AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಅಮಿತ್ ಶಾ ವಿರುದ್ಧದ ಮಾನನಷ್ಟ ಮೊಕದ್ದಮೆ ವಜಾಗೊಳಿಸಿದ ಕೋರ್ಟ್

ರಾಹುಲ್ ಗಾಂಧಿಗೆ ಸುಲ್ತಾನ್‌ಪುರ ವಿಶೇಷ ಎಂಪಿ-ಎಂಎಲ್‌ಎ ಕೋರ್ಟ್‌ನಿಂದ ಭಾರೀ ಕಾನೂನು ಗೆಲುವು ಸಿಕ್ಕಿದೆ. ಅಮಿತ್ ಶಾ ವಿರುದ್ಧ 2018ರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದಲ್ಲಿ ಸೂಕ್ತ ಆಧಾರಗಳಿಲ್ಲ ಎಂದು ತೀರ್ಪು ನೀಡಿದ ಕೋರ್ಟ್, ರಾಹುಲ್ ಗಾಂಧಿ ಮೇಲಿದ್ದ ಎಂಟು ವರ್ಷಗಳ ಪ್ರಕರಣವನ್ನು ಅಂತ್ಯಗೊಳಿಸಿದೆ. ಈ ತೀರ್ಪು ಕಾಂಗ್ರೆಸ್ ಪಕ್ಷದಲ್ಲಿ ಸಂಭ್ರಮ ತಂದಿದೆ.

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಅಮಿತ್ ಶಾ ವಿರುದ್ಧದ ಮಾನನಷ್ಟ ಮೊಕದ್ದಮೆ ವಜಾಗೊಳಿಸಿದ ಕೋರ್ಟ್
ರಾಹುಲ್ ಗಾಂಧಿ Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on:Oct 26, 2026 | 11:49 AM

Share

ಉತ್ತರ ಪ್ರದೇಶ, ಅ.26: ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಸುಲ್ತಾನ್‌ಪುರದ ವಿಶೇಷ ಎಂಪಿ-ಎಂಎಲ್‌ಎ ನ್ಯಾಯಾಲಯದಿಂದ ಭಾರಿ ದೊಡ್ಡ ಕಾನೂನು ಗೆಲುವು ಸಿಕ್ಕಿದೆ. 2018ರ ಕರ್ನಾಟಕ ಚುನಾವಣೆ ವೇಳೆ ಆಗಿನ ಬಿಜೆಪಿ ಅಧ್ಯಕ್ಷ, ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿದ್ದರೆನ್ನಲಾದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ವಿಶೇಷ ಎಂಪಿ-ಎಂಎಲ್‌ಎ ಕೋರ್ಟ್ ವಜಾಗೊಳಿಸಿ (Dismissed) ಆದೇಶಿಸಿದೆ.

ಖುದ್ದು ಹಾಜರಾಗಿದ್ದ ರಾಹುಲ್ ಗಾಂಧಿ:

ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಇಂದು ಸುಲ್ತಾನ್‌ಪುರ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ದೂರಿನಲ್ಲಿ ಸೂಕ್ತ ಆಧಾರಗಳಿಲ್ಲದಿರುವುದನ್ನು ಪುಷ್ಟೀಕರಿಸಿ ಪ್ರಕರಣವನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದಾರೆ. ಈ ಮಹತ್ವದ ತೀರ್ಪಿನಿಂದ ಕಳೆದ 8 ವರ್ಷಗಳಿಂದ ರಾಹುಲ್ ಗಾಂಧಿ ಅವರ ಮೇಲಿದ್ದ ಆರೋಪ ಮುಕ್ತವಾಗಿದೆ , ಕಾಂಗ್ರೆಸ್ ಪಾಳೆಯದಲ್ಲಿ ಸಂಭ್ರಮ ಮೂಡಿಸಿದೆ.

