‘ಪಾಸ್ತಾಗೆ ಕರಿಬೇವಿನ ಒಗ್ಗರಣೆ’; ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ ಬಿಜೆಪಿ ಸಂಸದೆ ಕಂಗನಾ ರಣಾವತ್
ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ತನ್ನನ್ನು 'ಅವಮಾನ ಮತ್ತು ನಿಂದನೆ' ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ. ಜಾತಿ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಯಾರ ಹೆಸರನ್ನೂ ಹೇಳದೆ ಹೇಳಿದ್ದರು.
ದೆಹಲಿ ಜುಲೈ 31: ಲೋಕಸಭೆಯಲ್ಲಿ ರಾಹುಲ್ ಗಾಂಧಿ (Rahul Gandhi) ಜಾತಿ ಗಣತಿ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ (Anurag Thakur) ಜಾತಿ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು. ಅನುರಾಗ್ ಠಾಕೂರ್ ನನ್ನನ್ನು ‘ಅವಮಾನಿಸಿ’ ನಿಂದನೆ ಮಾಡಿದ್ದಾರೆ ಎಂದು ರಾಹುಲ್ ಹೇಳಿದ ಒಂದು ದಿನದ ನಂತರ, ನಟಿ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಹಳೇ ವಿಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ರಾಹುಲ್ ಜಾತಿ ಬಗ್ಗೆ ಮಾತನಾಡಿದ್ದಾರೆ.
ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ರಾಹುಲ್ ಸಾರ್ವಜನಿಕ ಸಭೆಗಳಲ್ಲಿ ಜಾತಿ ಬಗ್ಗೆ ಹೇಳಿರುವ ಹಳೆಯ ವಿಡಿಯೊಗಳನ್ನು ಹಂಚಿಕೊಂಡು ಈ ರೀತಿ ಬರೆದಿದ್ದಾರೆ, “ಅಪ್ನಿ ಜಾತ್ ಕಾ ಕುಚ್ ಅತಾ ಪತಾ ನಹೀ, ಮೇ ಮುಸ್ಲಿಂ, ಡ್ಯಾಡ್ ಪಾರ್ಸಿ, ಮಮ್ಮಿ ಕ್ರಿಶ್ಚಿಯನ್ ಔರ್ ಖುದ್ ಐಸಾ ಲಗ್ತಾ ಹೈ ಜೈಸೆ ಪಾಸ್ತಾ ಕೋ ಕಡಿ ಪತ್ತೆ ಕಾ ತಡಕಾ ಲಗಾಕರ್ ಕಿಚಡಿ ಬನಾನೇ ಕಿ ಕೊಶಿಶ್ ಕಿ ಹೋ, ಔರ್ ಇನ್ ಕೋ ಸಬ್ಕಿ ಜಾತ್ ಪತಾ ಕರ್ನೀ ಹೈ. (ನಿಮಗೆ ನಿಮ್ಮ ಸ್ವಂತ ಜಾತಿಯ ಬಗ್ಗೆ ಏನೂ ತಿಳಿದಿಲ್ಲ, ನಿಮ್ಮ ತಾತ ಮುಸ್ಲಿಂ, ತಂದೆ ಪಾರ್ಸಿ, ಮಮ್ಮಿ ಕ್ರಿಶ್ಚಿಯನ್, ಯಾರೋ ಪಾಸ್ತಾಗೆ ಕರಿಬೇವಿನ ಒಗ್ಗರಣೆ ಕೊಟ್ಟು ಖಿಚಡಿ ಮಾಡಲು ಪ್ರಯತ್ನಿಸಿದಂತೆ ಕಾಣುತ್ತದೆ. ಆದರೆ ಅವರು ಪ್ರತಿಯೊಬ್ಬರ ಜಾತಿಯನ್ನು ತಿಳಿದುಕೊಳ್ಳಲು ಬಯಸುತ್ತಾರೆ.)
“ರಾಹುಲ್ ಗಾಂಧಿಯವರ ಅದ್ಹೇಗೆ ಸಾರ್ವಜನಿಕವಾಗಿ ಜನರ ಜಾತಿಯನ್ನು ಕೇಳುತ್ತಾರೆ, ನಾಚಿಕೆಯಾಗಬೇಕು” ಎಂದು ಕಂಗನಾ ಹೇಳಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಬಗ್ಗೆ ‘ಜಾತಿ’ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ; ಮೋದಿ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಕಾಂಗ್ರೆಸ್ ನಿರ್ಧಾರ
ಲೋಕಸಭೆಯಲ್ಲಿ ಏನೇನಾಯ್ತು?
ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ತನ್ನನ್ನು ‘ಅವಮಾನ ಮತ್ತು ನಿಂದನೆ’ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ. ಜಾತಿ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಯಾರ ಹೆಸರನ್ನೂ ಹೇಳದೆ ಹೇಳಿದ್ದರು. ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ರಾಷ್ಟ್ರವ್ಯಾಪಿ ಜನಗಣತಿ ನಡೆಸುವುದಾಗಿ ಭರವಸೆ ನೀಡಿದ ರಾಹುಲ್, “ನೀವು ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಬಹುದು. ಆದರೆ ನಾವು ಸಂಸತ್ತಿನಲ್ಲಿ ಜಾತಿ ಗಣತಿಯನ್ನು ಅಂಗೀಕರಿಸುತ್ತೇವೆ. ಅನುರಾಗ್ ಠಾಕೂರ್ ನನ್ನನ್ನು ನಿಂದಿಸಿದ್ದಾರೆ ಮತ್ತು ಅವಮಾನಿಸಿದ್ದಾರೆ. ಆದರೆ ನಾನು ಅವರಿಂದ ಯಾವುದೇ ಕ್ಷಮೆಯನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