ರಾಹುಲ್ ಗಾಂಧಿ ಬಗ್ಗೆ ‘ಜಾತಿ’ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ; ಮೋದಿ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಕಾಂಗ್ರೆಸ್ ನಿರ್ಧಾರ

ಅನುರಾಗ್ ಠಾಕೂರ್ ಅವರ ಹೇಳಿಕೆಯನ್ನು ಪ್ರತಿಪಕ್ಷಗಳು ಯಾಕೆ ವೈಯಕ್ತಿಕವಾಗಿ ತೆಗೆದುಕೊಂಡಿವೆ? ಜಾತಿ ಗಣತಿ ಕುರಿತು ತಮ್ಮ ನಿಲುವಿನ ಬಗ್ಗೆ ಕಾಂಗ್ರೆಸ್ ಗೊಂದಲವನ್ನುಂಟು ಮಾಡುತ್ತಿದೆ. ಅನುರಾಗ್ ಠಾಕೂರ್ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ, ಆದರೆ ಅವರು ಯಾಕೆ ವೈಯಕ್ತಿಕ ಎಂದು ಅಂದುಕೊಳ್ಳುತ್ತಿದ್ದಾರೆ? INDI ಅಲಯನ್ಸ್‌ನಲ್ಲಿ ತೀವ್ರ ಗೊಂದಲವಿದೆ" ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ರಾಹುಲ್ ಗಾಂಧಿ ಬಗ್ಗೆ ‘ಜಾತಿ’ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ; ಮೋದಿ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಕಾಂಗ್ರೆಸ್ ನಿರ್ಧಾರ
ರಾಹುಲ್ ಗಾಂಧಿ
Follow us
|

Updated on: Jul 31, 2024 | 5:34 PM

ದೆಹಲಿ ಜುಲೈ 31: ಮಂಗಳವಾರ ಲೋಕಸಭೆಯಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ (Anurag Thakur) ಅವರು ವಿರೋಧ ಪಕ್ಷದ ನಾಯಕ (LoP) ರಾಹುಲ್ ಗಾಂಧಿಯವರ (Rahul Gandhi)  ಬಗ್ಗೆ ಜಾತಿ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಆದಾಗ್ಯೂ ಅನುರಾಗ್ ಠಾಕೂರ್ ಅವರ ಈ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪಿಎಂ, “ಸಂಸದೀಯ ವಿಶೇಷ ಹಕ್ಕುಗಳ ಗಂಭೀರ ಉಲ್ಲಂಘನೆಯನ್ನು” ಪ್ರೋತ್ಸಾಹಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.

ಸದನದ ಕಲಾಪದಿಂದ ಹೊರಹಾಕಲ್ಪಟ್ಟ ಠಾಕೂರ್ ಅವರ “ಆಕ್ಷೇಪಾರ್ಹ” ಹೇಳಿಕೆಗಳನ್ನು ಬೆಂಬಲಿಸಿದ ಪ್ರಧಾನಿ ಮೋದಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ಕಾಂಗ್ರೆಸ್ ಸಂಸದ ಚರಂಜಿತ್ ಸಿಂಗ್ ಚನ್ನಿ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ ನೋಟಿಸ್ ಸಲ್ಲಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್‌ನ ದಲಿತ ಸಂಸದ ಚನ್ನಿ, “ತೆಗೆದ ಹಾಕಿದ ಭಾಗಗಳನ್ನು ಪ್ರಧಾನಿಯವರು ‘ಎಕ್ಸ್’ ನಲ್ಲಿ ಇಡೀ ಭಾಷಣದ ವಿಡಿಯೊದೊಂದಿಗೆ ಟ್ವೀಟ್ ಮಾಡಿದ್ದು ಆಘಾತವುಂಟು ಮಾಡಿದೆ ಎಂದು ಹೇಳಿದರು.

