ಲೋಕಸಭೆಯಲ್ಲಿ ತಂಗಿಯ ಕೆನ್ನೆ ಸವರಿದ ರಾಹುಲ್ ಗಾಂಧಿ, ನಂತರ ಏನಾಯ್ತು?
ಲೋಕಸಭೆಯಲ್ಲಿ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಂಗಿ ಪ್ರಿಯಾಂಕಾ ಗಾಂಧಿಯ ಕೆನ್ನೆ ಸವರರಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಲೋಕಸಭೆಯಲ್ಲಿ ಅಶಿಸ್ತು ಪ್ರದರ್ಶಿಸಿದ ರಾಹುಲ್ ಗಾಂಧಿಯನ್ನು ಸ್ಪೀಕರ್ ಓಂ ಬಿರ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸದನದ ಘನತೆಯನ್ನು ಎತ್ತಿಹಿಡಿಯಲು ಸದಸ್ಯರು ಪಾಲಿಸಬೇಕಾದ ನಡವಳಿಕೆ ಹೇಗಿರಬೇಕು ಎಂಬುದು ತಿಳಿದುಕೊಳ್ಳಬೇಕೆಂದು ಹೇಳಿದರು.

ನವದೆಹಲಿ, ಮಾರ್ಚ್ 27: ಲೋಕಸಭೆಯಲ್ಲಿ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಂಗಿ ಪ್ರಿಯಾಂಕಾ ಗಾಂಧಿಯ ಕೆನ್ನೆ ಸವರರಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಲೋಕಸಭೆಯಲ್ಲಿ ಅಶಿಸ್ತು ಪ್ರದರ್ಶಿಸಿದ ರಾಹುಲ್ ಗಾಂಧಿಯನ್ನು ಸ್ಪೀಕರ್ ಓಂ ಬಿರ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸದನದ ಘನತೆಯನ್ನು ಎತ್ತಿಹಿಡಿಯಲು ಸದಸ್ಯರು ಪಾಲಿಸಬೇಕಾದ ನಡವಳಿಕೆ ಹೇಗಿರಬೇಕು ಎಂಬುದು ತಿಳಿದುಕೊಳ್ಳಬೇಕೆಂದು ಹೇಳಿದರು.
ರಾಹುಲ್ ಅವರನ್ನು ಟೀಕಿಸಿದ್ದಕ್ಕೆ ಬಿರ್ಲಾ ಯಾವುದೇ ಕಾರಣವನ್ನು ನೀಡದಿದ್ದರೂ, ಬಿಜೆಪಿಯು ದಿನಾಂಕ ಉಲ್ಲೇಖಿಸದೆ ನಂತರದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಸದನದ ಕಲಾಪದ ಸಮಯದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿಯ ಕೆನ್ನೆ ಸವರುತ್ತಿರುವ ವಿಡಿಯೋ ಅದಾಗಿದೆ.
ರಾಹುಲ್ ಗಾಂಧಿ ಸದನದಲ್ಲಿ ತನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ, ಕೆಲವು ದಿನಗಳ ಗೈರಿನ ಬಳಿಕ ರಾಹುಲ್ ಗಾಂಧಿ ಬುಧವಾರ ಲೋಕಸಭೆಯಲ್ಲಿ ಕಾಣಿಸಿಕೊಂಡಿದ್ದರು. ರಾಹುಲ್ ಅವರನ್ನು ಖಂಡಿಸುವಾಗ ಬಿರ್ಲಾ ಬಹುಶಃ ಈ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಸದನದಲ್ಲಿ ತಂದೆ, ಮಗಳು, ತಾಯಿ, ಗಂಡ, ಹೆಂಡತಿ ಯಾರೇ ಕೂಡ ಸದಸ್ಯರಾಗಿರಬಹುದು. ಆದರೆ ಅವರೊಂದಿಗೆ ವ್ಯವಹರಿಸುವಾಗ ನಿಯಮ 349ರ ಪ್ರಕಾರ ವರ್ತಿಸಬೇಕು ಎಂದು ಓಂ ಬಿರ್ಲಾ ಹೇಳಿದ್ದಾರೆ.
पूरा देश जानता है कि आदरणीय राहुल जी के मन में उनकी छोटी बहन आदरणीय प्रियंका बहन के लिए बहुत प्रेम व स्नेह है पर भाई बहन के प्रेम व स्नेह का इस तरह संसद में प्रदर्शन अनुचित माना जाएगा, यह संसदीय परंपराओं के अनुकूल नहीं है 🙄😐😑 pic.twitter.com/n3pNldpEjf
— अमात्य राक्षस™️©️®️🏴☠️ (@capt_mishra) March 26, 2025
ರಾಹುಲ್ ಗಾಂಧಿ ಸದಸನದ ಹೊರಗೆ ಮಾತನಾಡಿ, ಸ್ಪೀಕರ್ ಎದ್ದು ಹೊರಟುಹೋದರು. ಅವರು ನನಗೆ ಒಂದು ಮಾತನ್ನೂ ಮಾತನಾಡಲು ಬಿಡಲಿಲ್ಲ. ಅವರು ನನ್ನ ಬಗ್ಗೆ ಮಾತನಾಡುತ್ತಿದ್ದರು, ಮತ್ತು ಅವರು ನನ್ನ ಬಗ್ಗೆ ಏನು ಹೇಳಿದರು ಎಂದು ನನಗೆ ತಿಳಿದಿಲ್ಲ, ಎಲ್ಲವೂ ಆಧಾರರಹಿತವಾಗಿದೆ.
ಮತ್ತಷ್ಟು ಓದಿ: ರಾಹುಲ್ ಗಾಂಧಿ ತಳ್ಳಿದ್ದರಿಂದ ನನ್ನ ಘನತೆಗೆ ಧಕ್ಕೆಯಾಗಿದೆ; ನಾಗಾಲ್ಯಾಂಡ್‌ನ ಬಿಜೆಪಿ ಸಂಸದೆ ಗಂಭೀರ ಆರೋಪ
ನಾನು ‘ನೀವು ನನ್ನ ಬಗ್ಗೆ ಮಾತನಾಡಿದಂತೆ ನನಗೆ ಮಾತನಾಡಲು ಅವಕಾಶ ನೀಡಿ ಎಂದು ಹೇಳಿದೆ, ಆದರೆ ಅವರು ಒಂದು ಮಾತನ್ನೂ ಹೇಳದೆ ಹೊರಟುಹೋದರು. ಅದರ ಅಗತ್ಯವಿಲ್ಲದಿದ್ದಾಗ ಅವರು ಸದನವನ್ನು ಮುಂದೂಡಿದರು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