Rain Updates: ವ್ಯಾಪಕ ಮಳೆಯಿಂದ ಮಹಾರಾಷ್ಟ್ರ, ಗುಜರಾತ್ನಲ್ಲಿ ರೆಡ್ ಅಲರ್ಟ್ ಘೋಷಣೆ; ಕರ್ನಾಟಕದಲ್ಲೂ ಪ್ರವಾಹ ಭೀತಿ
Monsoon 2022: ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಹೆಚ್ಚಾಗುತ್ತಲೇ ಇದೆ. ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗಲಿದೆ. ಕರ್ನಾಟಕದ ವಿವಿಧೆಡೆ ಜುಲೈ 19ರವರೆಗೂ ಮಳೆ ಮುಂದುವರಿಯಲಿದೆ.
ಬೆಂಗಳೂರು: ಮಳೆಯ ಆರ್ಭಟದಿಂದ ಮಹಾರಾಷ್ಟ್ರ, ತೆಲಂಗಾಣ (Telangana Rains), ದೆಹಲಿ (Delhi Rain), ಗುಜರಾತ್ (Gujarat Flood), ಕೇರಳ, ಕರ್ನಾಟಕದಲ್ಲಿ (Karnataka Rains) ಜನಜೀವನ ಅಸ್ತವ್ಯಸ್ತವಾಗಿದೆ. ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕಳೆದ ಒಂದು ವಾರದಿಂದ ನಿಲ್ಲದೆ ಒಂದೇ ಸಮನೆ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರ, ಗುಜರಾತ್ನ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಿಂದ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮುಂದುವರೆದ ಮಹಾಮಳೆಯಿಂದ ವೇದಗಂಗಾ , ದೂದಗಂಗಾ ನದಿ ತುಂಬಿ ಹರಿಯುತ್ತಿದೆ. 27 ಸಾವಿರ ಕ್ಯೂಸೆಕ್ ಗಿಂತ ಅಧಿಕ ಒಳಹರಿವು ಉಂಟಾಗಿದ್ದು, ನೂರಾರು ಏಕರೆ ಕಬ್ಬು ಬೆಳೆ ಜಲಾವೃತವಾಗಿದೆ. ಸದಲಗಾ ಮಹಾರಾಷ್ಟ್ರ ದ ಇಚ್ಚಲಕರಂಜಿ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ ಹಂತದಲ್ಲಿದೆ. ಈಗಾಗಲೇ ಚಿಕ್ಕೋಡಿ ಉಪವಿಭಾಗದ ಸಂಪರ್ಕ ಕಲ್ಪಿಸುವ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸದಲಗಾ – ಬೋರಗಾಂವ ಸೇತುವೆ ಮುಳುಗಡೆಯಾಗಿದೆ.
ಕರ್ನಾಟಕದಲ್ಲಿ 5 ದಿನ ಮಳೆ: ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಹೆಚ್ಚಾಗುತ್ತಲೇ ಇದೆ. ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗಲಿದೆ. ಕರ್ನಾಟಕದ ವಿವಿಧೆಡೆ ಜುಲೈ 19ರವರೆಗೂ ಮಳೆ ಮುಂದುವರಿಯಲಿದೆ. ಇಂದು ಮತ್ತು ನಾಳೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವೆಡೆ ಇಂದು ವ್ಯಾಪಕ ಮಳೆ ಸುರಿಯುವ ಸಂಭವವಿದೆ. ಹೀಗಾಗಿ ಮಲೆನಾಡು, ಕರಾವಳಿಗೆ ಇಂದು ‘ಆರೆಂಜ್ ಅಲರ್ಟ್’ ನೀಡಲಾಗಿದೆ.
