Navjot Singh Sidhu ಪಂಜಾಬ್​​ನ 13 ಸಮಸ್ಯೆಗಳ ಬಗ್ಗೆ ಸೋನಿಯಾ ಗಾಂಧಿಗೆ ಪತ್ರ ಬರೆದ ನವಜೋತ್ ಸಿಂಗ್ ಸಿಧು

Punjab Politics ರಾಹುಲ್ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಧು "ನನ್ನಲ್ಲಿರುವ ಬೇಗುದಿಯನ್ನು ರಾಹುಲ್ ಜಿ ಜೊತೆ ಹಂಚಿಕೊಂಡೆ. ಆ ಎಲ್ಲಾ ಬೇಗುದಿಗಳನ್ನು ಬಗೆಹರಿಸಲಾಗಿದೆ ಎಂದಿದ್ದಾರೆ. ಆದಾಗ್ಯೂ ಸಿಧು ತಮ್ಮ ರಾಜೀನಾಮೆ ಕುರಿತು ಮಾತನಾಡಲು ನಿರಾಕರಿಸಿದ್ದಾರೆ.

Navjot Singh Sidhu ಪಂಜಾಬ್​​ನ 13 ಸಮಸ್ಯೆಗಳ ಬಗ್ಗೆ ಸೋನಿಯಾ ಗಾಂಧಿಗೆ ಪತ್ರ ಬರೆದ ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Follow us
| Updated By: ರಶ್ಮಿ ಕಲ್ಲಕಟ್ಟ

Updated on: Oct 17, 2021 | 2:25 PM

ದೆಹಲಿ: ಪಂಜಾಬ್ ಕಾಂಗ್ರೆಸ್ (Punjab Congress) ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu)ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರಿಗೆ ಪತ್ರ ಬರೆದಿದ್ದು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಪಕ್ಷದ ಪ್ರಚಾರಕ್ಕಾಗಿ 13 ಅಂಶಗಳ ಕಾರ್ಯಸೂಚಿಯನ್ನು ಮಂಡಿಸಲು ಸಭೆಯನ್ನು ಕೋರಿದರು. ಇದು “ಪುನರುತ್ಥಾನ ಮತ್ತು ಉದ್ಧಾರಕ್ಕಾಗಿ ಪಂಜಾಬ್‌ನ ಕೊನೆಯ ಅವಕಾಶ” ಎಂದು ಹೇಳಿದ ಸಿಧು ಸೋನಿಯಾ ಗಾಂಧಿಯವರೊಂದಿಗೆ ವೈಯಕ್ತಿಕ ಭೇಟಿಗೆ ಮನವಿ ಮಾಡಿದ್ದಾರೆ. ಪವಿತ್ರ ಗ್ರಂಥ ಅಪವಿತ್ರಗೊಳಿಸಿದ ಪ್ರಕರಣಗಳಲ್ಲಿ ನ್ಯಾಯ, ಪಂಜಾಬ್‌ನ ಮಾದಕ ದ್ರವ್ಯಗಳ ಕಾಟ, ಕೃಷಿ ಸಮಸ್ಯೆಗಳು, ಉದ್ಯೋಗಾವಕಾಶಗಳು, ಮರಳು ಗಣಿಗಾರಿಕೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಮೊದಲಾದ ಸಮಸ್ಯೆಗಳನ್ನು ಪತ್ರದಲ್ಲಿ ಸಿಧು ಹೈಲೈಟ್ ಮಾಡಿದ್ದಾರೆ. ಅಕ್ಟೋಬರ್ 15 ರಂದು ಬರೆದ ಪತ್ರವನ್ನು ಸಿಧು ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಿಧು ಸೆಪ್ಟೆಂಬರ್ 28 ರಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದು ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

ಈ ವಾರದ ಆರಂಭದಲ್ಲಿ ಸಿಧು ರಾಹುಲ್ ಗಾಂಧಿಯನ್ನು ದೆಹಲಿಯಲ್ಲಿ ಭೇಟಿಯಾದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಾವತ್ ಅವರನ್ನು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಭೇಟಿಯಾದ ಒಂದು ದಿನದ ನಂತರ ಗಾಂಧಿ ಅವರನ್ನು ಸಿಧು ಭೇಟಿ ಆಗಿದ್ದರು. ರಾಹುಲ್- ಸಿಧು ಭೇಟಿಯ ಸಮಯದಲ್ಲಿ ರಾವತ್ ಕೂಡ ಹಾಜರಿದ್ದರು. ಈ ಭೇಟಿ ಒಂದೂವರೆ ಗಂಟೆಗಳ ಕಾಲ ನಡೆಯಿತು.