“ಸದನದ ಕಲಾಪದಿಂದ ತೆಗೆದು ಹಾಕಿದ ಹೇಳಿಕೆಗಳ ಒಂದು ಭಾಗವನ್ನು ‘X’ ನಲ್ಲಿ ಟ್ವೀಟ್ ಮಾಡಿದ್ದಕ್ಕಾಗಿ ಪ್ರಧಾನ ಮಂತ್ರಿಯ ವಿರುದ್ಧ ಲೋಕಸಭೆಯಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 222 ರ ಅಡಿಯಲ್ಲಿ ಹಕ್ಕುಚ್ಯುತಿ ಮಂಡಿಸಲು ನಾನು ಈ ಮೂಲಕ ವಿನಂತಿ ಮಾಡುತ್ತಿದ್ದೇನೆ ಎಂದ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಚನ್ನಿ ಅವರು ಸಭಾಪತಿ ಓಂ ಬಿರ್ಲಾಗೆ ತಮ್ಮ ಸಂವಹನದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ಅನುರಾಗ್ ಠಾಕೂರ್ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  “ಸದನದಲ್ಲಿ ತೆಗಳುವುದು – ಸಂಸತ್ತಿನಲ್ಲಿ ಇದು ನಡೆಯುವುದಿಲ್ಲ. ಸಂಸತ್ತಿನಲ್ಲಿ ಯಾರ ಜಾತಿ ಕೇಳುವುದಿಲ್ಲ …ಅನುರಾಗ್ ಠಾಕೂರ್ ಅವರನ್ನು (ರಾಹುಲ್ ಗಾಂಧಿಯನ್ನು) ಅವಮಾನಿಸಲು ಉದ್ದೇಶಪೂರ್ವಕವಾಗಿ ಹೀಗೆ ಹೇಳಿದ್ದಾರೆ. ಬಿಜೆಪಿಯ ಹಲವಾರು ಹಿರಿಯ ನಾಯಕರು ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಾರೆ. ಅವರು ಕನ್ನಡಿಯಲ್ಲಿ ನೋಡಿಕೊಂಡು ಮತ್ತೆ ಮಾತಾಡಲಿ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಮಾತು

ಠಾಕೂರ್ ಭಾಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಧಾನಿಯನ್ನು ಟೀಕಿಸಿದ ಖರ್ಗೆ, ಇದು ಭಾವನೆಗಳನ್ನು ಕೆರಳಿಸುವ ಪ್ರಯತ್ನ. ಎಲ್ಲಿ ಮಾತನಾಡಬೇಕು ಮತ್ತು ಯಾರನ್ನು ಸಮರ್ಥಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿಗೆ ತಿಳಿದಿರಬೇಕು ಎಂದು ಖರ್ಗೆ ಹೇಳಿದರು.

ಜಾತಿ ಗಣತಿಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮಾಡಿದ “ಅಸೂಕ್ಷ್ಮ ಮತ್ತು ಕ್ರೂರ” ಟೀಕೆಗಳ ವಿರುದ್ಧ ಪ್ರತಿಪಕ್ಷ ಇಂಡಿಯಾ ಬಣ ಬುಧವಾರ ಸದನದೊಳಗೆ ಪ್ರತಿಭಟನೆ ನಡೆಸಿದೆ. ಜಾತಿ ಜನಗಣತಿಯು ಬಹಳ ಭಾವನಾತ್ಮಕ ವಿಷಯವಾಗಿದೆ ಎಂದು ನಮಗೆ ತಿಳಿದಿದೆ. ಭಾರತದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದ ಅನೇಕ ಜನರು ಜಾತಿ ಗಣತಿಯನ್ನು ಬಯಸುತ್ತಾರೆ. ಆದರೆ ಅವರ ಬೇಡಿಕೆಯನ್ನು ಸಂಸತ್ತಿನಲ್ಲಿ ಬಿಜೆಪಿ ಅಪಹಾಸ್ಯ ಮಾಡಿದೆ. ಸಂಸತ್ತಿನಲ್ಲಿ ಬಿಜೆಪಿ ಅವರನ್ನು ಅವಮಾನಿಸಿದ್ದು ದುರದೃಷ್ಟಕರ. ಸಂಜೆಯ ನಂತರ ಪ್ರಧಾನಿಯವರು ಆ ಭಾಷಣವನ್ನು ಹಂಚಿಕೊಂಡು ಅದನ್ನು ಶ್ಲಾಘಿಸಿದರು ಎಂದು ಸಂಸತ್ತಿನ ಹೊರಗೆ ಸುದ್ದಿಗಾರರರೊಂದಿಗೆ ಮಾತನಾಡಿದ ಗೌರವ್ ಗೊಗೋಯಿ ಹೇಳಿದ್ದಾರೆ.  “ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳನ್ನು ಅವಮಾನಿಸುವ ಭಾಷಣವನ್ನು ಪ್ರಧಾನಿ ಶ್ಲಾಘಿಸಿದರು. ನಾವು ಇಲ್ಲಿ ಅವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ ಮತ್ತು ಜಾತಿ ಗಣತಿಗಾಗಿ ಹೋರಾಡುತ್ತಿದ್ದೇವೆ” ಎಂದಿದ್ದಾರೆ ಅವರು.

ರಾಷ್ಟ್ರೀಯ ಜನತಾ ದಳದ ನಾಯಕ ಮನೋಜ್ ಝಾ ಅವರು ಠಾಕೂರ್ ಊಳಿಗಮಾನ್ಯ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು. ವೈಯಕ್ತಿಕ ಜಾತಿಗಳಿಗಿಂತ ಜಾತಿ ಗಣತಿಯ ಮೇಲೆ ಕೇಂದ್ರೀಕರಿಸಬೇಕು ಎಂದ ಅವರ ಹೇಳಿಕೆಗಳನ್ನು ಪ್ರಧಾನಿ ಅನುಮೋದಿಸಿದ್ದಕ್ಕೆ ಟೀಕಿಸಿದ್ದಾರೆ.

