ಸರ್ಕಾರಿ ಕೋಟಾದಲ್ಲಿ ಪಡೆದ ಲಸಿಕೆಯನ್ನು ಪಂಜಾಬ್ ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದೆ: ಆರೋಪ

ಸರ್ಕಾರಿ ಕೋಟಾದಲ್ಲಿ ಪಡೆದ  ಲಸಿಕೆಯನ್ನು ಪಂಜಾಬ್ ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಬೆಲೆಗೆ  ಮಾರಾಟ ಮಾಡುತ್ತಿದೆ: ಆರೋಪ
ಪ್ರಾತಿನಿಧಿಕ ಚಿತ್ರ

ಈಗಾಗಲೇ ಪಂಜಾಬ್ ಸರ್ಕಾರ 20 ಸಾವಿರ ಡೋಸ್ ಲಸಿಕೆಯನ್ನು ಮಾರಾಟ ಮಾಡಿದೆ. ಲಸಿಕೆ ಮಾರಾಟದಿಂದ ಬಂದ ಹಣದಲ್ಲಿ ಲಸಿಕೆ ಖರೀದಿಸ್ತಿರುವುದಾಗಿ ಪಂಜಾಬ್ ಸರ್ಕಾರ ಹೇಳಿಕೊಂಡಿದೆ. ಲಸಿಕೆ ಮಾರಾಟ ಹಣ ಠೇವಣಿ ಇಡಲು ಪಂಜಾಬ್ ಸರ್ಕಾರ CSR ಫಂಡ್‌ನ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದಿದೆ. ಪಂಜಾಬ್ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

TV9kannada Web Team

| Edited By: Ayesha Banu

Jun 04, 2021 | 3:24 PM

ದೆಹಲಿ: ಪಂಜಾಬ್​ನಲ್ಲಿ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೊವಿಡ್ -19 ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿದೆ ಎಂದು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಆರೋಪಿಸಿದ್ದು ರಾಜ್ಯ ಸರ್ಕಾರದ ಕೋಟಾದಲ್ಲಿ ಖರೀದಿಸಿದ್ದ ಲಸಿಕೆಯನ್ನು ಪಂಜಾಬ್ ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದೆ ಎಂದಿದ್ದಾರೆ.

ಪ್ರತಿ ಡೋಸ್‌ಗೆ ₹400ನಂತೆ ಕೊವ್ಯಾಕ್ಸಿನ್ ಲಸಿಕೆ ಖರೀದಿ ಮಾಡಿ ಬಳಿಕ ಅದನ್ನು ಖಾಸಗಿ ಆಸ್ಪತ್ರೆಗಳಿಗೆ 1,060 ರೂ.ಗೆ ಮಾರಾಟ ಮಾಡುತ್ತಿದೆ. ಲಸಿಕೆ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ಡೋಸ್ ಗೆ 660 ರೂಪಾಯಿ ಲಾಭವಾಗುತ್ತಿದೆ. ಇನ್ನು ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್‌ಗೆ ₹1,560 ಪಡೆದು ಜನರಿಗೆ ಕೊವಿಡ್ ಲಸಿಕೆ ನೀಡುತ್ತಿವೆ. ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳೆರಡೂ ಲಸಿಕೆ ಮಾರಾಟದಿಂದ ಭರ್ಜರಿ ಲಾಭ ಮಾಡಿಕೊಳ್ಳುತ್ತಿವೆ. ಈ ರೀತಿ ಹೆಚ್ಚಿನ ಬೆಲೆಗೆ ಲಸಿಕೆ ನೀಡುತ್ತಿವೆ ಎಂದು ಎಸ್‌ಎಡಿ ಅಧ್ಯಕ್ಷ ತಿಳಿಸಿದ್ದಾರೆ.

ಈಗಾಗಲೇ ಪಂಜಾಬ್ ಸರ್ಕಾರ 20 ಸಾವಿರ ಡೋಸ್ ಲಸಿಕೆಯನ್ನು ಮಾರಾಟ ಮಾಡಿದೆ. ಲಸಿಕೆ ಮಾರಾಟದಿಂದ ಬಂದ ಹಣದಲ್ಲಿ ಲಸಿಕೆ ಖರೀದಿಸ್ತಿರುವುದಾಗಿ ಪಂಜಾಬ್ ಸರ್ಕಾರ ಹೇಳಿಕೊಂಡಿದೆ. ಲಸಿಕೆ ಮಾರಾಟ ಹಣ ಠೇವಣಿ ಇಡಲು ಪಂಜಾಬ್ ಸರ್ಕಾರ CSR ಫಂಡ್‌ನ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದಿದೆ. ಪಂಜಾಬ್ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಎಸ್‌ಎಡಿ ಹೈಕೋರ್ಟ್‌ಗೆ ಹೋಗಲು ಸಿದ್ಧ -ಸುಖ್ಬೀರ್ ಬಾದಲ್ ಅವರು ಲಸಿಕೆ ದರವನ್ನು ಸರಿಪಡಿಸದಿದ್ದರೆ ಅಥವಾ ಅದನ್ನು ಉಚಿತವಾಗಿ ನೀಡದಿದ್ದರೆ, ನಾವು ಪಂಜಾಬ್ ಸರ್ಕಾರದ ವಿರುದ್ಧ ಹೈಕೋರ್ಟ್‌ಗೆ ಹೋಗುತ್ತೇವೆ ಎಂದು ಬಾದಲ್ ಹೇಳಿದರು ಮತ್ತು ಈ ವಿಚಾರದ ಬಗ್ಗೆ ಆಮ್ ಆದ್ಮಿ ಪಕ್ಷದ ಮೌನವನ್ನು ಪ್ರಶ್ನಿಸಿದ್ದಾರೆ.

ಕೋವಿಡ್ -19 ಲಸಿಕೆ ಖರೀದಿಯ ಮೂಲ ಬೆಲೆಗಿಂತ ಪಂಜಾಬ್ ಸರ್ಕಾರ ನಾಲ್ಕು ಪಟ್ಟು ಶುಲ್ಕ ವಿಧಿಸುತ್ತಿದೆ ಮತ್ತು ರಾಜ್ಯ ಸರ್ಕಾರದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯನ್ನು ಪ್ರಶ್ನಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಗುರುವಾರ ಆರೋಪಿಸಿದ ನಂತರ ಎಸ್‌ಎಡಿಯಿಂದ ಈ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ದೇಶದಲ್ಲಿ ಈವರೆಗೆ 2.60 ಕೋಟಿ​ಗೂ ಅಧಿಕ ಕೊರೊನಾ ಲಸಿಕೆ ವಿತರಣೆ; ಪಂಜಾಬ್​ನಲ್ಲಿ ಮತ್ತೆ ಶುರುವಾಯ್ತು ನೈಟ್​ ಕರ್ಫ್ಯೂ

Follow us on

Related Stories

Most Read Stories

Click on your DTH Provider to Add TV9 Kannada