ಸಿಧು ಅವರ ಬೇಗುದಿ ಪರಿಹರಿಸಲಾಗುವುದು ಮತ್ತು ಅವರು ಶೀಘ್ರದಲ್ಲೇ ರಾಜ್ಯ ಮುಖ್ಯಸ್ಥರಾಗಿ ತಮ್ಮ ಕರ್ತವ್ಯಗಳನ್ನು ಪುನರಾರಂಭಿಸುತ್ತಾರೆ ಎಂದು ರಾವತ್ ಶುಕ್ರವಾರ ಹೇಳಿದ್ದಾರೆ.

ರಾಹುಲ್ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಧು “ನನ್ನಲ್ಲಿರುವ ಬೇಗುದಿಯನ್ನು ರಾಹುಲ್ ಜಿ ಜೊತೆ ಹಂಚಿಕೊಂಡೆ. ಆ ಎಲ್ಲಾ ಬೇಗುದಿಗಳನ್ನು ಬಗೆಹರಿಸಲಾಗಿದೆ ಎಂದಿದ್ದಾರೆ. ಆದಾಗ್ಯೂ ಸಿಧು ತಮ್ಮ ರಾಜೀನಾಮೆ ಕುರಿತು ಮಾತನಾಡಲು ನಿರಾಕರಿಸಿದ್ದಾರೆ.

ವೇಣುಗೋಪಾಲ್ ಮತ್ತು ರಾವತ್ ಅವರೊಂದಿಗಿನ ಭೇಟಿಯಲ್ಲಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರವು ಕೈಗೊಂಡ 18 ಅಂಶಗಳ ಕಾರ್ಯಸೂಚಿಯ ಬಗ್ಗೆ ಸಿಧು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಇವುಗಳಲ್ಲಿ ಸರ್ಕಾರದ ಸಮಸ್ಯೆ ಮತ್ತು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಕಾಂಗ್ರೆಸ್ ಘಟಕದಲ್ಲಿ ದೀರ್ಘಕಾಲದ ಒಳಜಗಳದ ನಂತರ, ಅಮರಿಂದರ್ ಸಿಂಗ್ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು ಮತ್ತು ಚರಣ್​​ಜಿತ್ ಸಿಂಗ್ ಚನ್ನಿ ಹೊಸ ನಾಯಕರಾಗಿ ಪ್ರಮಾಣವಚನ ಸ್ವೀಕರಿಸಿದರು.

ಜುಲೈ 19 ರಂದು ಪಿಪಿಸಿಸಿ ಮುಖ್ಯಸ್ಥರಾಗಿ ನೇಮಕಗೊಂಡ ಸಿಧು,  ಚರಣ್​​ಜಿತ್  ಸಿಂಗ್ ಚನ್ನಿ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವರಿಗೆ ಖಾತೆಗಳನ್ನು ಹಂಚಿದ ಕೆಲವೇ ನಿಮಿಷಗಳಲ್ಲಿ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಕೆಲವು ನಿರ್ಣಾಯಕ ನಿರ್ಧಾರಗಳಲ್ಲಿ ಸಿಧು ತಮ್ಮ ಅಭಿಪ್ರಾಯವನ್ನು ಹೇಳಿದ್ದರೂ, ಕೆಲವರ ನೇಮಕಾತಿಯಲ್ಲಿ ಅವರ ಸಲಹೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಕೋಪಗೊಂಡರು ಎಂದು ಪಂಜಾಬ್‌ನ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ನಾಯಕರ ನಿರ್ಧಾರಕ್ಕೆ ಬದ್ಧ ರಾಜೀನಾಮೆ ಹಿಂಪಡೆಯುವ ಸುಳಿವು ನೀಡಿದ ನವಜೋತ್ ಸಿಂಗ್ ಸಿಧು

ತಾಜಾ ಸುದ್ದಿ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