Rahul Gandhi: ನೀವು ಅವಮಾನಿಸುತ್ತಲೇ ಇರಿ, ನಾನು ಹೋರಾಡುತ್ತೇನೆ; ಜಾತಿ ಕುರಿತು ಅನುರಾಗ್ ಠಾಕೂರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಲೋಕಸಭೆಯಲ್ಲಿ ಇಂದು ನಡೆದ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ತಮ್ಮನ್ನು ನಿಂದಿಸಿ, ಅವಮಾನಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಜಾತಿ ಗಣತಿಯ ಕುರಿತಾಗಿ ಲೋಕಸಭಾ ಅಧಿವೇಶನದಲ್ಲಿ ಇಂದು ಅನುರಾಗ್ ಠಾಕೂರ್ ಮತ್ತು ರಾಹುಲ್ ಗಾಂಧಿ ನಡುವೆ ತೀವ್ರ ಚರ್ಚೆ ನಡೆದಿದೆ.

Rahul Gandhi: ನೀವು ಅವಮಾನಿಸುತ್ತಲೇ ಇರಿ, ನಾನು ಹೋರಾಡುತ್ತೇನೆ; ಜಾತಿ ಕುರಿತು ಅನುರಾಗ್ ಠಾಕೂರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಅನುರಾಗ್ ಠಾಕೂರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ Image Credit source: PTI
Follow us
|

Updated on:Jul 30, 2024 | 10:37 PM

ನವದೆಹಲಿ: ಸಂಸತ್ತಿನ ಕೆಳಮನೆಯಲ್ಲಿ ಇಂದು ಭಾಷಣ ಮಾಡುವಾಗ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಸಂಸದ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದರು. ಜಾತಿ ಗೊತ್ತಿಲ್ಲದವರು ಜಾತಿ ಗಣತಿ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಜಾತಿ ಗಣತಿ ಬೇಡಿಕೆಯ ಮೇಲಿನ ಚರ್ಚೆ ಇಂದು ಲೋಕಸಭೆಯಲ್ಲಿ ವೈಯಕ್ತಿಕ ತಿರುವು ಪಡೆದುಕೊಂಡಿದ್ದು, ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಜಾತಿ ಗೊತ್ತಿಲ್ಲದವರು ಜಾತಿ ಎಣಿಕೆಯ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 6 ಜನ ರಚಿಸಿರುವ ‘ಚಕ್ರವ್ಯೂಹ’ದಲ್ಲಿ ಆಧುನಿಕ ಭಾರತ ಸಿಲುಕಿದೆ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಅನುರಾಗ್ ಠಾಕೂರ್ ಯಾರದ್ದೇ ಹೆಸರನ್ನು ತೆಗೆದುಕೊಳ್ಳದಿದ್ದರೂ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ದರಿಂದ ಅದಕ್ಕೆ ರಾಹುಲ್ ಗಾಂಧಿ ತಿರುಗೇಟು ನೀಡಿದರು. ನೀವು ನನ್ನನ್ನು ಅವಮಾನಿಸುತ್ತಲೇ ಇರಿ, ನಾನು ಹೋರಾಡುತ್ತಲೇ ಇರುತ್ತೇನೆ. ನಿಮ್ಮ ನಿಂದನೆಗೆ ನಾನು ಮರುಉತ್ತರ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Wayanad Landslide: ಭೂಕುಸಿತ ಪೀಡಿತ ಕೇರಳದ ವಯನಾಡಿಗೆ ನಾಳೆ ರಾಹುಲ್ ಗಾಂಧಿ, ಪ್ರಿಯಾಂಕಾ ಭೇಟಿ

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಪರವಾಗಿ ಮಾತನಾಡುವ ಮತ್ತು ಅವರಿಗಾಗಿ ಹೋರಾಡುವವರನ್ನು ಅವಮಾನಿಸಲಾಗುತ್ತದೆ ಎಂದು ಹೇಳಿದರು. “ಅನುರಾಗ್ ಠಾಕೂರ್ ಅವರು ನನ್ನನ್ನು ಅವಮಾನಿಸಿದ್ದಾರೆ, ಅವರು ನನ್ನನ್ನು ನಿಂದಿಸಿದ್ದಾರೆ, ಆದರೆ ನಾನು ಅವರಿಂದ ಕ್ಷಮೆಯನ್ನು ಬಯಸುವುದಿಲ್ಲ. ನನಗೆ ಅವರ ಕ್ಷಮೆ ಬೇಡವೂ ಬೇಡ. ನಾನು ಯುದ್ಧ ಮಾಡುತ್ತಿದ್ದೇನೆ ಮತ್ತು ನಾನು ಅದನ್ನು ಮುಂದುವರಿಸುತ್ತೇನೆ. ನೀವು ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಿ. ನನಗೆ ನಿಮ್ಮ ಕ್ಷಮೆಯಾಚನೆ ಬೇಡ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:34 pm, Tue, 30 July 24