ಪ್ರಕರಣದ ಹಿನ್ನೆಲೆ ಏನು?:

2018ರ ಮೇ 8ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದರು ಎಂದು ಆರೋಪಿಸಲಾಗಿದೆ. ಸುಲ್ತಾನ್‌ಪುರ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವಿಜಯ್ ಮಿಶ್ರಾ ಅವರು 2018ರ ಆಗಸ್ಟ್ 4 ರಂದು ರಾಹುಲ್ ಗಾಂಧಿ ವಿರುದ್ಧ ಸುಲ್ತಾನ್‌ಪುರ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಬೆಂಗಾವಲು ವಾಹನ ಸರಣಿ ಅಪಘಾತ! ಹಲವರಿಗೆ ಗಾಯ, 5 ವಾಹನಗಳು ಹಾಗೂ ಒಂದು ಆ್ಯಂಬುಲೆನ್ಸ್ ಜಖಂ

2018ರಿಂದ ಇಲ್ಲಿಯವರೆಗೆ ಪ್ರಕರಣದಲ್ಲಿ ನಡೆದ ಪ್ರಮುಖ ಅಂಶಗಳು:

ಮೇ 8, 2018: ಬೆಂಗಳೂರಿನ ಚುನಾವಣೆ ಪ್ರಚಾರದಲ್ಲಿ ರಾಹುಲ್ ಗಾಂಧಿಯಿಂದ ಆಕ್ಷೇಪಾರ್ಹ ಹೇಳಿಕೆ ಆರೋಪ.

ಆಗಸ್ಟ್ 4, 2018: ರಾಹುಲ್ ಗಾಂಧಿ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲು.

ನವೆಂಬರ್ 27, 2023: ರಾಹುಲ್ ಗಾಂಧಿಗೆ ಕೋರ್ಟ್‌ನಿಂದ ಸಮನ್ಸ್ ಹಾಗೂ ವಾರಂಟ್ ಜಾರಿ.

ಫೆಬ್ರವರಿ 20, 2024: ಕೋರ್ಟ್‌ಗೆ ಶರಣಾಗಿ ಜಾಮೀನು ಪಡೆದ ರಾಹುಲ್ ಗಾಂಧಿ.

ಜುಲೈ 26, 2024: ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ಹೇಳಿಕೆ ದಾಖಲು.

ಫೆಬ್ರವರಿ 20, 2026: ಸಿಆರ್‌ಪಿಸಿ ಸೆಕ್ಷನ್ 313ರ ಅಡಿಯಲ್ಲಿ ರಾಹುಲ್ ಗಾಂಧಿ ಹೇಳಿಕೆ ದಾಖಲು.

ಮಾರ್ಚ್ 12 – ಸೆಪ್ಟೆಂಬರ್ 10, 2026: ರಾಹುಲ್ ಧ್ವನಿ ಮಾದರಿ (Voice Sample) ಪರೀಕ್ಷೆಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್, ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ವಜಾಗೊಳಿಸಿದವು.

ಅಕ್ಟೋಬರ್ 12, 2026: ಪ್ರಕರಣದ ಅಂತಿಮ ವಾದ-ಪ್ರತಿವಾದ ಪೂರ್ಣ.

ಅಕ್ಟೋಬರ್ 26, 2026: ಅಂತಿಮ ತೀರ್ಪು ಪ್ರಕಟ. (ಪ್ರಕರಣವನ್ನು ವಜಾ ಮಾಡಿದ ಕೋರ್ಟ್)

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Mon, 26 October 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
ವಾರಾಣಸಿಯ ನಮೋ ಘಾಟ್‌ನಲ್ಲಿ ಪ್ರಧಾನಿ ಮೋದಿಯ ಮನಸೆಳೆದ ಏರ್ ಶೋ
ವಾರಾಣಸಿಯ ನಮೋ ಘಾಟ್‌ನಲ್ಲಿ ಪ್ರಧಾನಿ ಮೋದಿಯ ಮನಸೆಳೆದ ಏರ್ ಶೋ
ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ಸಿದ್ದರಾಮಯ್ಯ
ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ಸಿದ್ದರಾಮಯ್ಯ