ಭಾಷಣವನ್ನು ಮರು ಟ್ವೀಟ್ ಮಾಡುವ ಮೂಲಕ, ಪ್ರಧಾನಿ ಅವರು ‘ಭೈನ್ಸ್ (ಎಮ್ಮೆ), ಮಂಗಳಸೂತ್ರ ಮತ್ತು ಮುಜ್ರಾ’ಗಳಿಗಿಂತ ಮೇಲೇರಲು ಸಾಧ್ಯವಿಲ್ಲ ಎಂದು ತೋರಿಸಿದ್ದಾರೆ” ಎಂದಿದ್ದಾರೆ ಝಾ.  ಠಾಕೂರ್ ಕ್ಷಮೆಯಾಚಿಸಬೇಕೆಂದು ಸಂಸದ ಕೆ.ಸುರೇಶ್ ಒತ್ತಾಯಿಸಿದ್ದಾರೆ.

ಠಾಕೂರ್ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ

ಬಿಜೆಪಿ ನಾಯಕರು ಅನುರಾಗ್ ಠಾಕೂರ್ ಅವರನ್ನು ಸಮರ್ಥಿಸಿಕೊಂಡಿದ್ದು, ಪ್ರತಿಪಕ್ಷಗಳನ್ನು ಟೀಕಿಸಿದ್ದಾರೆ. ಬಿಜೆಪಿ ಸಂಸದ ಸುಧಾಂಶು ತ್ರಿವೇದಿ, ಠಾಕೂರ್ ಅವರ ಹೇಳಿಕೆಯನ್ನು ಪ್ರತಿಪಕ್ಷಗಳು ಏಕೆ ವೈಯಕ್ತಿಕವಾಗಿ ತೆಗೆದುಕೊಂಡಿವೆ? ಜಾತಿ ಗಣತಿ ಕುರಿತು ತಮ್ಮ ನಿಲುವಿನ ಬಗ್ಗೆ ಕಾಂಗ್ರೆಸ್ ಗೊಂದಲವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.  “ಅನುರಾಗ್ ಠಾಕೂರ್ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ, ಆದರೆ ಅವರು ಯಾಕೆ ವೈಯಕ್ತಿಕ ಅಂದುಕೊಳ್ಳುತ್ತಿದ್ದಾರೆ? INDI ಅಲಯನ್ಸ್‌ನಲ್ಲಿ ತೀವ್ರ ಗೊಂದಲವಿದೆ” ಎಂದು ತ್ರಿವೇದಿ ಹೇಳಿದ್ದಾರೆ.

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ತ್ರಿವೇದಿ ಅವರ ಮಾತುಗಳನ್ನು ಬೆಂಬಲಿಸಿದ್ದು, ರಾಹುಲ್ ಗಾಂಧಿಯವರ ಜಾತಿ ಏಕೆ ಸೂಕ್ಷ್ಮ ವಿಷಯವಾಗಬೇಕು ಎಂದು ಕೇಳಿದ್ದಾರೆ.  “ರಾಹುಲ್ ಗಾಂಧಿ ಜೀ.ನಿಮ್ಮ ಜಾತಿ ಯಾವುದು ಎಂದು ನಾನು ಕೂಡ ಕೇಳುತ್ತೇನೆ. ಯಾರಾದರೂ ನನ್ನ ಜಾತಿಯ ಬಗ್ಗೆ ಕೇಳಿದರೆ … ನಾನು ಅವರಿಗೆ ಹೇಳುತ್ತೇನೆ. ನಾನು ನನ್ನ ಜಾತಿಯನ್ನು ಗೌರವಿಸುತ್ತೇನೆ ಎಂದು ಹೇಳುತ್ತೇನೆ. ಆದರೆ ರಾಹುಲ್ ಗಾಂಧಿ ಏನನ್ನೂ ಹೇಳುವುದಿಲ್ಲ. ಅವರು ಹಿಂದೂಗಳನ್ನು ಒಡೆಯಲು ಬಯಸುತ್ತಾರೆ.ರೋಹಿಂಗ್ಯಾಗಳ ವಿಚಾರದಲ್ಲಿ ಅವರು ಏನನ್ನೂ ಹೇಳುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ನೀವು ಅವಮಾನಿಸುತ್ತಲೇ ಇರಿ, ನಾನು ಹೋರಾಡುತ್ತೇನೆ; ಜಾತಿ ಕುರಿತು ಅನುರಾಗ್ ಠಾಕೂರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜಾತಿಯ ಬಗ್ಗೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಏಕೆಂದರೆ ಅವರು ಅದೇ ರೀತಿ ಮಾಡುತ್ತಿದ್ದಾರೆ. ಅವರು ಜಾತಿಯ ಆಧಾರದ ಮೇಲೆ “ದೇಶವನ್ನು ವಿಭಜಿಸಲು” ಪ್ರಯತ್ನಿಸುತ್ತಿದ್ದಾರೆ. ಹಗಲಿರುಳು ಜಾತಿ ಮಾತನಾಡುತ್ತಾರೆ, ಮಾಧ್ಯಮದವರ, ಸೈನಿಕರ ಜಾತಿ ಕೇಳುತ್ತಾರೆ, ಜಾತಿಯ ಆಧಾರದಲ್ಲಿ ದೇಶ ಒಡೆಯಲು ಸಂಚು ಮಾಡಿದ್ದಾರೆ, ರಾಹುಲ್ ಗಾಂಧಿಯವರ ಜಾತಿ ಕೇಳಿದಾಗ ಸಿಟ್ಟು ಬಂತು, ನಾವೇಕೆ ಅವರಲ್ಲಿ ಜಾತಿ ಕೇಳಬಾರದು? ಅವರು ದೇಶಕ್ಕಿಂತಲೂ ದೊಡ್ಡವರೇ ಎಂದು ರಿಜಿಜು ಕೇಳಿದ್ದಾರೆ.

