ಮಜೀಠಿಯಾ ಡ್ರಗ್ ಪ್ರಕರಣ: ಕೇಜ್ರಿವಾಲ್, ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ನವಜೋತ್ ಸಿಂಗ್ ಸಿಧು

| Updated By: ರಶ್ಮಿ ಕಲ್ಲಕಟ್ಟ

Updated on: Dec 22, 2021 | 3:53 PM

ಮಜೀಠಿಯಾ ಅವರಿಗೆ ಕೇಜ್ರಿವಾಲ್ ಕ್ಷಮೆಯಾಚಿಸಿದ ಹಳೆಯ ಪತ್ರವನ್ನು ಹಂಚಿಕೊಂಡಿರುವ ಸಿಧು, ಮಜೀಠಿಯಾ ವಿರುದ್ಧದ ಎಫ್‌ಐಆರ್ ಎಎಪಿ ಸ್ಟಂಟ್. ಏಕೆಂದರೆ ಅವರು ಈಗ ದೆಹಲಿಯಲ್ಲಿ ಅಕಾಲಿ ಸಹಭಾಗಿತ್ವದಲ್ಲಿ ಮದ್ಯ ಮಾಫಿಯಾವನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ.

ಮಜೀಠಿಯಾ ಡ್ರಗ್ ಪ್ರಕರಣ: ಕೇಜ್ರಿವಾಲ್, ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Follow us on

ಚಂಡೀಗಢ: ಪಂಜಾಬ್ ಮಾಜಿ ಸಚಿವ ಮತ್ತು ಹಿರಿಯ ಎಸ್‌ಎಡಿ ನಾಯಕ ಬಿಕ್ರಮ್ ಸಿಂಗ್ ಮಜೀಠಿಯಾ( Bikram Singh Majithia) ವಿರುದ್ಧ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ (NDPS Act) ಪ್ರಕರಣ ದಾಖಲಿಸಿದ ಒಂದು ದಿನದ ನಂತರ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಬುಧವಾರ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarinder Singh) ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಹರಿಹಾಯ್ದಿದ್ದಾರೆ. ಮಜೀಠಿಯಾ ಅವರಲ್ಲಿ ಕೇಜ್ರಿವಾಲ್ ಕ್ಷಮೆಯಾಚಿಸಿದ ಹಳೆಯ ಪತ್ರವನ್ನು ಹಂಚಿಕೊಂಡಿರುವ ಸಿಧು, ಮಜೀಠಿಯಾ ವಿರುದ್ಧದ ಎಫ್‌ಐಆರ್ ಸ್ಟಂಟ್ ಎಂದು ಎಎಪಿ ಹೇಳುತ್ತಿದೆ. ಏಕೆಂದರೆ ಅವರು ಈಗ ದೆಹಲಿಯಲ್ಲಿ ಅಕಾಲಿ ಸಹಭಾಗಿತ್ವದಲ್ಲಿ ಮದ್ಯ ಮಾಫಿಯಾವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಇದೇ ವಿಚಾರವಾಗಿ ಮಜೀಠಿಯಾ ವಿರುದ್ಧ ತಪ್ಪು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿರುವ ಅಮರಿಂದರ್ ಸಿಂಗ್ ಅವರನ್ನು ಸಿಧು ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಗೃಹ ಸಚಿವಾಲಯ ಬುಧವಾರ ಮಜೀಠಿಯಾ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಿದೆ.


ರಾಜ್ಯದಲ್ಲಿನ ಡ್ರಗ್ ದಂಧೆಯ ತನಿಖೆಯ 2018 ರ ಸ್ಥಿತಿ ವರದಿಯ ಆಧಾರದ ಮೇಲೆ ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಾದಕ ದ್ರವ್ಯ ವಿರೋಧಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮುಖ್ಯಸ್ಥ ಹರ್‌ಪ್ರೀತ್ ಸಿಂಗ್ ಸಿಧು ಅವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ 2018 ರಲ್ಲಿ ವರದಿಯನ್ನು ಸಲ್ಲಿಸಿದ್ದರು.
46 ವರ್ಷದ ಶಾಸಕ ಮಜೀಠಿಯಾ ಅವರು ಎಸ್‌ಎಡಿ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರ ಸೋದರ ಮಾವ ಮತ್ತು ಮಾಜಿ ಕೇಂದ್ರ ಸಚಿವ ಹರ್‌ಸಿಮ್ರತ್ ಕೌರ್ ಅವರ ಸಹೋದರ.


ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಆದೇಶದ ಮೇರೆಗೆ ಎಸ್‌ಟಿಎಫ್‌ನ ವರದಿಯ ಆಧಾರದ ಮೇಲೆ ಮೊಹಾಲಿಯ ಕ್ರೈಂ ಬ್ರಾಂಚ್‌ನಲ್ಲಿ ಬಿಕ್ರಮ್ ಸಿಂಗ್ ಮಜೀಠಿಯಾ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಅವರೆಲ್ಲರಿಗೂ (ರಾಜ್ಯದಲ್ಲಿ ಮಾದಕ ವ್ಯಸನದ ಸಂತ್ರಸ್ತರಿಗೆ) ನ್ಯಾಯ ಒದಗಿಸಲು ಇಂದು ಮೊದಲ ಹೆಜ್ಜೆ ಇಡಲಾಗಿದೆ ಎಂದು ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಅಕಾಲಿಗಳಿಗೆ ವೋಟ್ ಎಂಬುದು ವೋಟ್ ಫಾರ್ ಕ್ಯಾಪ್ಟನ್ ಮತ್ತು ವೋಟ್ಫಾರ್ ಕ್ಯಾಪ್ಟನ್ ಎಂಬುದು ಫೋಟ್ ಫಾರ್ ಅಕಾಲೀಸ್ ! ನಾನು 2016 ರಿಂದ ಸಾರ್ವಜನಿಕ ಡೊಮೇನ್‌ನಲ್ಲಿ ಮತ್ತು ಕ್ಯಾಬಿನೆಟ್‌ನ ಮುಚ್ಚಿದ ಕೊಠಡಿಗಳಲ್ಲಿ ಈ 75-25 ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇನೆ, ”ಎಂದು ಸಿಧು ಹೇಳಿದರು.

2022 ರ ಪಂಜಾಬ್ ವಿಧಾನಸಭಾ ಚುನಾವಣೆಯು ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್‌ನಿಂದ ನಿರ್ಗಮಿಸುವುದರಿಂದ ಮತ್ತು ಅವರ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣದಿಂದ ಹೆಚ್ಚಿನ ಪೈಪೋಟಿಯ ಚುನಾವಣೆಯಾಗಲಿದೆ. ಮತ್ತೊಂದೆಡೆ ಎಎಪಿ ರಾಜ್ಯ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಡ್ರಗ್ಸ್​ ದಂಧೆ ಪ್ರಕರಣ; ಅಕಾಲಿದಳದ ನಾಯಕ, ಪಂಜಾಬ್ ಮಾಜಿ ಸಚಿವ ಮಜಿಥಿಯಾ ವಿರುದ್ಧ ಕೇಸ್ ದಾಖಲು

Published On - 3:50 pm, Wed, 22 December 21