ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತ(Porsche Car Accident) ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಒಂದೊಮ್ಮೆ ಬಾಲಕನ ತಂದೆ ತನ್ನ ಮಗ ಕಾರು ಓಡಿಸುತ್ತಲೇ ಇರಲಿಲ್ಲ ಎಂದು ಹೇಳಿಕೆ ಕೊಟ್ಟರೆ ಇನ್ನೊಂದೆಡೆ ಮಗ ಸ್ವತಃ ಅಪಘಾತದ ಸಮಯದಲ್ಲಿ ತಾನು ಕುಡಿದಿದ್ದೆ ಎಂಬುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.
ಮೇ 19ರಂದು 17 ವರ್ಷದ ಬಾಲಕ ವೇದಾಂತ್ ಅಗರ್ವಾಲ್ ಎಂಬಾತ ಐಷಾರಾಮಿ ಪೋರ್ಷೆ ಕಾರನ್ನು ಕುಡಿದ ಮತ್ತಿನಲ್ಲಿ ಚಲಾಯಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಕೂಡಲೇ ಆತನನ್ನು ಬಂಧಿಸಲಾಗಿತ್ತು, ಬಳಿಕ ಷರತ್ತಿನ ಮೇರೆಗೆ ಬಿಡುಗಡೆ ಮಾಡಲಾಗಿತ್ತು. ಜತೆಗೆ ಆತನ ತಂದೆ ವಿಶಾಲ್ ಅಗರ್ವಾಲ್ರನ್ನು ಬಂಧಿಸಲಾಗಿತ್ತು.
ಆದರೆ ಎಲ್ಲೆಡೆ ವೇದಾಂತ್ ಬಿಡುಗಡೆ ಕುರಿತು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಬಂಧಿಸಲಾಗಿತ್ತು. ಇಷ್ಟೇ ಅಲ್ಲ ಆತನ ಅಜ್ಜ ಭೂಗತ ಪಾತಕಿ ಛೋಟಾ ರಾಜನ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದ್ದು, ಕಾರಿನ ಚಾಲಕನಿಗೆ ಬೆದರಿಸಿದ ಆರೋಪದ ಮೇಲೆ ಅವರನ್ನೂ ಬಂಧಿಸಲಾಗಿದೆ.
ಪೋರ್ಷೆ ಕಾರು ಅಪಘಾತ: ವೇದಾಂತ್ ಕುಡಿದ ಮತ್ತಿನಲ್ಲಿ ಕಾರು ಓಡಿಸುತ್ತಿದ್ದುದನ್ನು ಒಪ್ಪಿಕೊಂಡ ಸ್ನೇಹಿತ
ಇನ್ನೊಂದೆಡೆ ತಮ್ಮ ಮಗ ಕುಡಿದಿರಲಿಲ್ಲ ಎಂದು ಸಾಬೀತು ಮಾಡುವ ಭರದಲ್ಲಿ ಆತನ ರಕ್ತದ ಮಾದರಿಯನ್ನು ಬದಲಿಸಲಾಗಿತ್ತು, ಬದಲಾಗಿ ಆತನ ತಾಯಿಯ ರಕ್ತದ ಮಾದರಿಯನ್ನು ಅಲ್ಲಿಡಲಾಗಿತ್ತು, ಈ ಸಂಬಂಧ ವೈದ್ಯರಿಗೆ 3 ಲಕ್ಷ ರೂ. ನೀಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಒಂದೊಡೆ ಚಾಲಕ ನಾನು ಡ್ರೈವಿಂಗ್ ಸೀಟ್ನಲ್ಲಿರಲಿಲ್ಲ ವಿಶಾಲ್ ಅವರ ಮಾತಿನ ಮೇರೆಗೆ ವೇದಾಂತ್ ಅವರನ್ನು ಡ್ರೈವಿಂಗ್ ಸೀಟ್ನಲ್ಲಿ ಕೂರಿಸಿ ನಾನು ಪ್ಯಾಸೆಂಜರ್ ಸೀಟ್ನಲ್ಲಿ ಕುಳಿತಿದ್ದೆ ಎಂದು ಚಾಲಕ ಹೇಳಿಕೆ ನೀಡಿದ್ದರು.
ಇದೀಗ ವೇದಾಂತ್ ಅಗರ್ವಾಲ್ ಸ್ವತಃ ಅಂದು ಅಪಘಾತದ ಸಮಯದಲ್ಲಿ ನಾನು ಕುಡಿದಿದ್ದೆ ಅಲ್ಲಿ ಏನಾಯಿತು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:12 am, Sun, 2 June 24