ಜನರ ಜಾತಿ ಕೇಳುವ ಮೂಲಕ ಕಾಂಗ್ರೆಸ್ ದೇಶವನ್ನು ವಿಭಜಿಸಲು ಷಡ್ಯಂತ್ರ ನಡೆಸಿದ್ದು, ರಾಹುಲ್ ಗಾಂಧಿಯವರ ಜಾತಿಯ ಬಗ್ಗೆ ಮಾತನಾಡಿದಾಗ ತುಂಬಾ ಪ್ರತಿಭಟನೆಗಳು ನಡೆದಿವೆ ಎಂದರು. ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು, ಕಾಂಗ್ರೆಸ್ ದಿನ ಬಿಟ್ಟು ದಿನ ಜಾತಿಯ ಬಗ್ಗೆ ಮಾತನಾಡುತ್ತದೆ, ಅವರು (ರಾಹುಲ್ ಗಾಂಧಿ) ಮಾಧ್ಯಮದವರನ್ನು ಭೇಟಿಯಾದಾಗ ಅವರು ಅವರ ಜಾತಿಯನ್ನು ಕೇಳುತ್ತಾರೆ, ಅವರು ಸಶಸ್ತ್ರ ಪಡೆಗಳ ಜಾತಿಯನ್ನು ಕೇಳುತ್ತಾರೆ, ಅವರು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಜನರ ಜಾತಿಯನ್ನು ಕೇಳುತ್ತಾರೆ.

“ಅವರು ಜನರ ಜಾತಿಯ ಬಗ್ಗೆ ಕೇಳಬಹುದು, ಆದರೆ ಅವರ ಜಾತಿಯ ಬಗ್ಗೆ ಯಾರೂ ಕೇಳಲು ಸಾಧ್ಯವಿಲ್ಲ. ಇದು ಏನು? (ಸಮಾಜವಾದಿ ಪಕ್ಷದ ಅಧ್ಯಕ್ಷ) ಅಖಿಲೇಶ್ ಯಾದವ್ ಕೂಡ ರಾಹುಲ್ ಗಾಂಧಿಯನ್ನು ಬೆಂಬಲಿಸಿದರು. ಅವರು ದೇಶ ಮತ್ತು ಸಂಸತ್ತಿಗಿಂತ ಮೇಲಿದ್ದಾರಾ?” ಎಂದು ಕೇಳಿದ್ದಾರೆ.

ಪ್ರತಿಪಕ್ಷಗಳ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಾತಿ ಕೇಳದೆ ಜಾತಿ ಗಣತಿ ನಡೆಸುವುದು ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. “ಅವರು (ರಾಹುಲ್ ಗಾಂಧಿ) ಅನುರಾಗ್ ಠಾಕೂರ್ ಅವರಿಂದ ಅವಮಾನಿತರಾಗಿದ್ದಾರೆ ಎಂದು ಭಾವಿಸಿದರೆ, ಅವರು ಜಾತಿ ಗಣತಿ ಕೇಳುವ ಮೂಲಕ ಇಡೀ ದೇಶವನ್ನು ಅವಮಾನಿಸುತ್ತಾರೆ. ಅವರು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಯಾರಾದರೂ ಅವರ ಜಾತಿಯನ್ನು ಕೇಳಿದರೆ ಅದು ಅವಮಾನ ಏಕೆ? ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