿದ್ದಿದ್ದು ತನಗೆ ಆದ್ರೆ ಪತ್ನಿಯ ಕೊಂದು ಸುಟ್ಟು ಹಾಕಿ, ಆಕೆಗೆ ಸಂಬಂಧವಿತ್ತು ಎಂದು ಬಿಂಬಿಸಲು ಯತ್ನ
ವ್ಯಕ್ತಿಯೊಬ್ಬ ಪತ್ನಿಯ ಕೊಂದು ಆಕೆಗೆ ಬೇರೊಬ್ಬನ ಜತೆ ಅಕ್ರಮ ಸಂಬಂಧವಿತ್ತು ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆರೋಪಿಯನ್ನು ಸಮೀರ್ ಜಾಧವ್ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಅಂಜಲಿ ಸಮೀರ್ ಜಾಧವ್ (38) ಖಾಸಗಿ ಶಾಲಾ ಶಿಕ್ಷಕಿ, 2017 ರಲ್ಲಿ ವಿವಾಹವಾದರು. ಜಾಧವ್ ಆಟೋಮೊಬೈಲ್ ಡಿಪ್ಲೊಮಾ ಹೋಲ್ಡರ್ ಆಗಿದ್ದು, ಗ್ಯಾರೇಜ್ ನಡೆಸುತ್ತಿದ್ದ. ಸಿಕ್ಕಿಬಿದ್ದ ನಂತರ, ಆ ವ್ಯಕ್ತಿ ಅಜಯ್ ದೇವಗನ್ ಅಭಿನಯದ ದೃಶ್ಯಂ ಚಿತ್ರವನ್ನು ಕನಿಷ್ಠ ನಾಲ್ಕು ಬಾರಿ ನೋಡಿದ ನಂತರ ಕೊಲೆಯನ್ನು ಯೋಜಿಸಿದ್ದಾಗಿ ಬಹಿರಂಗಪಡಿಸಿದ್ದಾನೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಪುಣೆ, ನವೆಂಬರ್ 10: ಅಕ್ರಮ ಸಂಬಂಧವಿದ್ದಿದ್ದು ತನಗೆ, ಆದರೆ ಪತ್ನಿ(Wife) ತನ್ನ ದಾರಿಗೆ ಅಡ್ಡ ಬರಬಾರದು ಎಂದು ಆಕೆಯನ್ನು ಕೊಲೆ ಮಾಡಿ, ಸುಟ್ಟು ಕೊನೆಗೆ ಆಕೆಗೆ ಯಾರೊಂದಿಗೋ ಅಕ್ರಮ ಸಂಬಂಧವಿತ್ತು ಎಂದು ಬಿಂಬಿಸಲು ಹೋಗಿ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆರೋಪಿಯನ್ನು ಸಮೀರ್ ಜಾಧವ್ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಅಂಜಲಿ ಸಮೀರ್ ಜಾಧವ್ (38) ಖಾಸಗಿ ಶಾಲಾ ಶಿಕ್ಷಕಿ, 2017 ರಲ್ಲಿ ವಿವಾಹವಾದರು. ಜಾಧವ್ ಆಟೋಮೊಬೈಲ್ ಡಿಪ್ಲೊಮಾ ಹೋಲ್ಡರ್ ಆಗಿದ್ದು, ಗ್ಯಾರೇಜ್ ನಡೆಸುತ್ತಿದ್ದ.
ಸಿಕ್ಕಿಬಿದ್ದ ನಂತರ, ಆ ವ್ಯಕ್ತಿ ಅಜಯ್ ದೇವಗನ್ ಅಭಿನಯದ ದೃಶ್ಯಂ ಚಿತ್ರವನ್ನು ಕನಿಷ್ಠ ನಾಲ್ಕು ಬಾರಿ ನೋಡಿದ ನಂತರ ಕೊಲೆಯನ್ನು ಯೋಜಿಸಿದ್ದಾಗಿ ಬಹಿರಂಗಪಡಿಸಿದ್ದಾನೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಈ ದಂಪತಿ ಪುಣೆಯ ಶಿವಾನೆ ಪ್ರದೇಶದಲ್ಲಿ ವಾಸಿಸುತ್ತಿದ್ದರು ಮತ್ತು ಮೂರನೇ ಮತ್ತು ಐದನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳಿದ್ದರು. ಘಟನೆ ನಡೆದ ಸಮಯದಲ್ಲಿ, ಅವರ ಮಕ್ಕಳು ದೀಪಾವಳಿ ರಜೆಗಾಗಿ ತಮ್ಮ ಊರಿಗೆ ಹೋಗಿದ್ದರು.
ಅಕ್ಟೋಬರ್ 26 ರಂದು, ಜಾಧವ್ ತನ್ನ ಹೆಂಡತಿಯನ್ನು ತಾನು ಬಾಡಿಗೆಗೆ ಪಡೆದಿದ್ದ ಗೋದಾಮಿಗೆ ಕರೆದೊಯ್ದು, ಹೊಸ ಗೋದಾಮನ್ನು ತೋರಿಸಬೇಕೆಂದು ಹೇಳಿದ್ದ. ಒಳಗೆ ಹೋದ ನಂತರ, ಅವಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಅಲ್ಲೇ ಸುಟ್ಟು ಭಸ್ಮ ಮಾಡಿದ್ದಾನೆ.
ಮತ್ತಷ್ಟು ಓದಿ: ಇರುವೆಗಳಿಗೆ ಹೆದರಿ ಮಹಿಳೆ ಆತ್ಮಹತ್ಯೆ, ಪತಿಗೊಂದು ಸಂದೇಶ ಬರೆದಿಟ್ಟಿದ್ದ ಪತ್ನಿ
ಜಾಧವ್ ತನ್ನ ಹೆಂಡತಿಯ ನಿಷ್ಠೆಯನ್ನು ಅನುಮಾನಿಸಿ ಕೊಂದಿದ್ದಾನೆ ಎಂದು ಪೊಲೀಸರು ಭಾವಿಸಿದ್ದರು. ತನಿಖೆಯಲ್ಲಿ ಜಾಧವ್ ಸ್ವತಃ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಪತ್ನಿಯ ಚಾರಿತ್ರ್ಯಕ್ಕೆ ಕಳಂಕ ತರಲು ಆಕೆಯ ಮೊಬೈಲ್ ಬಳಸಿ ತನ್ನ ಸ್ನೇಹಿತನ ಸಂಖ್ಯೆಗೆ ಐ ಲವ್ ಯೂ ಮೆಸೇಜ್ ಕಳುಹಿಸಿ, ತಾನೇ ಉತ್ತರಿಸಿದ್ದ.ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ಪದೇ ಪದೇ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದ.
ಇದು ಪೊಲೀಸರಿಗೆ ಮತ್ತಷ್ಟು ಅನುಮಾನ ಹುಟ್ಟುಹಾಕಿತ್ತು. ವಿಚಾರಣೆಯ ಸಮಯದಲ್ಲಿ, ಅವನು ತನ್ನ ಅಪರಾಧವನ್ನು ಒಪ್ಪಿಕೊಂಡನು, ದೃಶ್ಯಂ ಚಿತ್ರದಿಂದ ತಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದ್ದಾನೆ. ಆರೋಪಿಯ ವಿರುದ್ಧ ವರ್ಜೆ ಮಾಲ್ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ರಾಜ್‌ಗಡ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




