ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮದುವೆ ವಿಷಯ ಪ್ರಸ್ತಾಪಿಸಿದ ಮಹಿಳೆ: ರಾಹುಲ ಗಾಂಧಿ ಖುಷ್​

ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ ಗಾಂಧಿ ತಮಿಳನಾಡು ಮಹಿಳೆಯರನ್ನು ಮದುವೆಯಾಗಲು ಸಿದ್ಧರಿದ್ದಾರೆಂದ ಮಹಿಳೆ

ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮದುವೆ ವಿಷಯ ಪ್ರಸ್ತಾಪಿಸಿದ ಮಹಿಳೆ: ರಾಹುಲ ಗಾಂಧಿ ಖುಷ್​
ತಮಿಳನಾಡಿನಲ್ಲಿ ಮಹಿಳೆಯರೊಂದಿಗೆ ರಾಹುಲ್​ ಗಾಂಧಿ ಸಂವಾದ
Updated By: ರಶ್ಮಿ ಕಲ್ಲಕಟ್ಟ

Updated on: Sep 11, 2022 | 10:14 PM

ಚನೈ: ಕಾಂಗ್ರೆಸ್ (Congress) ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಮತ್ತು ಮುಂದಿನ ಲೋಕಸಭೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ (Rahul Gandhi) ನೇತೃತ್ವದಲ್ಲಿ “ಭಾರತ ಜೋಡೋ” ಯಾತ್ರೆ ನಡೆಯುತ್ತಿದೆ.ಭಾರತ ಜೋಡೋ ಯಾತ್ರೆಯ 3ನೇ ದಿನ ತಮಿಳನಾಡಿನಲ್ಲಿ ನಡೆದ ತಮಾಷೆಯ ಸಂಗತಿಯೊಂದನ್ನು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ ಮತ್ತು ಪಕ್ಷದ ಹಲವಾರು ಸದಸ್ಯರು 150 ದಿನಗಳ ಸುದೀರ್ಘ ‘ಭಾರತ್ ಜೋಡೋ’ ಯಾತ್ರೆ ನಡೆಸುತ್ತಿದ್ದು, ಯಾತ್ರೆಯ ಉದ್ದಕ್ಕೂ ಕಾಂಗ್ರೆಸ್ ನಾಯಕರು ದೇಶದ ಹಲವಾರು ಭಾಗಗಳಲ್ಲಿ ಜನರೊಂದಿಗೆ ಸಂವಾದ ನಡೆಸುತ್ತಾರೆ ಮತ್ತು ರ್ಯಾಲಿಗಳನ್ನು ನಡೆಸುತ್ತಾರೆ.

ಯಾತ್ರೆ ತಮಿಳುನಾಡನ್ನು ತಲುಪಿದಾಗ, ಅಲ್ಲಿ ರಾಹುಲ್ ಗಾಂಧಿ ಮಹಿಳೆಯರ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದಾಗ ರಾಹುಲ್ ಗಾಂಧಿ ತಮಿಳುನಾಡನ್ನು ಪ್ರೀತಿಸುತ್ತಿರುವುದರಿಂದ ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

“ಇಂದು ಮಧ್ಯಾಹ್ನ ಮಾರ್ತಾಂಡಮ್‌ನಲ್ಲಿ ಮಹಿಳಾ ಎಂಜಿಎನ್‌ಆರ್‌ಇಜಿಎ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿ ಸಂವಾದದ ಸಂದರ್ಭದಲ್ಲಿ, ಒಬ್ಬ ಮಹಿಳೆ ರಾಹುಲ ಗಾಂಧಿ ತಮಿಳುನಾಡನ್ನು ಪ್ರೀತಿಸುತ್ತಿದ್ದಾರೆಂದು ತಿಳಿದಿದ್ದೇನೆ ಮತ್ತು ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ಹೇಳಿದರು” ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ನ ‘ಭಾರತ್ ಜೋಡೋ’ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಲಿದೆ. ಐದು ತಿಂಗಳ ಅವಧಿಯಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,750 ಕಿ.ಮೀ ಯಾತ್ರೆ ನಡೆಯಲಿದ್ದು, 22 ಪ್ರಮುಖ ನಗರಗಳಲ್ಲಿ ಮೆಗಾ ರ್ಯಾಲಿಗಳು ನಡೆಯಲಿವೆ.

ಮತ್ತು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Sun, 11 September 22