ಇದನ್ನೂ ಓದಿ: Kodagu Rain: ಕೊಡಗು ಜಿಲ್ಲೆಯಾದ್ಯಂತ ವರುಣಾರ್ಭಟ: 15 ದಿನಗಳಲ್ಲಿ ಧರೆಗುರುಳಿದ 650 ವಿದ್ಯುತ್ ಕಂಬಗಳು
ಬೆಳಗಾವಿ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಮುಂದಿನ ಮೂರು ದಿನ ಮತ್ತು ಕಲಬುರಗಿ ವಿವಿಧ ಪ್ರದೇಶಗಳಲ್ಲಿ ಒಂದು ದಿನ ಭಾರೀ ಮಳೆ ನಿರೀಕ್ಷೆ ಇದೆ. ಹೀಗಾಗಿ, ಈ ಎರಡು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ ಸುಮಾರು 45-55 ಕಿಲೋ ಮೀಟರ್ ಇರಲಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರದ ಕೆಲವೆಡೆ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಹಾವೇರಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಸಹ ಸಾಧಾರಣದಿಂದ ಭಾರೀ ಮಳೆ ಸುರಿಯಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
Incessant rain in Telangana has led to flooding at several places. Here 11 workers get trapped in heavy inflow at Nirmal. All were rescued during the day. @TheQuint pic.twitter.com/Ma4Xwi1e8t
— Nikhila Henry (@NikhilaHenry) July 13, 2022
ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ಘೋಷಣೆ: ಇಂದು ಮಹಾರಾಷ್ಟ್ರದ ಪಾಲ್ಘರ್, ಪುಣೆ ಮತ್ತು ಸತಾರಾ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಪ್ರಮುಖ ನದಿಗಳಾದ ವೈತರ್ಣಾ ಮತ್ತು ತಾನ್ಸಾ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಮುಂಬೈ, ಥಾಣೆ, ರಾಯಗಢ, ರತ್ನಗಿರಿ, ಸಿಂಧುದುರ್ಗ, ನಾಸಿಕ್, ಕೊಲ್ಲಾಪುರ, ಅಕೋಲಾ, ಅಮರಾವತಿ, ಭಂಡಾರಾ, ಬುಲ್ಧಾನ, ಚಂದ್ರಾಪುರ, ಗಡ್ಚಿರೋಲಿ, ಗೊಂಡಿಯಾ, ನಾಗ್ಪುರ, ವಾರ್ಧಾ, ವಾಶಿಮ್ ಮತ್ತು ಯವತ್ಮಾಲ್ನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
Maharashtra | The road connecting Maharashtra and Telangana was inundated due to the rising level of Wardha river. Flood-like situation in several parts of Chandrapur city (14.07) pic.twitter.com/osyOMlB1KH
— ANI (@ANI) July 15, 2022
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಟ್ಟು 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಮತ್ತು 6 ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು (ಎಸ್‌ಡಿಆರ್‌ಎಫ್) ನಿಯೋಜಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಬಹುತೇಕ ಎಲ್ಲಾ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಜಲಾವೃತ ಉಂಟಾಗಿದೆ. ಇಂದು ಪಾಲ್ಘರ್ ಜಿಲ್ಲೆ, ಪುಣೆ ಮತ್ತು ಸತಾರಾದಲ್ಲಿ ಆರೆಂಜ್ ಅಲರ್ಟ್ ನೀಡಿದೆ.
ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ; ಹವಾಮಾನ ಇಲಾಖೆ
ಇಂದು ಮುಂಬೈ, ಥಾಣೆ, ರಾಯಗಡ್, ರತ್ನಗಿರಿ, ಸಿಂಧುದುರ್ಗ, ನಾಸಿಕ್, ಕೊಲ್ಲಾಪುರ, ಅಕೋಲಾ, ಅಮರಾವತಿ, ಭಂಡಾರಾ, ಬುಲ್ಧಾನ, ಚಂದ್ರಾಪುರ, ಗಡ್ಚಿರೋಲಿ, ಗೊಂಡಿಯಾ, ನಾಗ್ಪುರ, ವಾರ್ಧಾ, ವಾಶಿಮ್ ಮತ್ತು ಯವತ್ಮಾಲ್ನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಲಾತೂರ್ ಜಿಲ್ಲೆಯಲ್ಲಿ ಮಳೆಯ ಮುನ್ಸೂಚನೆ ಮತ್ತು ಪ್ರವಾಹದ ಸಾಧ್ಯತೆಯಿಂದಾಗಿ ಅಧಿಕಾರಿಗಳು ಇನ್ನೆರಡು ದಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಗುಜರಾತ್ನಲ್ಲಿ ಪ್ರವಾಹ ಭೀತಿ: ಗುಜರಾತ್ನ ಸೂರತ್, ಜುನಾಗಢ್, ಗಿರ್, ಭಾವನಗರ, ತಾಪಿ, ದಂಗ್, ವಲ್ಸಾದ್ ಮತ್ತು ನವಸರ್ ಎಂಬ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರದ ಎರಡು ಅಣೆಕಟ್ಟುಗಳಿಂದ (ಮೋದಕ್ ಸಾಗರ್ ಮತ್ತು ತಾನ್ಸಾ) ನೀರು ತುಂಬಿ ಹರಿಯುತ್ತಿರುವುದರಿಂದ ಪೂರ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
A total of 14 NDRF teams and 6 SDRF have been deployed due to the rains in Maharashtra. The death toll has reached 99 after 4 people died in the last 24 hours; 181 animals have died. 7,963 people shifted to a safer place: Maharashtra Disaster Management
— ANI (@ANI) July 15, 2022
ತೆಲಂಗಾಣದಲ್ಲೂ ಮಳೆಯ ಆರ್ಭಟ: ತೆಲಂಗಾಣದಲ್ಲಿ, ರಾಜ್ಯದ ಭದ್ರಾಚಲಂ ಪಟ್ಟಣದಲ್ಲಿ ಗೋದಾವರಿ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟವನ್ನು ಎದುರಿಸಲು ಅಧಿಕಾರಿಗಳು ಗುರುವಾರ ಸಜ್ಜಾಗಿರುವುದರಿಂದ 20,000ಕ್ಕೂ ಹೆಚ್ಚು ಜನರನ್ನು ವಿವಿಧ ಸ್ಥಳಗಳಲ್ಲಿ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಭಾರೀ ಮಳೆಯ ನಂತರ ಭದ್ರಾದ್ರಿ-ಕೋತಗುಡೆಂ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಹಲವಾರು ಪ್ರದೇಶಗಳು ಜಲಾವೃತವಾಗಿವೆ.
ಆಂಧ್ರ ಪ್ರದೇಶದಲ್ಲಿ ಪ್ರವಾಹ ಭೀತಿ:
ಆಂಧ್ರಪ್ರದೇಶದ ಇಲೂರು ಜಿಲ್ಲೆ, ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭಾರೀ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಹೆಲಿಕಾಪ್ಟರ್ ಮೂಲಕ ಜನರಿಗೆ ಆಹಾರ ಸಾಮಗ್ರಿ, ಮೆಡಿಸಿನ್ ,ಬಟ್ಟೆ ಏರ್ ಡ್ರಾಪ್ ಮಾಡಲಾಗಿದೆ. ಹೊರ ಜಗತ್ತಿನ ಜೊತೆ ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ಆಹಾರ ಸಾಮಗ್ರಿ ಏರ್ ಡ್ರಾಪ್ ಮಾಡಲಾಗಿದೆ. ಇಂದು ಕೂಡ ರಾಜಮಂಡ್ರಿ, ವಿಶಾಖಪಟ್ಟಣ ಏರ್ ಬೇಸ್ ನಿಂದ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಲಾಗಿದೆ. ಹೆಲಿಕಾಪ್ಟರ್ ಮೂಲಕ ಜನರ ರಕ್ಷಣೆ, ನೆರವು ನೀಡಲಾಗಿದೆ.
Published On - 11:11 am, Fri, 15 July 22